

ಸಿದ್ದಾಪುರ ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಾಲಯದ ಹತ್ತಿರ ವಿದ್ಯುತ್ ಕಂಬ ಹಾಗೂ ಒಮಿನಿ ಮೇಲೆ ಮರ ಬಿದ್ದು ವಿದ್ಯುತ್ ಕಂಬ ಮುರಿದಿದ್ದು.ಒಮಿನಿಯಲ್ಲಿ ಇದ್ದ ಮಗುವಿಗೆ ಸ್ವಲ್ಪ ಪೆಟ್ಟಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವಾಹನ ಸಿದ್ಧಾಪುರ ಕಾನಸೂರು ಭಾಗದವರದಾಗಿದ್ದು ಕಬ್ಬಣದ ಶೀಟ್ ಖರೀದಿಗೆ ಬಂದಿದ್ದ ಈ ವಾಹನ ನಗರದಿಂದ ಮರಳುವ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಅಮೃತ ಭಾರತಿಗೆ….ಭಾರತದ 75 ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ ವನ್ನು ದಿ: ೨೫-೬-೨೦೨೨ ರಂದು ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ. ಸಿದ್ದಾಪುರ ತಾಲೂಕಿನಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಈ ಬಗ್ಗೆ ಅವರಿಗೆ ಗೌರವ ಸೂಚಕವಾಗಿ ದಿನಾಂಕ: ೨೧-೬-೨೦೨೨ ರಂದು ಮಾವಿನಗುಂಡಿಯ ಮಹಿಳಾ ಸ್ಮಾರಕದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಕಾರ್ಯಕರ್ತೆ ಯರಿಂದ ಮಹಿಳಾ ಸತ್ಯಾಗ್ರಹ ಎಂಬ ಕಿರು ನಾಟಕ ಪ್ರದರ್ಶನ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ತಹಶಿಲ್ದಾರ ಸಂತೋಷ ಭಂಡಾರಿ, ಸಿಡಿಪಿಓ ಶ್ರೀಮತಿ ಸುಶೀಲಾ ಮೊಗೆರ,ಕೃಷಿ ಸಹಾಯಕ ನಿರ್ದೇಶಿಕಿ ಸುಮಾ ಎಸ್.ಎಮ್. ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾ.ಪಂ.ಸದಸ್ಯರಾದ ಶ್ರೀ ಜಯಂತ ಈರಪ್ಪ ನಾಯ್ಕ ,ಉಪ ತಹಶೀಲ್ದಾರ ಡಿ.ಎಮ್.ನಾಯ್ಕ,ಗ್ರಾ.ಲೆ ಗೋವಿಂದ ರಾಠೋಡ ಹಾಗೂ ಸಾರ್ವಜನಿಕರು ಉಪಸ್ಥಿತರಿ ದ್ದರು


