local news-ಕಾಣೆಯಾಗಿದ್ದಾರೆ & ಕಲ್ಲೂರಿಗೆ ಜಿಲ್ಲಾ ಮಟ್ಟದ ಸ್ವಚ್ಚ ವಿದ್ಯಾಲಯ ಪುರಸ್ಕಾರ

ದೈವಜ್ಞ ಕ್ರೆಡಿಟ್ ಕೋ” ಅಪರೇಟಿವ್ ಸೊಸೈಟಿ ದಾವಣಗೆರೆ ಯ ರಜತ ಮಹೋತ್ಸವ ದ ನೂತನ ಕಟ್ಟಡ ಉದ್ಘಾಟನೆಯ ಅಂಗವಾಗಿ ಆಯೋಜಿಸಿರುವ ಅಖಿಲ ಕರ್ನಾಟಕ ನೃತ್ಯ ಸ್ಪರ್ಧೆಯಲ್ಲಿ ಸಿದ್ದಾಪುರ ದೈವಜ್ಯ ಸಮಾಜದ ಶ್ರೀ ರಾಜ ರಾಜೇಶ್ವರಿ ಮಹಿಳಾ ಮಂಡಳಿಯವರು ಪ್ರದರ್ಶಿಸಿದ ಪೌರಾಣಿಕ ನೃತ್ಯ ರೂಪಕ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಪ್ರಶಸ್ತಿಯನ್ನು ಮುಡಿಗೆರಿಸಿಕೊಂಡಿದೆ ಮಹಿಳಾ ಮಂಡಳಿಯು ಈ ಹಿಂದೆಯೂ ಶಿವಮೊಗ್ಗ ದಲ್ಲಿ ಪ್ರಥಮ ಸ್ಥಾನ ಪಡೆದಿತ್ತು.





ಜಿಲ್ಲಾ ಪ್ರಶಸ್ತಿಗೆ ಕಲ್ಲುರು ಶಾಲೆ ಹರ್ಷ.- ಸಿದ್ದಾಪುರ, ಸ್ಥಳೀಯ ಸ ಹಿ ಪ್ರಾ ಶಾಲೆ ಕಲ್ಲುರು ಶಾಲೆಗೆ 2021..22 ನೆ ಸಾಲಿನ. ಜಿಲ್ಲಾ ಮಟ್ಟದ ಸ್ವಚ್ಚ ವಿದ್ಯಾಲಯ ಪುರಸ್ಕಾರ ದೊರೆತಿದ್ದು. ಪ್ರಶಸ್ತಿಯನ್ನು ಶಾಲಾ ಮುಖ್ಯ ಶಿಕ್ಷಕ ಶ್ರೀಕಾಂತ ಬಿ ನಾಯ್ಕ ಕಾರವಾರದ ಮಾನ್ಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪಡೆದು ಕೊಂಡರು. ಶಾಲೆಗೆ ಬಂದಿರುವ ಈ ಪ್ರಶಸ್ತಿಗೆ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ಷೇತ್ರ ಸಮನ್ವಯಧಿಕಾರಿಗಳು,ಅಧ್ಯಕ್ಷರು ಪ್ರಾ ಶಿ ಸಂಘ ಸಿದ್ದಾಪುರ sdmcಯವರು ,ಶಾಲಾ ಶಿಕ್ಷಕರು, ಗ್ರಾಮಸ್ಥರು ಹರ್ಷ ವ್ಯಕ್ತ ಪಡಿಸಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
🙏ಈ ದಿವಸ ದಿನಾಂಕ 30- 6- 2022 ರಂದು ಸಂಜೆ 04:00 ಗಂಟೆಗೆ ಶ್ರೀ ಕಿರಣ್ ಶಂಕರ ನಾಯ್ಕ್ ಸಾ ll ಗುಡ್ಡೆಕೇರಿ ಹೊಸೂರು ತಾll ಸಿದ್ದಾಪುರ ಇವರು ಠಾಣೆಗೆ ಹಾಜರಾಗಿ ತನ್ನ ಅಣ್ಣ ಮಹೇಶ್ ಶಂಕರ್ ನಾಯ್ಕ್ ಪ್ರಾಯ 24 ವರ್ಷ ಈತನು ದಿನಾಂಕ 30-06- 2022 ರಂದು ಬೆಳಗ್ಗೆ 4 ಗಂಟೆ ಸುಮಾರಿಗೆ ಮನೆಯ ಮುಂದಿನ ಬಾಗಿಲಿಗೆ ಚಾವಿ ಹಾಕಿ ಮನೆಯ ಮೆಟ್ಟಿಲ ಮೇಲೆ ಏನೇನೋ ಬರೆದು ಚೀಟಿ ಇಟ್ಟು ಹೋಗಿದ್ದಾನೆ ಎಲ್ಲಾ ಕಡೆ ಹುಡುಕಾಡಿದೆವು.
ಅಜ್ಜಿಯ ಮನೆಗೆ ಫೋನ್ ಮಾಡಿ ಕೇಳಿದಾಗ ಅಲ್ಲಿಯು ಬಂದಿಲ್ಲ ವಾಗಿ ತಿಳಿಸಿದರು ಕೋಲ ಸಶಿರ್ಸಿಗೆ ಹೋಗಿ ತಮ್ಮ ಸಂಬಂಧಿಕರೊಂದಿಗೆ ಎಲ್ಲಾ ಕಡೆ ಈವರೆಗೆ ಹುಡುಕಾಡಿದರೂ ನನ್ನ ಅಣ್ಣನ ಬಗ್ಗೆ ಯಾವುದೇ ಸುಳಿವು ಸಿಕ್ಕಿರುವುದಿಲ್ಲ ಈವರೆಗೆ ಮನೆಗೆ ಬಾರದೆ ಎಲ್ಲಿ ಹೋಗಿ ಕಾಣೆಯಾಗಿದ್ದಾರೆ ಹುಡುಕಿ ಕೊಡಬೇಕೆಂದು ಸ್ವೀಕರಿಸಿಕೊಂಡು ಪಿಎಸ್ಐ ಮಾಂತಪ್ಪ ಜಿ ಕುಂಬಾರ್ ರವರು ಸಿದ್ದಾಪುರ ಪೊಲೀಸ್ ಠಾಣೆ ನಂಬರ್ 115/ 2022 ಕಲಂ ಮನುಷ್ಯ ಕಾಣೆ ನೇದರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಕಾಣೆಯಾದ ವ್ಯಕ್ತಿಯ ವಿವರ ಈ ಕೆಳಗಿನಂತಿರುತ್ತದೆ ಮಾತನಾಡುವ ಭಾಷೆ ಕನ್ನಡ ಎತ್ತರ 5.6 ಮೈಬಣ್ಣ ಸಾದಾ ಕಪ್ಪು ದುಂಡು ಮುಖ ಅಗಲವಾದ ಹಣೆ ದಪ್ಪ ಮೂಗು ಸ್ವಲ್ಪ ದಾಡಿ ಬಿಟ್ಟಿದ್ದಾನೆ ಬಲಗೈ ಮುಂಗೈ ಮೇಲೆ ಹಚ್ಚೆ ಹಾಕಿದ್ದು ಹೋಗುವಾಗ ನೇರಳೆ ಬಣ್ಣದ ಚೌಕಳಿ ತೋಳಿನ ಶರ್ಟ್ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರು ತ್ತಾನೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *