ಬರೆದಂತೆ ಬದುಕಿದ ಹಿರಿಯ ಪ್ರರ್ತಕರ್ತ ದಿ.ರವೀಂದ್ರ ಭಟ್ಟ ಬಳಗುಳಿ ಜು.೬ ರಂದು ಬರಹ-ಬದುಕು-ಬದ್ಧತೆಯ ಸ್ಮರಣೆ, ಸನ್ಮಾನ ಕಾರ್ಯಕ್ರಮ


ಸಿದ್ದಾಪುರ; ತಾಲೂಕಿನ ಹಿರಿಯ ಪತ್ರಕರ್ತರಾದ ದಿ.ರವೀಂದ್ರ ಭಟ್ ಬಳಗುಳಿ ಅವರ ನೆನಪಿನ ಕಾರ್ಯಕ್ರಮ ಸ್ಥಳೀಯ ಆಧಾರ ಸಂಸ್ಥೆಯ ಸಂಐೋಜನೆಯಲ್ಲಿ ನಗರದ ಬಾಲಭವನದಲ್ಲಿ ಜು.೬ ರಂದು ಮಧ್ಯಾಹ್ನ ೩-೦೦ ಗಂಟೆಯಿಂದ ನಡೆಯಲಿದೆ. ದಿ.ರವೀಂದ್ರ ಭಟ್ಟ ಬಳಗುಳಿ ಬರೆದಂತೆ ಬದುಕಿತ ಪತ್ರಕರ್ತರು. ಅವರ ಬರಹ- ಬದುಕು- ಬದ್ಧತೆಯ ಸ್ಮರಣೆ ನಡೆಯಲಿದೆ. ಇದೇ ಸಂದರ್ಭದಲ್ಲಿ ತಾಲೂಕಿನ ಹಿರಿಯ ಪತ್ರಕರ್ತರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದು ಆಧಾರ ಸಂಸ್ಥೆಯ ಅಧ್ಯಕ್ಷರಾದ ನಾಗರಾಜ ನಾಯ್ಕ ಮಾಳ್ಕೋಡ ತಿಳಿಸಿದ್ದಾರೆ.
ಈ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ನವೆಂಬರ್‌ನಲ್ಲಿ ಅನಾರೋಗ್ಯದಿಂದ ಅಕಾಲಿಕವಾಗಿ ನಿಧನರಾಗಿದ್ದ ರವೀಂದ್ರ ಭಟ್ಟ ಬಳಗುಳಿ ಅವರೊಂದಿಗೆ ನಮ್ಮ ಸಂಸ್ಥೆಗೆ ಮತ್ತು ನಮಗೆ ಆತ್ಮೀಯವಾದ ಸಂಬಂಧ ಇತ್ತು. ಅವರು ಸಂಸ್ಥೆಯ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು.ನಂತರದಲ್ಲಿ ಕಾನೂನು ಸಲಹೆಗಾರರಾಗಿದ್ದು ಮಾರ್ಗದರ್ಶನ ಮಾಡಿದ್ದರು.


ಮೂರು ದಶಕಗಳಿಗೂ ಹೆಚ್ಚು ಕಾಲ ಪತ್ರಕರ್ತರಾಗಿದ್ದ ಅವರು ಸುಮಾರು ೩೧ ವರ್ಷಗಳಿಂದ ಪ್ರಜಾವಾಣಿ ಪತ್ರಿಕೆಯ ತಾಲೂಕ ವರದಿಗಾರರಾಗಿದ್ದರು. ಅತ್ಯುತ್ತಮ ಬರಹಗಾರರಾಗಿ, ವಕೀಲ ವೃತ್ತಿಯಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದರು.ತಾಲೂಕ ಪತ್ರಕರ್ತರ ಸಂಘದ ಎರಡು ಅವಧಿಗೆ ಅಧ್ಯಕ್ಷರಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಮಗೇಗಾರಿನ ಗಣಪತಿ ದೇವಾಲಯದ ಮೋಕ್ತೇಶ್ವರರಾಗಿ ಸೇವೆ ಸಲ್ಲಿಸಿದ್ದರು.ಹೀಗೆ ಸಾಮಾಜಿಕ, ಧಾರ್ಮಿಕವಾಗಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿದ್ದರು.
ತಮ್ಮ ಬರಹಗಳಲ್ಲಿ ನಿಖರತೆಯನ್ನು ಹೊಂದಿದ್ದ ಅವರು ತಾಲೂಕಿನಲ್ಲಿ ಅನೇಕ ರಚನಾತ್ಮಕ, ಅಭಿವೃದ್ಧಿಪರವಾದ ಸುದ್ದಿಗಳನ್ನು ಮಾಡುವ ಮೂಲಕ ಪತ್ರಿಕೆಯಲ್ಲಿ ಬೆಳಕು ಚೆಲ್ಲಿದ್ದರು. ಸ್ನೇಹ ಜೀವಿಯಾದ ರವೀಂದ್ರ ಭಟ್ಟ ಮೃದು ಮಾತು, ಆಳವಾದ ಅಧ್ಯಯನ, ಶಿಸ್ತಿನ ಸರಳವಾದ ಜೀವನ ನಡೆಸಿದ್ದರು. ತನ್ನ ಬರಹದಲ್ಲಿ ವಿಶೇಷವಾಸ ಶೈಲಿಯನ್ನು ರೂಢಿಸಿಕೊಂಡಿದ್ದ ಇವರು ಯಾರನ್ನೂ ಟೀಕಿಸುತ್ತಿರಲಿಲ್ಲ. ಸಮಾಜಕ್ಕೆ ಉತ್ತಮ ಸಂದೇಶವನ್ನು ಬಿತ್ತುವ ರೀತಿಯಲ್ಲಿ ತನ್ನ ಕಾಯಕವನ್ನು ಪ್ರೀತಿಯಿಂದ ನಿರ್ವಹಿಸುಯತ್ತಿದ್ದರು.ಇವೆಲ್ಲವು ಕೂಡ ಇಂದಿನ ಸಮಾಜಕ್ಕೆ ಮಾದರಿಯಾಗಿದೆ. ಇಂತಹ ಆದರ್ಶ ವ್ಯಕ್ತಿತ್ವದ, ಅಪರೂಪದ ಪತ್ರಕರ್ತರನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಭಾವಿಸಿದ್ದೇವೆ. ಈ ಕಾರ್ಯಕ್ರಮದ ಮೂಲಕ ಅವರನ್ನು ಇನ್ನಷ್ಟು ಪರಿಚಯಿಸುವ, ನೆನಪಿಸಿಕೊಳ್ಳು ಒಂದು ಪುಟ್ಟ ಪ್ರಯತ್ನ ಇದಾಗಿದೆ. ಈ ಕಾರ್ಯಕ್ರಮಕ್ಕೆ ದಿ.ರವೀಂದ್ರ ಭಟ್ಟ ಬಳಗುಳಿಯವರ ಅಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮತ್ತೊಮ್ಮೆ ಅವರ ನೆನಪಿಸುವ ಕಾರ್ಯದಲ್ಲಿ ಭಾಗಿಗಳಾಗಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇವೆ ಎಂದರು.ಈ ಸಂದರ್ಭದಲ್ಲಿ ಪ್ರಶಾಂತ ಡಿ.ಶೇಟ್, ಟಿ.ಕೆ.ಎಂ.ಆಜಾದ, ಪ್ರಶಾಂತ ನಾಯ್ಕ ಉಪಸ್ಥಿತರಿದ್ದರು.

https://www.youtube.com/watch?v=5o3h3H7WV9Q&t=74s
…………

….
ಕಾರ್ಯಕ್ರಮ; ಅಂದು ಮಧ್ಯಾಹ್ನ ೩-೦೦ ಗಂಟೆಯಿಂದ ನಡೆಯುವ ಕಾರ್ಯಕ್ರಮದಲ್ಲಿ ದಿ.ರವೀಂದ್ರ ಭಟ್ಟ ಬಳಗುಳಿಯವರ ಬರಹಗಳ ಕುರಿತಾಗಿ ಪ್ರಜಾವಾಣಿ ಪತ್ರಿಕೆಯ ಕಾರ್ಯನಿವಾಹಕ ಸಂಪಾದಕರಾದ ರವೀಂದ್ರ ಭಟ್ಟ ಐನಕೈ ಮಾತನಾಡಲಿದ್ದಾರೆ. ಅವರ ಬದುಕಿನ ಕುರಿತಾಗಿ ಅವರ ಸಹೋದರ ಹಿರಿಯ ಪತ್ರಕರ್ತರು,ಸುದ್ಧಿ ಟಿವಿ ಪ್ರಧಾನ ಸಂಪಾದಕರಾದ ಶಶಿಧರ ಭಟ್ಟ ಮಾತನಾಡುವರು. ಅವರ ಬದ್ಧತೆಯ ಕುರಿತಂತೆ ಸಮಾಜಮುಖಿ ಪತ್ರಿಕೆ ಸಂಪಾದಕರಾದ ಕನ್ನೇಶ ನಾಯ್ಕ ಕೋಲಶಿರ್ಸಿ ಅವರು ಮಾತನಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಧಾರ ಸಂಸ್ಥೆಯ ಅಧ್ಯಕ್ಷರಾದ ನಾಗರಾಜ ನಾಯ್ಕ ಮಾಳ್ಕೋಡ ವಹಿಸಲಿದ್ದಾರೆ.
………..


ಗೌರವ ಸನ್ಮಾನ; ಕಾರ್ಯಕ್ರಮದಲ್ಲಿ ತಾಲೂಕಿನಲ್ಲಿ ಈ ಹಿಂದೆ ಪತ್ರಕರ್ತರಾಗಿ ಕಾರ್ಯನಿರ್ವಹಿಸಿರುವ ನಾಲ್ವರು ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ. ಈ ಹಿಂದೆ ಪ್ರಜಾವಾಣಿ ಪತ್ರಿಕೆಯ ವರದಿಗಾರರರಾಗಿ ಕಾರ್ಯನಿರ್ವಹಿಸಿರುವ ನಿವೃತ್ತ ಶಿಕ್ಷಕರಾದ, ಸಹಕಾರಿ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಬಿ.ಬಿ.ನಾಯಕ ಶ್ರೀಸಾಮಾನ್ಯ ಹಾಗೂ ಮುಂಗಾರು ಪತ್ರಿಕೆಯ ವರದಿಗಾರರಾಗಿ, ಕಡಲ ಧ್ವನಿ ಪತ್ರಿಕೆ ಸಂಪಾದಕರಾಗಿ ಕೆಲಸ ಮಾಡಿರುವ ಶಿವಾನಂದ ಹೊನ್ನೆಗುಂಡಿ ಅವರನ್ನು ಸನ್ಮಾನಿಸಲಾಗುತ್ತಿದೆ.

ಮೂರು ದಶಕಗಳ ಕಾಲ ಉದಯವಾಣಿ ಹಾಗೂ ಎರಡು ದಶಕಗಳಿಗೂ ಹೆಚ್ಚು ಸಮಯ ಲೋಕಧ್ವನಿ ದಿನಪತ್ರಿಕೆಯ ವರದಿಗಾರರಾಗಿ ಕೆಲಸ ಮಾಡಿರುವ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರಾದ ಜಿ.ಜಿ.ಹೆಗಡೆ ಬಾಳಗೋಡ . ಮುನ್ನಡೆ ಪತ್ರಿಕೆಯ ಉಪ ಸಂಪಾದಕರಾಗಿ, ಸಂಪಾದಕರಾಗಿ ದೀರ್ಘಕಾಲ ಕಾರ್ಯನಿರ್ವಹಿಸಿರುವ ಅಂಕಣಕಾರರು, ಯಕ್ಷಗಾನ ಅರ್ಥದಾರಿಗಳಾದ ಜಿ.ಕೆ.ಭಟ್ಟ ಕಶಿಗೆ ಅವರುಗಳನ್ನು ಗೌರವಿಸಿ ಸನ್ಮಾನಿಸಲಾಗುತ್ತಿದೆ.

ಬಸವರಾಜ ಹೊರಟ್ಟಿ ಹೇಳಿಕೆ
ಸಿದ್ದಾಪುರ
ಖಾಸಗಿ ಶಾಲಾ,ಕಾಲೇಜುಗಳ ಶಿಕ್ಷಕರಿಗೆ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಯಾವುದೇ ನಿಯಮಾವಳಿಗಳ ಅಡ್ಡಿ ಇರುವದಿಲ್ಲ. ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಶಿಕ್ಷಕರಿಗೆ ಕೆಲವು ಕಡೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ನೋಟೀಸ್ ನೀಡುತ್ತಿರುವದನ್ನು ಕೂಡಲೇ ನಿಲ್ಲಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಅವರು ದೂರವಾಣಿಯ ಮೂಲಕ ತಮ್ಮ ಹೇಳಿಕೆಯನ್ನು ನೀಡಿದ್ದು ಶಿಕ್ಷಕರ ಕ್ಷೇತ್ರದ ಚುನಾವಣೆಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಖಾಸಗಿ ಶಾಲಾ,ಕಾಲೇಜು ಶಿಕ್ಷಕರಿಗೆ ಯಾವುದೇ ನಿರ್ಬಂಧವಿಲ್ಲ. ಕಾನೂನಿನ ಪ್ರಕಾರ ಅವಕಾಶವಿದೆ. ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಶಿಕ್ಷಕರುಗಳಿಗೆ ನೋಟೀಸ್ ನೀಡುವ ಮೂಲಕ ಅವರಿಗೆ ತೊಂದರೆ ನೀಡುತ್ತಿರುವದು ತಿಳಿದುಬಂದಿದೆ. ಈ ಕುರಿತಂತೆ ಡಿ.ಡಿ.ಪಿ.ಐ. ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಬಳಿ ಮಾತನಾಡಿ ನೋಟೀಸ್ ನೀಡುವದನ್ನು ನಿಲ್ಲಿಸುವಂತೆ ತಿಳಿಸಿದ್ದೇನೆ. ಮುಂದೆ ಇದೇ ರೀತಿ ಮುಂದುವರೆದಲ್ಲಿ ಸಂಬಂಧಿಸಿದ ಅಧಿಕಾರಿಗಳ ಬಗ್ಗೆ ಹೋರಾಟ ನಡೆಸಲು ಮುಂದಾಗುವದು ಅನಿವಾರ್ಯ ಎಂದು ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *