



ಶಿವಮೊಗ್ಗ: ಮುಂಗಾರು ಮಳೆಗೆ ಜೋಗ ಜಲಪಾತ ಧುಮ್ಮಿಕ್ಕುತ್ತಿದೆ. ಮಳೆಯ ಜೊತೆ ಮಂಜು ಸಹ ಇಲ್ಲಿ ಪ್ರವಾಸಿಗರನ್ನು ಮುದಗೊಳಿಸುತ್ತಿದೆ. ಇದೊಂದು ರೀತಿಯಲ್ಲಿ ಪ್ರಕೃತಿಯ ಆಟದಂತೆ ಭಾಸವಾಗುತ್ತಿದೆ. ಮಂಜು ಆವರಿಸಿರುವುದರಿಂದ ಪ್ರವಾಸಿಗರಿಗೆ ಜಲಪಾತದ ದರ್ಶನಕ್ಕೆ ಅಡ್ಡಿಯಾಗುತ್ತಿದೆ. ಇನ್ನೊಂದೆಡೆ, ಮಂಜು ಆವರಿಸಿರುವುದನ್ನು ಗಾಳಿ ಬಂದು ತನ್ನೂಡನೆ ಮೆಲ್ಲಗೆ ಕರೆದುಕೊಂಡು ಹೋಗುತ್ತಿರುವ ದೃಶ್ಯವಂತೂ ಮನಮೋಹಕ. (etbk)

