ತಾಲೂಕಿನ ಹಸುವಂತೆ ಮನ್ಮನೆ ಭಾಗದ ವಿದ್ಯಾರ್ಥಿಗಳಿಗೆ ಎದುರಿಸು ತ್ತಿರುವ ಬಸ್ ಸಮಸ್ಯೆ ಸರಿಪಡಿಸುವಂತೆ ಬ್ಲಾಕ್ ಕಾಂಗ್ರೆಸ್ ಹಾಗೂ ಸ್ಥಳೀಯ ಸಾರ್ವಜನಿಕ ರು ಸಿದ್ದಾಪುರ – ಸಾಗರ ಮುಖ್ಯ ರಸ್ತೆಯ ಹಸುವಂತೆ ಬಸ್ ನಿಲ್ದಾಣ ದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು ಈ ವೇಳೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮಾತನಾಡಿ
ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜಿಗೆ ಹೋಗಲು ಅನುಕೂಲವಾಗುವ ನಿಟ್ಟಿನಲ್ಲಿ ಬಸ್ ಪಾಸ್ ನೀಡಿ ಬಸ್ ಬಿಡದೆ ಇದ್ದಲ್ಲಿ ಏನು ಪ್ರಯೋಜನ ಸಮಯಕ್ಕೆ ಸರಿಯಾಗಿ ಬಿಡಲಾಗದಿದ್ದಲ್ಲಿ ಬಸ್ ಪಾಸನ್ನು ರದ್ದುಗೊಳಿಸಿಬಿಡಿ. ನಿಮಗೆ ಕಲೆಕ್ಷನ್ನೆ ಮುಖ್ಯವಾಗಿದ್ದಲ್ಲಿ ಬಸ್ ಪಾಸ್ ರದ್ದುಗೊಳಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ಟಿಕೆಟ್ ಮಾಡಿಬಿಡಿ
ಜನರ ಕಷ್ಟ ಆಲಿಸಲು ನಮ್ಮ ಜಿಲ್ಲೆಯಲ್ಲಿ ಎಂಎಲ್ಎ ಎಂಪಿಗಳು ಇದ್ದು ಇಲ್ಲದಂತಾಗಿದ್ದಾರೆ. ತಾಲೂಕ ಪಂಚಾಯತ್ ಜಿಲ್ಲಾ ಪಂಚಾಯತ್ ವ್ಯವಸ್ಥೆ ಇಲ್ಲವಾಗಿದೆ ಆಡಳಿತರೂಢ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶ ಮಾಡಿದೆ. ಜನರ ಧ್ವನಿಯನ್ನು ಅಡಗಿಸಿಬಿಟ್ಟಿದೆ. ಜನರು ತಮ್ಮ ಸಂಕಷ್ಟಗಳನ್ನು ಯಾರ ಬಳಿ ಹೇಳಿಕೊಳ್ಳಬೇಕಾಗಿದೆ ಎಂದು ತಿಳಿಯದಂತಾಗಿದೆ ಎಂದು ಹೇಳಿದ ಅವರು
ಈ ಮೊದಲು ತಾಲೂಕ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಕೆಡಿಪಿ ಸಭೆಗಳಿಗೆ ಎಲ್ಲಾ ಅಧಿಕಾರಿಗಳು ಬರುತ್ತಿದ್ದರು ಸಭೆಯಲ್ಲಿ ಅಧಿಕಾರಿಗಳಿಗೆ ಸಮಸ್ಯೆ ಕುರಿತು ಹೇಳಿದಾಗ ಸಮಸ್ಯೆ ಬಗೆಹರಿಯುತ್ತಿತ್ತು ಆದರೆ ಇಂದು ತಾಲೂಕ ಪಂಚಾಯತ್ ಹಾಗು ಜಿಲ್ಲಾ ಪಂಚಾಯತ್ ಗಳೇ ಇಲ್ಲದೆ ಇರುವುದರಿಂದ ಸಮಸ್ಯೆಯನ್ನು ಯಾರ ಹತ್ತಿರ ಹೇಳಿಕೊಳ್ಳೋಣ ಈಗಿನ 40% ಸರ್ಕಾರ ಮಾಡಿದ್ದೆ ದರ್ಬಾರ್ ಆಗಿದೆ. ಪ್ರತಿದಿನ ಬೆಲೆ ಏರಿಕೆಯಲ್ಲಿ ತೊಡಗಿದ್ದಾರೆ. ಬಿಜೆಪಿ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ನಾವು ಅಚ್ಚೆ ದಿನ್ ತರುತ್ತೇವೆ ಎಂದು ಹೇಳಿದ್ದರು. ಆದರೆ ಈಗ ರಸ್ತೆಗಳು ಸರಿ ಇಲ್ಲ ರೇಷನ್ ಕಾರ್ಡ್ ಸಿಗುತ್ತಿಲ್ಲ, ಬಸ್ ಪಾಸಿದ್ದು ಮಕ್ಕಳಿಗೆ ಓಡಾಡಲು ಆಗುತ್ತಿಲ್ಲ ತಿನ್ನೋ ಅನ್ನ ಮೊಸರಿನ ಮೇಲೆ ಜಿ ಎಸ್ ಟಿ ಹಾಕಿ ಜನ ಸಾಮಾನ್ಯರನ್ನು ಸಂಕಷ್ಟ ಕ್ಕೆ ತಳ್ಳುತ್ತಿದೆ ಎಂದರು.
ಪೊಲೀಸರು ಪ್ರತಿಭಟನೆ ತಡೆಯಲು ಮುಂದಾದರು ಸಹ ಪ್ರತಿಭಟನೆಕಾರರನ್ನು ಮನವೊಲಿಸಲು ಸಾಧ್ಯವಾಗಲಿಲ್ಲ ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ರಸ್ತೆ ತಡೆದು ಪ್ರತಿಭಟನೆ ನಡೆಸಿ ಡಿಪೋ ವ್ಯವಸ್ಥಾಪಕರು ಬರುವವರೆಗೂ ಇಲ್ಲೇ ಕೂರುತ್ತೇವೆ ಎಂದು ಬಿಗಿ ಪಟ್ಟು ಹಿಡಿದು ಕೇಂದ್ರ ರಾಜ್ಯ ಸರಕಾರ ದ ವಿರುದ್ಧ ಘೋಷಣೆ ಕೂಗಿದರು.
ತಹಸೀಲ್ದಾರ್ ಸಂತೋಷ ಭಂಡಾರಿ ಯವರು ಸ್ಥಳಕ್ಕೆ ಆಗಮಿಸಿ ಪ್ರತಿಭಟನ ಕಾರರ ಸಮಸ್ಯೆ ಆಲಿಸಿ ನಿಯಂತ್ರಣಾಧಿಕಾರಿಗಳ ಜೊತೆ ಮಾತನಾಡಿ ಬಸ್ ಸಮಸ್ಯೆ ಸರಿಪಡಿಸಿ ವಿದ್ಯಾರ್ಥಿಗಳಿಗೆ ತೊಂದರೆ ಆಗದ ರೀತಿಯಲ್ಲಿ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು ತಹಸೀಲ್ದಾರ್ ರವರ ಭರವಸೆ ನಂತರ ಪ್ರತಿಭಣನಕಾರರು ಪ್ರತಿಭಟನೆ ಕೈ ಬಿಟ್ಟರು ನಂತರ ಸ್ಥಳಕ್ಕೆ ಘಟಕ ವ್ಯವಸ್ಥಾಪಕ ಸರ್ವೇಶ್ ಭೇಟಿ ನೀಡಿ ವ್ಯವಸ್ಥೆ ಸರಿಪಡಿಸುವುದಾಗಿ ಲಿಖಿತ ಭರವಸೆ ನೀಡಿದರು.