

ಸಿದ್ದಾಪುರ:- ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿ ಯು ವಿದ್ಯಾರ್ಥಿ ದೊಡ್ಮನೆಯ ಭರತ್ ರಾಮನಾಥ ಹೆಗಡೆ ಗುಜರಾತಿನಲ್ಲಿ ನಡೆದ 23 ನೇ ರಾಷ್ಟ್ರೀಯ ಚೆಸ್ ಚಾಂಪಿಯನ್ಶಿಪ್ನಲ್ಲಿ ಪ್ರಥಮ ಸ್ಥಾನ ಪಡೆದು ಪೋಲಂಡ್ ನಲ್ಲಿ ನಡೆಯುವ ಅಂತರಾಷ್ಟ್ರೀಯ ಚೆಸ್ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿದ್ದಾನೆ.
ಈತನು ಲತಾ ಹೆಗಡೆ ಮತ್ತು ರಾಮನಾಥ ಹೆಗಡೆಯವರ ಪುತ್ರ. ಇತನ ಸಾಧನೆಗೆ ತಂದೆ ತಾಯಿ, ಶಿಕ್ಷರು, ತಾಲೂಕಿನ ಜನತೆ ಹರ್ಷ ವ್ಯಕ್ತಪಡಿಸಿ, ಶುಭ ಹಾರೈಸಿದ್ದಾರೆ.

ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ : ಸಿದ್ದಾಪುರ ಪಟುಗಳ ಸಾಧನೆ*
ಸಿದ್ದಾಪುರ : ಕಲ್ಕತ್ತಾದ ನೇತಾಜಿ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಆರನೇ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಸಿದ್ದಾಪುರ ತಾಲೂಕಿನ ರಾಠೋಡ ಕರಾಟೆ ತರಬೇತಿ ಕೆಂದ್ರದ ವಿದ್ಯಾರ್ಥಿಗಳು ಭಾಗವಹಿಸಿ ನಾಲ್ಕು ಪದಕಗಳನ್ನು ಗೆದ್ದು ಸಾಧನೆಗೈದಿದ್ದಾರೆ.
ಸುಮಾರು 10 ದೇಶಗಳಿಂದ ೪೮೦೦ ಕ್ಕೂ ಹೆಚ್ಚು ಕರಾಟೆ ಪಟುಗಳು ಭಾಗವಹಿಸಿದ್ದ ಚಾಂಪಿಯನ್ ಶಿಪ್ ನಲ್ಲಿ ತಾಲೂಕಿನ ಕರಾಟೆ ತರಬೇತಿ ಕೇಂದ್ರದ ಆನಂದ ಕೆ ನಾಯ್ಕ ಕಟ್ಟಾ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ವಿದ್ಯಾರ್ಥಿಗಳಾದ ಅಜಿತ್ ಕೊಡಿಯ ಬೆಳ್ಳಿ ಮತ್ತು ಕಂಚಿನ ಪದಕ ಮತ್ತು ಜಯಂತ ಎಮ್ ನಾಯ್ಕ ಕಂಚಿನ ಪದಕ ವನ್ನು ಪಡೆದರು. ಇವರ ಸಾಧನೆಗೆ ತಾಲೂಕಿನ ಗಣ್ಯರುಗಳು ಸಂತಸ ವ್ಯಕ್ತಪಡಿಸಿದರು.


