

ಸಿದ್ದಾಪುರ ತಾಲೂಕಿನತಂಡಾಗುಂಡಿ ಗ್ರಾಮ ಪಂಚಾಯತ್ ಹುಕ್ಕಳಿ ಗ್ರಾಮದ ಗುಂಡಿಗದ್ದೆ ಫಾಲ್ಸ್ ಗೆ ಕೋಲಾರದಿಂದ ಬಂದಿದ್ದ ೧೪ ಜನ ಪ್ರವಾಸಿಗರಲ್ಲಿ ಒಬ್ಬ ಪ್ರವಾಸಿ ಕಾಲುಜಾರಿ ಬಿದ್ದು ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಪೊಲೀಸ್ ಮೂಲಗಳು ತಿಳಿಸಿದ್ದು ಇಂದು ಮಧ್ಯಾ ಹ್ನ ಜಲಪಾತ ವೀಕ್ಷಣೆಗೆ ಬಂದಿದ್ದ ೧೪ ಜನರಲ್ಲಿ ಕೋಲಾರ್ ಜಿಲ್ಲೆಯ ವಡಗೇರಿಯ ೩೨ ವರ್ಷದ ಯುವಕ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಮರಣಹೊಂದಿರುವ ಬಗ್ಗೆ ಖಚಿತಪಡಿಸಿವೆ. ಈ ವರೆಗೆ ಮೃತ ದೇಹ ಲಭ್ಯವಾಗಿಲ್ಲ ಎನ್ನಲಾಗಿದೆ.

