

ಸಿದ್ಧಾಪುರ ತಾಲೂಕಿನ ಬಿ.ಜೆ.ಪಿ. ಮಂಡಳದ ಕಾರ್ಯಕಾರಿಣಿ ಸಭೆ ಇಲ್ಲಿಯ ಲಯನ್ಸ್ ಬಾಲಭವನದಲ್ಲಿ ಇತ್ತೀಚೆಗೆ ನಡೆಯಿತು. ಈ ಸಭೆಗೆ ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದ ಗಿರೀಶ್ ಪಟೇಲ್ ಮತ್ತು ಮಾರ್ಕಂಡೆ ಎಂದಿನಂತೆ ದೇಶ ಮತ್ತು ರಾಜ್ಯದಲ್ಲಿ ಬಿ.ಜೆ.ಪಿ. ಆಡಳಿತಕ್ಕೆ ಬರುತ್ತಲೇ ಸುವರ್ಣಯುಗ ಪ್ರಾರಂಭವಾಯಿತು ಎಂದು ಭಾಷಣ ಮಾಡಿದರು. ಮಾಧ್ಯಮದವರ ಎದುರು ತಾಲೂಕಾ ಕಾರ್ಯಕಾರಿಣಿಗೆ ಬಂದ ಕಾರ್ಯಕರ್ತರು ಶಾಂತಚಿತ್ತರಾಗಿ ಕುಳಿತುಕೊಂಡು ವಿನಯ ಪ್ರದರ್ಶಿಸಿದರು.

ತಾಲೂಕಾ ಕಾರ್ಯಕಾರಿಣಿ ಸಭೆ ಸದ್ಘಾಟನಾ ಕಾರ್ಯಕ್ರಮ ಮುಗಿಯುತ್ತಲೇ ಮಾಧ್ಯಮ ಪ್ರತಿನಿಧಿಗಳು ಹೊರನಡೆಯುತಿದ್ದಂತೆಯೇ ತಾಲೂಕಾ ಕಾರ್ಯಕಾರಿಣಿ ಸಭೆ ಪ್ರಾರಂಭವಾಗುವುದಕ್ಕೂ ಶಿಸ್ತಿನ ಪಕ್ಷದ ಕಾರ್ಯಕರ್ತರ ಸಹನೆಯ ಕಟ್ಟೆ ಒಡೆಯುವುದಕ್ಕೂ ಸರಿ ಹೋಯಿತು.

ಬಿ.ಜೆ.ಪಿ.ಗೆ ವಲಸೆ ಬಂದ ಕೆಲವು ಕಾರ್ಯಕರ್ತರು ಮುಖಂಡರಿಗೆ ಮೂಲ ಕಾರ್ಯಕರ್ತರಿಗಿಂತ ಹೆಚ್ಚಿನ ಪ್ರಾಮುಖ್ಯತೆ ದೊರೆಯುತ್ತಿದೆ ಎಂದು ಆಕ್ಷೇಪಿಸಿದ ಕಾರ್ಯಕರ್ತರು ಎರಡ್ಮೂರು ದಶಕಗಳಿಂದ ಪಕ್ಷಕ್ಕೆ ಅಧಿಕಾರವಿಲ್ಲದಿದ್ದಾಗ ಕಷ್ಟದಿಂದ ಪಕ್ಷ ಕಟ್ಟಿದವರು ನಾವು ಈಗ ಅನ್ಯ ಪಕ್ಷಗಳಿಂದ ವಲಸೆ ಬಂದವರಿಗೆ ಆದ್ಯತೆ ನೀಡಿ ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸುವುದರ ಪರಿಣಾಮ ಕೆಟ್ಟದಾಗಲಿದೆ ಎಂದು ವಿರೋಧ ವ್ಯಕ್ತಪಡಿಸಿದರು.
ಇದರ ಹಿಂದೆಯೇ ತಕರಾರು ಎತ್ತಿದ ಚುನಾಯಿತ ಪ್ರತಿನಿಧಿಗಳು ರಾಜ್ಯ ಸರ್ಕಾರದ ವಿ.ಸ. ಸಭಾಪತಿ ಮತ್ತು ಸ್ಥಳಿಯ ಶಾಸಕರು ಬಿ.ಜೆ.ಪಿ. ಜನಪ್ರತಿನಿಧಿಗಳಲ್ಲಿ ಕೆಲವರಿಗೆ ಬೆಣ್ಣೆ ಹಲವರಿಗೆ ಸುಣ್ಣ ಎನ್ನುವ ತಾರತಮ್ಯದ ನೀತಿ ಅನುಸರಿಸುತಿದ್ದಾರೆ. ಪಕ್ಷದ ಚಿನ್ಹೆಯಡಿ ಮತ ಕೇಳಿದ ನಮಗೆ ಜನರ ಬಳಿ ಹೋಗಲು ಮುಖವೆಲ್ಲಿದೆ. ಅಕ್ರಮ ಮದ್ಯ ಮಾರಾಟ ವಿರೋಧಿಸಿ ಚುನಾವಣೆ ಗೆದ್ದವರು ನಾವು ಈಗ ನಮ್ಮ ಮುಖಂಡರೇ ಅಕ್ರಮ ಮದ್ಯ, ಕಮೀಷನ್ ವ್ಯವಹಾರಕ್ಕೆ ನಿಂತರೆನಮ್ಮ ಸ್ಥಿತಿ ಏನಾಗಬೇಕು.?
ಪಕ್ಷದ ಎಲ್ಲಾ ವೇದಿಕೆಗಳಲ್ಲಿ ಸರ್ಕಾರದ ಸಾಧನೆ ಹೇಳಿ ಎನ್ನುತ್ತೀರಿ ಸಿಲಿಂಡರಿಗೆ ಐದು ನೂರು ರೂಪಾಯಿ ಬೆಲೆ ಇದ್ದಾಗ ಉಜ್ವಲ ಗ್ಯಾಸ್ ಕೊಟ್ಟಿರಿ, ಗ್ಯಾಸ್ ಬಳಕೆದಾರರಿಗೆ ಸಬ್ಸಿಡಿ ಕೊಟ್ಟು ಈಗ ಗ್ಯಾಸ ಸಿಲಿಂಡರ್ ಬೆಲೆ ಹನ್ನೊಂದು ನೂರು ರೂಪಾಯಿ ಏರಿಸಿ ಈಗ ಉಚಿತ ಸಿಲಿಂಡರೂ ಇಲ್ಲ, ಸಹಾಯಧನವೂ ಇಲ್ಲ ಮಾಡಿದರೆ ಜನಸಾಮಾನ್ಯರು ನಮ್ಮನ್ನು ಪ್ರಶ್ನಿಸುವುದಿಲ್ಲವೆ?
ಪ್ರತಿ ಚುನಾವಣೆಯಲ್ಲಿ ರಾಷ್ಟ್ರೀಯತೆ, ಹಿಂದುತ್ವ ಎಂದು ಮತ ಕೇಳುತ್ತೇವೆ ಅಧಿಕಾರ ಬಂದಾಗ ಹಿಂದುಳಿದವರು ಹಿಂದೆ ಉಳ್ಳವರು ಮುಂದೆ ಹೋಗುವುದಾದರೆ ಜನ ನಮ್ಮನ್ನು ನಂಬುವುದಾದರೂ ಹೇಗೆ ಎನ್ನುವ ಪ್ರಶ್ನೆಗಳಿಗೆ ಬಿ.ಜೆ.ಪಿ. ಮುಖಂಡರು,ಅತಿಥಿಗಳು ನಿರುತ್ತರರಾದರು. ಈ ವಿರೋಧ ಬರೀ ಕಾರ್ಯಕಾರಿಣಿ ಸಭೆಗೆ ಮೀಸಲಲ್ಲ ಪಕ್ಷಪಾತ, ಗುಂಪುಗಾರಿಕೆ ಬೆಳೆಸಿ ಚುನಾವಣೆ ಸಮಯದಲ್ಲಿ ಎದುರಾಳಿ ನಾಯಕರನ್ನು ಖರೀದಿಸಿ ಚುನಾವಣೆ ಎದುರಿಸುವ ತಂತ್ರ ಸಫಲವಾಗಬೇಕಾದರೆ ಸ್ಥಳಿಯ ಅಭ್ಯರ್ಥಿಗಳನ್ನು ಬದಲಾಯಿಸಬೇಕು. ಪಕ್ಷದ ಪ್ರಮುಖರು ಈ ವಿಚಾರಗಳನ್ನು ಪಕ್ಷದ ಉನ್ನತ ಮಟ್ಟದ ಸಭೆಗಳಲ್ಲಿ ಪ್ರಸ್ಥಾ ಪಿಸಿ ಈ ವ್ಯವಸ್ಥೆ ಬದಲಾಯಿಸದಿದ್ದರೆ ನಮ್ಮ ಪಕ್ಷ, ನಾಯಕತ್ವಕ್ಕೆ ಉಳಿಗಾಲವಿಲ್ಲ ಎನ್ನುವ ಅಸಮಾಧಾನ ಸ್ಫೋಟಿಸುವ ಮೂಲಕ ಸಿದ್ದಾಪುರ ಬಿ.ಜೆ.ಪಿ ಪಕ್ಷದ ಪ್ರಮುಖ ಜನಪ್ರತಿನಿಧಿಗಳೊಂದಿಗೆ ಇಲ್ಲ ಎನ್ನುವುದನ್ನು ಸಾಬೀತುಮಾಡಿದೆ.

ಬಿ.ಜೆ.ಪಿ. ಪಕ್ಷದ ಈ ಅಂತ:ಕಲಹ:, ಬಂಡಾಯ ವಾಸ್ತವಿಕವಾಗಿ ಯಾರ ವಿರುದ್ಧ ಎನ್ನುವುದು ಬಿ.ಜಿ.ಪಿ. ನಾಯಕರಿಗೂ ತಿಳಿದಿದೆ. ಕಾರ್ಯಕರ್ತರಿಗೂ ಸ್ಪಷ್ಟವಿದೆ. ನಮ್ಮ ಓದುಗರು, ಜನಸಾಮಾನ್ಯರಿಗೆ ಈಗ ಎದ್ದಿರುವ ಯಾರು ಆ ನಾಯಕ? ಯಾವ ನಾಯಕರ ವಿರುದ್ಧ ಈ ಬಂಡಾಯ ಎನ್ನುವ ಪ್ರಶ್ನೆಗೆ ಉತ್ತರ ನಿಮ್ಮ ಊಹೆಗೆ ಬಿಟ್ಟಿದ್ದು?

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
