ಲಿಂಗಾಯತ ಪ್ರತ್ಯೇಕ ಧರ್ಮ ಮುಗಿದ ಅಧ್ಯಾಯ,ಮುರುಘಾ ಶರಣರದ್ದು ಸ್ವಯಂಕೃತ ಅಪರಾಧ!

ಲಿಂಗಾಯತ್‌ ಮತ್ತು ವೀರಶೈವ ಪಂಥಗಳು ಬೇರೆ ಬೇರೆಯಲ್ಲ, ಪ್ರತ್ಯೇಕ ಲಿಂಗಾಯತ್‌ ಧರ್ಮ ಮುಗಿದ ಅಧ್ಯಾಯ ಎಂದು ಅಭಿಪ್ರಾಯ ಪಟ್ಟಿರುವ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ವೀರಶೈವ,ಲಿಂಗಾಯತ ಪಂಥಗಳು ಸರ್ಕಾರದ ಸೌಲಭ್ಯ ಪಡೆಯಲು ಪ್ರಯತ್ನಿಸುವುದು ತಪ್ಪಲ್ಲ ಆದರೆ ಅದಕ್ಕಾಗಿ ವಿಘಟನೆಯಾಗುವುದು ಸರಿಯಲ್ಲ, ಧರ್ಮ ಒಂದು ಆಚರಣೆ ಈ ಆಚರಣೆಗಳ ಮೂಲಕ ಲಿಂಗಾಯತ, ವೀರಶೈವ ವಿಭಾ ಗಗಳು ಹಿಂದೂ ಧರ್ಮದ ಅವಿಭಾಜ್ಯ ಅಂಗಗಳು ಎಂದು ಪ್ರತಿಪಾದಿಸಿದ್ದಾರೆ.


ಲಿಂಗಾಯತ,ವೀರಶೈವರು ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಬೆಂಬಲಿಸಿಲ್ಲ. ಅದನ್ನು ವಿವಾದ ಮಾಡುವ ಅಗತ್ಯವೂ ಇಲ್ಲ ಎರಡ್ಮೂರು ವರ್ಷಗಳ ಹಿಂದೆ ಈ ವಿಚಾರ ಪ್ರಸ್ತಾಪವಾಗಿದ್ದು ಸತ್ಯ. ಲಿಂಗಾಯತರು ಹಿಂದೂ ಧರ್ಮದ ಒಳಗಿದ್ದೇ ಸರ್ಕಾರದ ಪ್ರಯೋಜನ ಪಡೆಯಲು ಯಾವ ತೊಂದರೆಯೂ ಇಲ್ಲ.ಪ್ರತ್ಯೇಕತೆ,ವಿಭಜನೆ ರಾಷ್ಟ್ರ,ಧರ್ಮದ ದೃಷ್ಟಿಯಿಂದಲೂ ಒಳ್ಳೆದಲ್ಲ ಎಂದಿದ್ದಾರೆ.


ಸಿದ್ಧಾಪುರದ ಕಾನಳ್ಳಿ ಯಲ್ಲಿ ಮಾತನಾಡಿದ ಸ್ವಾಮೀಜಿ ಅಕ್ಟೋಬರ್‌ ೨೯ ರಿಂದ೨೦೨೩ ಜನೇವರಿವರೆಗೆ ವಿವಿಧ ಧಾರ್ಮಿಕ,ಸಾಮಾಜಿಕ ಹಾಗೂ ಜನಜಾಗೃತಿ ಕಾರ್ಯಕ್ರಮಗಳ ಅಂಗವಾಗಿ ಪಾದಯಾತ್ರೆ ನಡೆಯಲಿದೆ ಎಂದರು.

ಇದೇ ಸಂರ್ಭದಲ್ಲಿ ಪರೋಕ್ಷವಾಗಿ ಚಿತ್ರದುರ್ಗದ ಮುರುಘಾ ಶರಣರ ವಿಚಾರ ಪ್ರಸ್ಥಾಪಿಸಿ ಮುರುಘಾ ಶರಣರ ಮೇಲೆ ಬಂದ ಅಪವಾದ ಸ್ವಯಂಕೃತ ಎಂದು ನಿರುದ್ವಿಗ್ನವಾಗಿ ಹೇಳಿದರು. ಬೇರೆ ಯಾರೂ ಅವರನ್ನು ಗುರಿ ಮಾಡಿಲ್ಲ ಅವರು ಬೇರೆಯವರನ್ನು ಟಾರ್ಗೆಟ್‌ ಮಾಡಿ ಅದರ ಫಲ ಅನುಭವಿಸುತಿದ್ದಾರೆ ಎನ್ನುವ ಮೂಲಕ ಚಿತ್ರದುರ್ಗದ ವಿವಾದದ ಬೆಂಕಿಗೆ ಸ್ವಾಮೀಜಿ ತುಪ್ಪ ಸುರಿದಂತಾಗಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *