

ಲಿಂಗಾಯತ್ ಮತ್ತು ವೀರಶೈವ ಪಂಥಗಳು ಬೇರೆ ಬೇರೆಯಲ್ಲ, ಪ್ರತ್ಯೇಕ ಲಿಂಗಾಯತ್ ಧರ್ಮ ಮುಗಿದ ಅಧ್ಯಾಯ ಎಂದು ಅಭಿಪ್ರಾಯ ಪಟ್ಟಿರುವ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ವೀರಶೈವ,ಲಿಂಗಾಯತ ಪಂಥಗಳು ಸರ್ಕಾರದ ಸೌಲಭ್ಯ ಪಡೆಯಲು ಪ್ರಯತ್ನಿಸುವುದು ತಪ್ಪಲ್ಲ ಆದರೆ ಅದಕ್ಕಾಗಿ ವಿಘಟನೆಯಾಗುವುದು ಸರಿಯಲ್ಲ, ಧರ್ಮ ಒಂದು ಆಚರಣೆ ಈ ಆಚರಣೆಗಳ ಮೂಲಕ ಲಿಂಗಾಯತ, ವೀರಶೈವ ವಿಭಾ ಗಗಳು ಹಿಂದೂ ಧರ್ಮದ ಅವಿಭಾಜ್ಯ ಅಂಗಗಳು ಎಂದು ಪ್ರತಿಪಾದಿಸಿದ್ದಾರೆ.
ಲಿಂಗಾಯತ,ವೀರಶೈವರು ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಬೆಂಬಲಿಸಿಲ್ಲ. ಅದನ್ನು ವಿವಾದ ಮಾಡುವ ಅಗತ್ಯವೂ ಇಲ್ಲ ಎರಡ್ಮೂರು ವರ್ಷಗಳ ಹಿಂದೆ ಈ ವಿಚಾರ ಪ್ರಸ್ತಾಪವಾಗಿದ್ದು ಸತ್ಯ. ಲಿಂಗಾಯತರು ಹಿಂದೂ ಧರ್ಮದ ಒಳಗಿದ್ದೇ ಸರ್ಕಾರದ ಪ್ರಯೋಜನ ಪಡೆಯಲು ಯಾವ ತೊಂದರೆಯೂ ಇಲ್ಲ.ಪ್ರತ್ಯೇಕತೆ,ವಿಭಜನೆ ರಾಷ್ಟ್ರ,ಧರ್ಮದ ದೃಷ್ಟಿಯಿಂದಲೂ ಒಳ್ಳೆದಲ್ಲ ಎಂದಿದ್ದಾರೆ.
ಸಿದ್ಧಾಪುರದ ಕಾನಳ್ಳಿ ಯಲ್ಲಿ ಮಾತನಾಡಿದ ಸ್ವಾಮೀಜಿ ಅಕ್ಟೋಬರ್ ೨೯ ರಿಂದ೨೦೨೩ ಜನೇವರಿವರೆಗೆ ವಿವಿಧ ಧಾರ್ಮಿಕ,ಸಾಮಾಜಿಕ ಹಾಗೂ ಜನಜಾಗೃತಿ ಕಾರ್ಯಕ್ರಮಗಳ ಅಂಗವಾಗಿ ಪಾದಯಾತ್ರೆ ನಡೆಯಲಿದೆ ಎಂದರು.
ಇದೇ ಸಂರ್ಭದಲ್ಲಿ ಪರೋಕ್ಷವಾಗಿ ಚಿತ್ರದುರ್ಗದ ಮುರುಘಾ ಶರಣರ ವಿಚಾರ ಪ್ರಸ್ಥಾಪಿಸಿ ಮುರುಘಾ ಶರಣರ ಮೇಲೆ ಬಂದ ಅಪವಾದ ಸ್ವಯಂಕೃತ ಎಂದು ನಿರುದ್ವಿಗ್ನವಾಗಿ ಹೇಳಿದರು. ಬೇರೆ ಯಾರೂ ಅವರನ್ನು ಗುರಿ ಮಾಡಿಲ್ಲ ಅವರು ಬೇರೆಯವರನ್ನು ಟಾರ್ಗೆಟ್ ಮಾಡಿ ಅದರ ಫಲ ಅನುಭವಿಸುತಿದ್ದಾರೆ ಎನ್ನುವ ಮೂಲಕ ಚಿತ್ರದುರ್ಗದ ವಿವಾದದ ಬೆಂಕಿಗೆ ಸ್ವಾಮೀಜಿ ತುಪ್ಪ ಸುರಿದಂತಾಗಿದೆ.

