

ಸಿದ್ಧಾಪುರ ಅಂಬೇಡ್ಕರ್ ವೃತ್ತದ ನೂತನ ನಾಡಹಬ್ಬ ಉತ್ಸವ ಸಮೀತಿ ಇದೇ ಮೊದಲ ಬಾರಿ ನವರಾತ್ರಿ ಉತ್ಸವ ಪ್ರಾರಂಭಿಸಿದೆ.ಸೆ.೨೬ ರಿಂದ ಅ.೫ ರ ವರೆಗೆ ಬಾಳಿಗಾ ಕಾಂಪ್ಲೆಕ್ಸ್ ಪಕ್ಕದಲ್ಲಿ ನಡೆಯುವ ಈ ಉತ್ಸವಕ್ಕೆ ಜೂಜೆ,ಪಾಂಡುಸ್ವಾಮಿ, ವಾಸುನಾಯ್ಕ ಸೇರಿದ ನಾಡಹಬ್ಬ ಉತ್ಸವ ಸಮೀತಿ ಸಾರ್ವಜನಿಕರನ್ನು ಆಹ್ವಾನಿಸಿದೆ.

ಶಂಕರ ಮಠದಲ್ಲಿ…
ಶರನ್ನವರಾತ್ರಿ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವೂ ನವರಾತ್ರಿ ಉತ್ಸವ ನಡೆಯಲಿದೆ. ಇದರ ಅಂಗವಾಗಿ ಸೆ.೨೬ ರಿಂದ ಅ.೫ ರ ವರೆಗೆ ಪ್ರತಿದಿನ ಸಾಯಂಕಾಲ ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ೨೬ ರಂದು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, ೨೭ ರಂದು ದ್ರೌಪದಿಯ ಶ್ರೀಮುಡಿ ನಾಟಕ, ೨೮ ರಂದು ಶಾಶ್ತ್ರೀಯ ಮತ್ತು ರಂಗ ಸಂಗೀತ ೨೯ ರಂದು ತುಳಸಿ ಹೆಗಡೆ ಬೆಟ್ಟಕೊಪ್ಪರ ಕಾರ್ಯಕ್ರಮ, ಕೊನೆಯ ದಿನ ೫ ರಂದು ಶಶಿಪ್ರಭಾ ಪರಿಣಯ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಭುವನಗಿರಿಯಲ್ಲಿ…. ಬೇಡ್ಕಣಿ ಗ್ರಾ.ಪಂ. ಭುವನಗಿರಿ ಭುವನೇಶ್ವರಿ ದೇವಾಲಯದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಶರನ್ನವರಾತ್ರಿ ಉತ್ಸವದ ಅಂಗವಾಗಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.೨೬ ರ ಸೋಮವಾರ ಭಕ್ತಿಸಂಗೀತ,೨೭ ರ ಮಂಗಳವಾರಸುಗಮ ಸಂಗೀತ,೨೮ ರ ಬುಧವಾರ ತಾಳಮದ್ದಲೆ,೨೯ ರ ಗುರುವಾರ ಸಂಗೀತ ಕಾರ್ಯಕ್ರಮ,೩೦ ರ ಶುಕ್ರವಾರ ಸುಗಮ ಸಂಗೀತ, ಅ. ೧ ರ ಶನಿವಾರ ಸಂಗೀತ ಕಾರ್ಯಕ್ರಮ, ೨,ರವಿವಾರಸುಗಮ ಸಂಗೀತ,೩ ರಂದುಸಂಗೀತ ಕಾರ್ಯಕ್ರಮ,೪ ರ ಮಂಗಳವಾರ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿದಿನಸಾಯಂಕಾಲ ೬ ರಿಂದ ೮ ಗಂಟೆಗಳ ವರೆಗೆ ನಡೆಯುವ ಈ ಕಾರ್ಯಕ್ರಮಕ್ಕೆ ದೇವಸ್ಥಾನದ ಆಡಳಿತ ಸಮೀತಿ ಸರ್ವರನ್ನೂ ಆಮಂತ್ರಿಸಿದೆ.
