

ಸಿದ್ದಾಪುರ: ಹಣವಂತನಿಗಿಂತ ಗುಣವಂತ ಶ್ರೇಷ್ಠ. ಹಾಗಾಗಿ ಗುಣವಂತರು ಎಲ್ಲಾ ಕಾಲದಲ್ಲಿಯೂ ಅಜರಾಮರರಾಗಿರುತ್ತಾರೆ. ಅಬ್ದುಲ್ ಕಲಾಂ ರವರು ಈ ಸಾಲಿನಲ್ಲಿ ನಿಲ್ಲುತ್ತಾರೆ ಎಂದು
ಸಿವಿಲ್ ನ್ಯಾಯಾಧೀಶ ತಿಮ್ಮಯ್ಯ ಜಿ ಹೇಳಿದರು.
ಅವರು ನಗರದ ಹಾಳದಕಟ್ಟಾದ ಮುರುಘರಾಜೇಂದ್ರ ಅಂಧರ ಶಾಲಾ ಸಭಾಂಗಣದಲ್ಲಿ ನಡೆದ
ಆಶಾಕಿರಣ ಟ್ರಸ್ಟ್, ಲಯನ್ಸ್ ಶತಮಾನೋತ್ಸವ ಸ್ಮರಣೆಯ ತರಬೇತಿ ಕೇಂದ್ರ ಮತ್ತು ಲಯನ್ಸ್ ಕ್ಲಬ್ ಸಹಯೋಗದಲ್ಲಿ ಡಾ, ಏಪಿ ಜೆ ಅಬ್ದಲ್ ಕಲಾಂ ಜನ್ಮ ದಿನೋತ್ಸವದ ಅಂಗವಾಗಿ ಸದ್ಭಾವನಾ ದಿನಾಚರಣೆ ಮತ್ತು ಸದ್ಭಾವನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಶಾಕಿರಣ ಟ್ರಸ್ಟ್ ನ ಆಧ್ಯಕ್ಷ ರವಿ ಹೆಗಡೆ ಹೂವಿನಮನೆ ಅಧ್ಯಕ್ಷತೆ ವಹಿಸಿದ್ದರು.
ಲಯನ್ ಜಿಲ್ಲಾ ಮಾಜಿ ಗವರ್ನರ್ ಜಿ ಶ್ರೀನಿವಾಸ ಬೆಂಗಳೂರು ಮಾತನಾಡಿ ಕಲಾಂ ರು ಇಡೀ ಜಗತ್ತಿನಲ್ಲಿ ವಿಶೇಷ ವಾದ ವ್ಯಕ್ತಿತ್ವ ಹೊಂದಿದ್ದರು.
ಅಂತರ್ ದೃಷ್ಟಿ ಇದ್ದರೆ ಮಾತ್ರ ನಾವು ದೃಷ್ಟಿ ವಂತರು. ಅಂತರ್ ದೃಷ್ಟಿ ಇಲ್ಲದಿದ್ದರೆ ದೃಷ್ಟಿ ಇದ್ದರೂ ಕುರುಡರಂತೆ ಎಂದು ಅವರು ಪ್ರತಿಪಾದಿಸಿದರು.
ಲಯನ್ ಜಿಲ್ಲಾ ಮಾಜಿ ಗವರ್ನರ್ ಡಾ, ಕೆ.ಎಮ್.ಮುನಿಯಪ್ಪ ಬೆಂಗಳೂರು, ಲಯನ್ ಜಿಲ್ಲಾ ಮಾಜಿ ಗವರ್ನರ್ ಗಣಪತಿ ಎನ್ ನಾಯಕ, ಗೋಕರ್ಣ, ಲಯನ್ ಜಿಲ್ಲಾ ಮಾಜಿ ಗವರ್ನರ್ ಡಾ, ಗಿರೀಶ್ ಟಿ ಕುಚಿನಾಡ ಕುಮಟಾ, ಉಪಸ್ಥಿತರಿದ್ದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಲಯನ್ ಎಸ್ ಜೆ ಕೈರಾನ ಹೊನ್ನಾವರ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಿಕ್ಷಕ ತಮ್ಮಣ್ಣ ಬೀಗಾರ್ ಅವರಿಗೆ ಸದ್ಭಾವನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಲಯನ್ ಶ್ಯಾಮಲಾ ಹೆಗಡೆ, ಕುಮಾರ್ ಗೌಡರ್ ಅಭಿನಂದಾ ಪತ್ರ ವಾಚಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಆರ್ ಎಂ ಪಾಟಿಲ್,
ಸಿ ಎಸ್ ಗೌಡರ್ ಪ್ರಸ್ತಾವಿಕವಾಗಿ ಮಾತನಾಡಿದರು.
ಮುರುಘರಾಜೇಂದ್ರ ಅಂಧರ ಶಾಲಾ ವಿಧ್ಯಾರ್ಥಿಗಳು ಪ್ರಾರ್ಥಿಸಿದರು.
ನಾಗರಾಜ ಮರಾಠೆ ಸ್ವಾಗತಿಸಿದರು.
ಲಯನ್ ಜಿ ಜಿ ಹೆಗಡೆ ನಿರೂಪಿಸಿದರು.
ನಾಗರಾಜ ದೋಶೆಟ್ಟಿ ವಂದಿಸಿದರು.

ನನ್ನ ಮತ ಮಾರಾಟಕ್ಕಿಲ್ಲ ಎನ್ನುವ ಅಭಿಯಾನವನ್ನು ಕಳೆದ ಒಂದು ವರ್ಷದಿಂದ ಶಿರ್ಸಿ ಸಿದ್ದಾಪುರ ಕ್ಷೇತ್ರದಾದ್ಯoತ ಟೀಮ್ ಪರಿವರ್ತನೆ ವತಿಯಿಂದ ಮಾಡುತ್ತ ಬಂದಿದ್ದು ಸ್ಪೀಕರ್ ಕಾಗೇರಿ ಯವರು ಇತ್ತೀ ಚೆಗೆ ನನ್ನ ಮತ ಮಾರಾಟಕ್ಕಿಲ್ಲ ಎನ್ನುವ ಅಭಿಯಾನ ಪ್ರಾರಂಭಿಸಿ ಎಂದು ಕರೆ ನೀಡಿದ್ದು ಮಾಧ್ಯಮ ಗಳಲ್ಲಿ ಪ್ರಸಾರ ವಾಗಿದ್ದನ್ನು ಗಮನಿಸಿದ್ದೇನೆ ಅವರ ಹೇಳಿಕೆ ನಮಗೆ ಸಂತಸ ತಂದಿದೆ ಎಂದು ಟೀಮ್ ಪರಿವರ್ತನೆ ಮುಖ್ಯಸ್ಥ ಹಿತೇಂದ್ರ ನಾಯ್ಕ್ ಮಾಧ್ಯಮ ಹೇಳಿಕೆ ನೀಡಿದ್ದಾರೆ.
ಮತದಾನದ ಮಹತ್ವ, ಜನಪ್ರತಿನಿದಿನಗಳ ಕರ್ತವ್ಯ, ನಾಗರಿಕರ ಹಕ್ಕು ಮತ್ತು ಕರ್ತವ್ಯ, ಸರಕಾರದ ಆದಾಯದ ಮೂಲ ಹಾಗೂ ಸರಕಾರದಿಂದ ಜನತೆಗೆ ಸಿಗಬೇಕಾದ ಸೌಲಭ್ಯ ಮುಂತಾದವುಗಳ ಕುರಿತು ಎಲ್ಲೆಡೆ ಜಾಗೃತಿ ಮೂಡಿಸುತ್ತ ಬಂದಿದ್ದೇವೆ ಜನತೆಯು ಸಹ ತಿಳಿದುಕೊಂಡಿದ್ದಾರೆ ಸ್ಥಳೀಯ ಶಾಸಕರು ಈ ಹೇಳಿಕೆ ನೀಡಿದ್ದು ನಮ್ಮ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಗಿದೆ ಎಂದು ಭಾವಿಸಿದ್ದೇವೆ ಕಾಗೇರಿಯವರಿಗೆ ನಮ್ಮ ಟೀಮ್ ಪರಿವರ್ತನೆ ವತಿಯಿಂದ ಈ ಮೂಲಕ ಧನ್ಯವಾದ ತಿಳಿಸುತ್ತೇವೆ ಎಂದರು
ಇನ್ನು ಮುಂದಿನ ದಿನಗಳಲ್ಲಿಯೂ ನಾವು ಮತದಾನ ಜಾಗೃತಿ ಕಾರ್ಯಕ್ರಮ ನಡೆಸುತ್ತ ಪಾರದರ್ಶಕ ಚುನಾವಣೆ ಗೆ ಮತ್ತು ಕ್ಷೇತ್ರದ ಅಭಿವೃದ್ಧಿಪಡಿಸುವ ಉತ್ತಮ ಅಭ್ಯರ್ಥಿ ಆಯ್ಕೆ ಮಾಡುವಲ್ಲಿ ಪ್ರಯತ್ನ ನಡೆಸುತ್ತೇವೆ
ಈ ಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಅಭಿವೃದ್ಧಿಯಾಗಬೇಕಿದೆ ಹಾಗಾಗಿ ಜನರು ಚುನಾವಣೆ ಸಂದರ್ಭದಲ್ಲಿ ರಾಜಕೀಯ ನಾಯಕರುಗಳು ನೀಡುವ ಆಮಿಷಗಳಿಗೆ ಒಳಗಾಗದೆ ತಮಗೆ ಬೇಕಾದ ಅಭ್ಯರ್ಥಿ ಆಯ್ಕೆ ಮಾಡುವಂತೆ ಆಗಬೇಕು ಹಾಗಾದಾಗ ಮಾತ್ರ ಅಭಿವೃದ್ಧಿ ಸಾಧ್ಯ ಮುಂದಿನ ದಿನಗಳಲ್ಲಿ ನಮ್ಮ ಅಭಿಯಾನ ಕಾರ್ಯಕ್ರಮ ಕ್ಕೆ ಜನತೆ ಹೆಚ್ಚಿನ ಸಹಕಾರ ನೀಡಿ ಬದಲಾವಣೆ ಗೆ ಹೆಜ್ಜೆ ಇಡೋಣ ಎಂದು ಮನವಿ ಮಾಡಿದರು.

