

ನಮ್ಮ ಬೆಂಬಲ ಕೊಂಕಣಿಗೆ: ಕಾರವಾರದಲ್ಲಿ ಮತ್ತೆ ಭಾಷಾ ವಿವಾದದ ಕಿಡಿ ಹೊತ್ತಿಸಿದ ಮಾಜಿ ಸಚಿವ ಅಸ್ನೋಟಿಕರ್
ಕಳೆದ ನಾಲ್ಕು ವರ್ಷಗಳಿಂದ ತಣ್ಣಗಿದ್ದು ಈ ವರ್ಷದ ಉತ್ತರಾರ್ಧದಲ್ಲಿ ಮೋಡದಿಂದ ಎದ್ದು ಬಂದಂತಿರುವ ಮಾಜಿ ಸಚಿವ ಆನಂದ ಅಸ್ನೋಟಿಕರ್ ಈಗ ವಿವಾದದ ಮೂಲಕ ಜನರ ಗಮನ ಸೆಳೆಯವ ಪ್ರಯತ್ನ ಮಾಡಿದ್ದಾರೆ.
ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಆನಂದ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಆನಂದ ತರುವ ಮಾತನಾಡದೆ ಕಾರವಾರದ ಮತ ರಾಜಕೀಯದ ಅನಿವಾರ್ಯತೆ ಎಂಬಂತೆ ಕಾರವಾರದಲ್ಲಿ ಕೊಂಕಣಿ ಇದ್ದರೆ ತಪ್ಪೇನು? ಎನ್ನುವ ಅರ್ಥದಲ್ಲಿ ಮಾತನಾಡಿ ಕೊಂಕಣಿಗೆ ತಮ್ಮ ನಿಷ್ಠೆ ಎಂದು ಕನ್ನಡ ವಿರೋಧಿ ತನ ಪ್ರದರ್ಶಿಸಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಫರ್ಧಿಸಲು ಯೋಚಿಸಿರುವ ಮಾಜಿ ಸಚಿವ ಬಿ.ಜೆ.ಪಿ., ಕಾಂಗ್ರೆಸ್ ಗಳಲ್ಲಿ ಕ್ಯಾರೆ ಎನ್ನುವವರಿಲ್ಲದೆ ಜೆ.ಡಿ.ಎಸ್. ಅಥವಾ ಇತರ ಪಕ್ಷಗಳ ಸಾಂಕೇತಿಕ ಅಭ್ಯರ್ಥಿಯಾಗದೆ ಸ್ವತಂತ್ರ ವಾಗಿ ಸ್ಫರ್ಧಿಸಿದರೆ ಗೆಲ್ಲುವ ಸಾಧ್ಯತೆ ಹೆಚ್ಚು ಎಂದು ಗ್ರಹಿಸಿರುವ ಅಸ್ನೋಟಿಕರ್ ಸ್ವತಂತ್ರವಾಗಿ ಗೆದ್ದರೆ ಮುಂದೆ ಎಲ್ಲರೂ ಒಪ್ಪುವ ಶಾಸಕನಾಗಬಹುದು ಎನ್ನುವ ಎಣಿಕೆಯಲ್ಲಿರುವ ಆನಂದರ ಕೊಂಕಣಿ ಪರ ಹೇಳಿಕೆ ಕನ್ನಡ ಅಭಿಮಾನಿಗಳು, ಕನ್ನಡ ಪರ ಕಾರ್ಯಕರ್ತರನ್ನು ಕೆರಳಿಸಿದೆ. ಕಾರವಾರದಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಹೆಚ್ಚಿದ್ದರೂ ಕೊಂಕಣಿ ಅಲ್ಲಿಯ ಸ್ಥಳಿಯ ಭಾಷೆಯಾಗಿದೆ. ನಾಮಧಾರಿಗಳು, ಕೊಮಾರ್ ಪಂಥರು, ಕೆಲವು ಮೀನುಗಾರ ಅಪ್ಪಟಕನ್ನಡಿಗರ ಮಧ್ಯೆ ಅಸ್ನೋಟಿಕರ್ ಕೊಂಕಣಿ ಪ್ರೇಮ ವ್ಯಕ್ತಪಡಿಸಿರುವುದು ರಾಜಕೀಯ ತಂತ್ರವಾದರೂ ಅಸ್ನೋಟಿಕರ್ ವಿರುದ್ಧ ಕನ್ನಡಾಭಿಮಾನಿಗಳು ಸಿಟ್ಟಾಗಿದ್ದಾರೆ.
