local news-ಅರಣ್ಯ ಅಧಿಕಾರಿಗಳ ಹಾಜರಾತಿಗೆ ಧರಣಿ – ಸರಕಾರದ ವಿರುದ್ಧ ತೀವ್ರ ಆಕ್ರೋಶ.

ಅರಣ್ಯವಾಸಿಗಳಿಂದ ಬೃಹತ್ ಮೆರವಣಿಗೆ ಮತ್ತು ಪಾದಯಾತ್ರೆ ;
ಅರಣ್ಯ ಅಧಿಕಾರಿಗಳ ಹಾಜರಾತಿಗೆ ಧರಣಿ – ಸರಕಾರದ ವಿರುದ್ಧ ತೀವ್ರ ಆಕ್ರೋಶ.

ಸಿದ್ಧಾಪುರ: ಅರಣ್ಯವಾಸಿಗಳ ಪರವಾಗಿ ಸುಫ್ರೀಂ ಕೋರ್ಟನಲ್ಲಿ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸಲು ಸರಕಾರಕ್ಕೆ ೧೫ ದಿನ ಗಡವು ನೀಡಿದಾಗಿಯೂ ಸರಕಾರ ಕ್ರಮ ಜರುಗಿಸದ ಹಾಗೂ ಅರಣ್ಯ ಸಿಬ್ಬಂದಿಗಳ ದೌರ್ಜನ್ಯದ ಕುರಿತು ಅರಣ್ಯವಾಸಿಗಳಿಂದ ಬೃಹತ್ ಮೆರವಣಿಗೆ ಮತ್ತು ಪಾದಯಾತ್ರೆಯೊಂದಿಗೆ ಭೂಮಿ ಹಕ್ಕಿಗೆ ಹಕ್ಕೊತ್ತಾಯಿಸಿ ರ‍್ಯಾಲಿ ಸಂಘಟಿಸುವ ಮೂಲಕ ಸರಕಾರದ ವಿರುದ್ಧ ಅತಿಕ್ರಮಣದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಹಿರಿಯ ಅಧಿಕಾರಿಗಳ ಆಗಮನಕ್ಕಾಗಿ ಅತಿಕ್ರಮಣದಾರರು ಎರಡು ತಾಸಿಗೂ ಮಿಕ್ಕಿ ತಹಶೀಲ್ದಾರ್ ಕಛೇರಿಯ ಎದುರು ಪ್ರತಿಭಟನೆ, ಧರಣಿ, ಕಛೇರಿಗೆ ಮುತ್ತಿಗೆ ಹಾಕಿದ್ದಲ್ಲದೆ ಹಾಗೂ ಆಕ್ರೋಶ ವ್ಯಕ್ತಪಡಿಸುವ ಘಟನೆಗಳು ಜರುಗಿದವು.

ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅವರ ನೇತ್ರತ್ವದಲ್ಲಿ ಸಿದ್ಧಾಪುರದ ಬಿಳಗಿಯ ಶ್ರೀ ಮಾರಿಕಾಂಬ ದೇವಾಲಯದಿಂದ ೧೪ ಕೀ.ಮೀ ರ‍್ಯಾಲಿ ಸಂಚರಿಸಿ ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ತಹಶೀಲ್ದಾರ್ ಕಛೇರಿಯ ಮುಂದೆ ಸಭೆಯಾಗಿ ಪರಿವರ್ತನೆಗೊಂಡಿತು.

ಮುಂಚಿತವಾಗಿಯೇ ಅಧಿಕಾರಿಗಳಿಗೆ ಸೂಚನೆ ನೀಡಿದಾಗಿಯೂ ಅರಣ್ಯ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ ವಹಿಸಿ ಕಾರ್ಯಕ್ರಮದಲ್ಲಿ ಉಪಸ್ಥಿತಿ ಇರದಿರುವುದಕ್ಕೆ ಹೋರಾಟಗಾರರಿಂದ ಅಧಿಕಾರಿಗಳು ತೀವ್ರ ಆಕ್ರೋಶಕ್ಕೆ ಕಾರಣರಾದರು.

ಪ್ರತಿಭಟನೆಯಲ್ಲಿ ಪ್ರಧಾನ ಸಂಚಾಲಕರಾದ ರಾಜ್ಯ ಸಂಚಾಲಕ ತಿ.ನ ಶ್ರೀನಿವಾಸ , ರೈತ ಸಂಘಟನೆಯ ಧುರೀಣ ವೀರಭದ್ರ ನಾಯ್ಕ, ರಾಘವೇಂದ್ರ ನಾಯ್ಕ ಕವಂಚೂರು, ಹರಿಹರ ನಾಯ್ಕ ಓಂಕಾರ, ಸೀತಾರಾಮ ಗೌಡ ನೀರಗಾನ್, ವಿನಾಯಕ ನಾಯ್ಕ, ಕೆಟಿ ನಾಯ್ಕ, ಸುನೀಲ್ ನಾಯ್ಕ ಸಂಪಖಂಡ, ಆಕಾಶ ಕೊಂಡ್ಲಿ, ಬಿಡಿ ನಾಯ್ಕ, ಕಾರ್ಲೂಯಿಸ್ ಮಾವಿನಗುಂಡಿ, ವಿಎನ್ ನಾಯ್ಕ ಬೇಡ್ಕಣಿ, ಎಮ್ ಪಿ ಗೌಡ, ಸುಶೀಲಾ ನಾಯ್ಕ ಕಾನಸೂರು, ಅಣ್ಣಪ್ಪ ನಾಯ್ಕ ಶಿರಲಗಿ ಮುಂತಾದವರು ನೇತ್ರತ್ವ ವಹಿಸಿದ್ದರು.

ಅರಣ್ಯ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ – ಭರವಸೆ:
ಅರಣ್ಯ ಅತಿಕ್ರಮಣದಾರರ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಡಿಎಫ್‌ಓ ಅಜ್ಜಯ್ಯ, ಎಸಿಎಫ್ ಹರೀಶ ಕುಮಾರ ಹಾಗೂ ತಹಶೀಲ್ದಾರ್ ಭಂಡಾರಿ ಅವರು ಆಗಮಿಸಿದ ನಂತರ ಅಸಮರ್ಪಕ ಜಿಪಿಎಸ್ ಕಾರ್ಯದಿಂದ ದಿನನಿತ್ಯ ಅರಣ್ಯ ಅತಿಕ್ರಮಣದಾರರಿಗೆ ಅರಣ್ಯ ಸಿಬ್ಬಂದಿಗಳಿಂದ ಉಂಟಾಗುತ್ತಿರುವ ಕಿರುಕುಳ, ದೌರ್ಜನ್ಯ, ಮಾನಸಿಕ ಹಿಂಸೆಗಳು ಮರುಕಳಿಸದಂತೆ ಸೂಕ್ತ ಕ್ರ ಜರುಗಿಸುವುದಾಗಿ ಆಶ್ವಾಸನೆ ನೀಡಿದ ನಂತರ ಸಭೆ ಸಮಾಪ್ತವಾಯಿತು.

ಸರಕಾರ ನಿಲುವು ಸ್ಪಷ್ಟ ಪಡಿಸಲಿ:
ಸುಫ್ರೀಂ ಕೋರ್ಟನಲ್ಲಿ ಅರಣ್ಯವಾಸಿಗಳ ಹಕ್ಕಿಗೆ ಸಂಬಂಧಿಸಿ ಅಂತಿಮ ವಿಚಾರಣೆ ಜರಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರ ಅರಣ್ಯವಾಸಿಗಳ ಪರ ಸ್ಪಷ್ಟ ನಿಲುವನ್ನು ಪ್ರಕಟಿಸಬೇಕು, ಜನರಲ್ಲಿ ಗೊಂದಲಮಾಡಿ ಹೋರಾಟ ದಿಕ್ಕು ತಪ್ಪಿಸುವ ಕೃತ್ಯವನ್ನ ಸಭಾಧ್ಯಕ್ಷರು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾಡಬಾರದೆಂದು ರಾಜ್ಯ ಹೋರಾಟ ಸಮಿತಿಯ ಪಧಾಧಿಕಾರಿಗಳಾದ ರಮೇಶ್ ಹೆಗಡೆ ತೀರ್ಥಹಳ್ಳಿ, ತಿ.ನ ಶ್ರೀನಿವಾಸ ಮೂರ್ತಿ ಸಾಗರ, ವಸಂತ ನಾಯ್ಕ ಅವರುಗಳು ಸಭಾಧ್ಯಕ್ಷರ ವಿರುದ್ಧ ಖಾರವಾಗಿ ಪ್ರತಿಕ್ರಿಯಿಸಿದರು.

ಕಾಗೋಡ ಹೇಳಿಕೆ:
ಅರಣ್ಯವಾಸಿಗಳ ಹಕ್ಕು ನೀಡುವುದು ಸರಕಾರದ ಜವಾಬ್ದಾರಿ, ಭೂಮಿ ಹಕ್ಕಿಗಾಗಿ ಹೋರಾಟ ಅನಿವಾರ್ಯ, ಭೂಮಿ ಹಕ್ಕಿನ ಸಂಘಟನೆ ಜೊತೆಯಲ್ಲಿ ರಾಜಕೀಯ ಪ್ರತಿನಿಧಿಗಳ ಆಯ್ಕೆ ಯಲ್ಲಿಯೂ ಇಚ್ಛಾಶಕ್ತಿ ಪ್ರದರ್ಶಿಸಬೇಕೆಂದು ಹಿರಿಯ ಸಾಮಾಜಿಕ ಚಿಂತಕ ಕಾಗೋಡ ತಿಮ್ಮಪ್ಪ ಅವರು ಹೇಳಿದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *