

ಅ.೨೨-೧೦-೨೨ ರ ಶನಿವಾರ ಸಿದ್ಧಾಪುರ ತಾಲೂಕಿನಲ್ಲಿ ವಿದ್ಯುತ್ ವ್ಯವಸ್ಥೆ ಸ್ಥಗಿತಗೊಳ್ಳಲಿದೆ. ಈ ಬಗ್ಗೆ ಪ್ರಕಟಣೆ ನೀಡಿರುವ ಹೆಸ್ಕಾ ಸಾರ್ವಜನಿಕರಿಗೆ ಸಹಕರಿಸಲು ಮನವಿ ಮಾಡಿದೆ. ಹೆಸ್ಕಾಂ ಪ್ರಕಟಣೆ ಈ ಕೆಳಗಿನಂತಿದೆ.
೧೧೦/೧೧ ಕೆ.ವಿ ಸಿದ್ದಾಪುರ ಉಪಕೇಂದ್ರದಿಂದ ನಿರ್ವಹಣಾ ಕಾಮಗಾರಿ ಕೈಗೊಳ್ಳುವುದರಿಂದ ದಿನಾಂಕ:೨೨-೧೦-೨೦೨೨ (ನಾಲ್ಕನೇ ಶನಿವಾರ) ದಂದು ಬೆಳಿಗ್ಗೆ ೧೦.೦೦ ಗಂಟೆಯಿಂದ ಸಾಯಂಕಾಲ ೦೫.೦೦ ಗಂಟೆಯವರೆಗೆ ಮಾರ್ಗ ಮುಕ್ತತೆ ಪಡೆಯುವುದರಿಂದ ಸಿದ್ದಾಪುರ ತಾಲೂಕಿನಾದ್ಯಂತ ವಿದ್ಯುತ್ ನಿಲುಗಡೆಗೊಳಿಸಬೇಕಾಗಿರುತ್ತದೆ.
