

ಸಿದ್ದಾಪುರದಲ್ಲಿ ಶಾಂತಲಾ ವೈನ್ಸ್ ಬಳಿ ವೈಯಕ್ತಿಕ ಕಾರಣಕ್ಕೆ ಜಗಳ ವಾಡಿ ಇಬ್ಬರು ಆಸ್ಪತ್ರೆ ಸೇರಿದ ಘಟನೆ ಶನಿವಾರ ಸಾಯಂ ಕಾಲ ನಡೆದಿದೆ. ಗಾಯಗೊಂಡವರು .
1)ಜಯನ.ವಯಸ್ಸು-38
2)ಮನೋಜ್ ಕುಮಾರ್
ಆರೋಪಿತರು
ವಿನೋದ್ ವಯಸ್ಸು-41
ಕೇರಳ ಮೂಲದ ವಿನೋದ್ ತನ್ನೂರಿನ ಇಬ್ಬರಿಗೆ ಗಾಯಗೊಳಿಸಿ ಆಸ್ಪತ್ರೆ ಸೇರುವಂತೆ ಮಾಡಿದ್ದಾನೆ. ಆರೋಪಿಯನ್ನು ಸಿದ್ದಾಪುರ ಪೊಲೀಸರು ಬಂಧಿಸಿರುವ ಬಗ್ಗೆ ಮೂಲಗಳು ತಿಳಿಸಿವೆ.

ಕೇರಳ ಮೂಲದ ವಿನೋದ್ ಮತ್ತು ಇನ್ನಿಬ್ಬರು ಬಾಧಿತರು ಸ್ನೇಹಿತರು, ಸಿದ್ದಾಪುರ,ಸೊರಬಾ ಸೇರಿದಂತೆ ಉತ್ತರ ಕನ್ನಡ ಶಿವಮೊಗ್ಗ ಜಿಲ್ಲೆಗಳ ರಬ್ಬರ್ ತೋಟಗಳಲ್ಲಿ ರಬ್ಬರ್ ಹಾಲು ಇಳಿಸುವ ಕೆಲಸ ಮಾಡುತಿದ್ದ ಇವರಿಗೆ ಸಂಜೆಯ ಬಿಸಿ ತಲೆಕೆಡಿಸಿ ಪರಸ್ಪರ ಕಿತ್ತಾಡಿದ್ದಾರೆ. ವಿನೋದ್ ತನ್ನ ಕೈಯಲ್ಲಿದ್ದ ರಬ್ಬರ್ ಹಾಲು ತೆಗೆಯುವ ಚೂಪಾದ ಆಯುಧದಿಂದ ಮನೋಜ್ ಮತ್ತು ಜಯನ್ ರಿಗೆ ಗಾಯಗೊಳಿಸಿದ್ದಾನೆ. ಬಾಧಿತರು ಜೀವಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.

