

ಸಿದ್ದಾಪುರ: ನಗರ ವ್ಯಾಪ್ತಿಯ ಜನತೆಗೆ ಹೊರೆಯಾಗುವ ತೆರಿಗೆ ಏರಿಕೆ ಮಾಡುವುದಕ್ಕೆ ಪಟ್ಟಣ ಪಂಚಾಯತ ಸಾಮಾನ್ಯ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿ ಠರಾವ್ ಮಾಡಲಾಯಿತು.
ಚಂದ್ರಕಲಾ ನಾಯ್ಕ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ವಿರೋಧ ವ್ಯಕ್ತಪಡಿಸಿ ಠರಾಯಿಸಲಾಯಿತು.
ಈಗಾಗಲೇ ಜನರಿಗೆ ತೆರಿಗೆಯ ಹೊರೆಯಾಗಿದೆ. ಮತ್ತೆ ಏರಿಕೆ ಮಾಡಿದರೆ ಜನರಿಗೆ ಉತ್ತರ ನೀಡುವುದು ಕಷ್ಟವಾಗಲಿದೆ. ಯಾವುದೇ ಕಾರಣಕ್ಕೂ ತೆರಿಗೆ ಏರಿಸುವುದು ಬೇಡ ಎಂದು ಸದಸ್ಯರು ಸೂಚಿಸಿದರು.
ನಗರೋತ್ಥಾನದಲ್ಲಿ ಬಿಡುಗಡೆಯಾದ ಹಣ ಶಾಸಕರ ವಿಶೇಷ ಮುತುವರ್ಜಿಯಿಂದ ಬಿಡುಗಡೆಯಾಗಿರಬಹುದು. ಆದರೆ ಹಣ ಸರ್ಕಾರದ್ದೇ ಆಗಿರುತ್ತದೆ. ನಮ್ಮ ವಾರ್ಡಿಗೆ ಒಂದು ರೂಪಾಯಿ ಬಂದಿಲ್ಲ. ಅಲ್ಲದೇ ಕೆಲವರು ಬೇರೆ ಸದಸ್ಯರ ವಾರ್ಡಿಗೆ ಹೋಗಿ ಮೂಗು ತೂರಿಸುತ್ತಿದ್ದಾರೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ವಿನಯ ಹೊನ್ನೆಗುಂಡಿ ಬೇಸರ ವ್ಯಕ್ತಪಡಿಸಿದರು.
ಪಟ್ಟಣ ಪಂಚಾಯತನಲ್ಲಿ ಇ ಕಚೇರಿ ಆರಂಭಿಸಲು ಮಂಜೂರಾತಿ ನೀಡುವಂತೆ ಕೋರಲಾಯಿತು.
ಈ ವೇಳೆ ಪಟ್ಟಣ ಪಂಚಾಯತ ಉಪಾಧ್ಯಕ್ಷ ರವಿಕುಮಾರ ನಾಯ್ಕ, ಮುಖ್ಯಾಧಿಕಾರಿ ಕುಮಾರ ನಾಯ್ಕ ಉಪಸ್ಥಿತರಿದ್ದರು.

