

ಸಿದ್ದಾಪುರ . ತಾಲೂಕಿನ ಬೇಡ್ಕಣಿಯಲ್ಲಿ ಕೋಟೆ ಹನುಮಂತ ದೇವರ ವರ್ಷತೊಡಕಿನ ಪಲ್ಲಕ್ಕಿ ಉತ್ಸವ ಶುಕ್ರವಾರ ನಡೆಯಿತು. ಬೆಳಿಗ್ಗೆ ಹನುಮಂತ ದೇವರ ಪಲ್ಲಕ್ಕಿ ಉತ್ಸವ ಮನೆಮನೆಗೆ ತೆರಳಿ ಪೂಜಿಸಲ್ಪಟ್ಟಿತು. ಸಂಜೆ ಪ್ರತಿವರ್ಷದಂತೆ ಶ್ರೀ ಮಾರುತಿ ಪ್ರಸಾದಿತ ಯಕ್ಷಗಾನ ಮಂಡಳಿ ಬೇಡ್ಕಣಿ ಯಕ್ಷಗಾನ ಬಯಲಾಟ ಏರ್ಪಡಿಸಿ ತ್ತು. ಈ ಸಂದರ್ದಲ್ಲಿ ಯಕ್ಷಗಾನ ಮಂಡಳಿಯ ಮುಖ್ಯಸ್ಥ ಲಕ್ಷ್ಮಣ ನಾಯ್ಕ ಮಾತನಾಡಿ ತಮ್ಮ ಸಹೋದರ ಕೃಷ್ಣಾ ಜಿ ಬೇಡ್ಕಣಿ ಮರುಹುಟ್ಟು ನೀಡಿದ ಈ ಮಂಡಳಿ ಇಂದು ಇಪ್ಪತ್ತಾರನೆಯ ವರ್ಷಕ್ಕೆ ಪಸದಾರ್ಪಣೆ ಮಾಡುತ್ತಿದ್ದು ಇಪ್ಪತ್ತೈದರ ಸಂಭ್ರಮವನ್ನು ಒಂದು ಹಬ್ಬದಂತೆ ಆಚರಿಸಬೇಕಿದೆ. ಅದಕ್ಕೆ ಕಲಾಭಿಮಾನಿಗಳ ಸಹಕಾರ ಬೇಕು ಎಂದರು.
ನಂತರ ಪಾಪಣ್ಣ ವಿಜಯ – ಗುಣಸುಂದರಿ ಎಂಬ ಪ್ರಸಂಗವನ್ನು ಬಯಲಾಟವಾಗಿ ಪ್ರದರ್ಶಿಸಲಾಯಿತು.ಹಿಮ್ಮೇಳದಲ್ಲಿ ಭಾಗವತರಾಗಿ ಕೃಷ್ಣ ಮರಾಠೆ , ಗಣಪತಿ ಭಟ್ಟ ಭರತೋಟ, ಮೃದಂಗ: ವಿಠ್ಠಲ ಪೂಜಾರಿ ಮಂಚಿಕೇರಿ, ಚಂಡೆ: ಕೃಷ್ಣ ಮೂರ್ತಿ ನಾಗರಕೊಡಗಿ . ಹಾಗೂ ಪಾತ್ರಧಾರಿಗಳಾಗಿ ಉಗ್ರಸೇನ: ಶ್ರೀಕಾಂತ ಹೆಗಡೆ ಹೆಗ್ಗೋಡು, ಹೇಮಸುಂದರಿ: ಪುರುಷೋತ್ತಮ ನಾಯ್ಕ ಮಂಜಿನಕಾನು, ರೂಪಸುಂದರಿ: ಗಿರಿಧರ ನಾಯ್ಕ , ಗುಣಸುಂದರಿ : ಕನ್ನಪ್ಪ ಮಾಸ್ತರ್ ತಡಗಳಲೆ ದೂತ: ವೆಂಕಟ್ರಮಣ ಹೆಗಡೆ ಮಾದ್ನಕಳ, ಪಾಪಣ್ಣ: ಕೃಷ್ಣಾ.ಜಿ.ಬೇಡ್ಕಣಿ , ದುರ್ಮುಖ: ಪ್ರಣವ್ ಭಟ್ ಸಿದ್ದಾಪುರ, ದುರ್ಮತಿ: ಮಂಜುನಾಥ ಶೆಟ್ಟಿ ಕಾಳೆನಳ್ಳಿ, ಚಂದ್ರಸೇನ: ವಿನಾಯಕ ಮಾಸ್ತರ್ ಕೂಜಳ್ಳಿ, ಯಕ್ಷಿಣಿ: ಸದಾನಂದ ಪಟಗಾರ ಸಿರಶಿ, ಕುಬೇರ: ಲಕ್ಷ್ಮೀನಾರಾಯಣ ಹೆಗಡೆ ಶಿರಗುಣಿ, ಈಶ್ವರ: ಶಿವು ಶಿರಳಗಿ, ಬಲ್ಲೂಕ: ಜನಾರ್ಧನ ಹಾರ್ಸಿಕಟ್ಟಾ ಸುಂದರ ಪ್ರದರ್ಶನ ನೀಡಿದರು.

