ಅಲ್ಲಲ್ಲಿ ವನಮಹೋತ್ಸವ, ವೃಕ್ಷಾರೋಪಣೆ

ಭಾರತಿ ಸಂಪದ,ಸಂಸ್ಕೃತಿ
ಸಂಪದ,ಪ್ರಯೋಗ ಸ್ವಯಂ ಸೇವಾ ಸಂಸ್ಥೆಯವರು
ಅರಣ್ಯ ಇಲಾಖೆಯ ಸಹಯೋಗದೊಂದಿಗೆ ವಿಶ್ವಪರಿಸರ
ದಿನಾಚರಣೆಯ ಪ್ರಯುಕ್ತ ಇಲ್ಲಿನ
ವಡ್ನಗದ್ದೆಯಲ್ಲಿ ದೇವದಾರು ಮತ್ತು ದಾರುಹರಿದ್ರ
ಬನ ನಿರ‍್ಮಾಣಕ್ಕೆ ಚಾಲನೆ ನೀಡಿದರು.


ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪರಿಸರ ತಜ್ಞ
ಶಿವಾನಂದ ಕಳವೆ ಮಾತನಾಡಿ, ಇಂದಿನ ಯುವ
ಪೀಳಿಗೆಯವರಿಗೆ ನಮ್ಮ ಸುತ್ತ-ಮುತ್ತ ಇರುವ ಮರ-
ಗಿಡಗಳ ಹೆಸರು ತಿಳಿದಿಲ್ಲ ಗೂಗಲ್ ಸರ್ಚ್ ಮಾಡಿ
ಹೆಸರನ್ನು ಹುಡುಕುತ್ತಾರೆ ಅದರಲ್ಲಿ ಬ್ರಿಟೀಷ್‌ರು
ಇಟ್ಟಿರುವ ಹೆಸರುಗಳು ಇರುತ್ತವೆ ಆದರೆ ಇಂತಹ
ಕಾರ್ಯಕ್ರಮವನ್ನು ಮಾಡುವ ಮೂಲಕ ಮಕ್ಕಳಲ್ಲಿ
ಸ್ಥಳೀಯ ಮರಗಿಡಗಳ ಬಗ್ಗೆ ಮಾಹಿತಿ ಸಿಗುವಂತೆ
ಮಾಡಲಾಗುತ್ತಿದೆ. ಇಂದು ಕೇವಲ ಮರಗಿಡಗಳು
ಮಾತ್ರ ನಾಶವಾಗುತ್ತಿಲ್ಲ ಜಲಮೂಲಗಳು
ನಾಸವಾಗುತ್ತಿವೆ ಪರಿಸರ ಎಂದರೆ ಇವೆಲ್ಲವೂ
ಒಳಗೊಂಡಿರುತ್ತದೆ ಎಂಬ ಪ್ರಜ್ಞೆ ನಮಗೆ ಇರಬೇಕು.
ಪ್ರತಿಯೊಂದು ಮರಗಳ ಜೊತೆಗೆ ಒಂದು ಕತೆ
ಇರುತ್ತದೆ ಇವೆಲ್ಲವುಗಳ ಅರಿವು ಮಕ್ಕಳಿಗೆ
ಮೂಡಬೇಕು. ಸಿದ್ದಾಪುರದಲ್ಲಿ ಸಾಕಷ್ಟು ಹಸಿರು
ಶಕ್ತಿಗಳು ಇವೆ ಹಲವು ವ್ಯಕ್ತಿಗಳು ಯಾವುದೇ
ಫಲಾಪೇಕ್ಷೆ ಇಲ್ಲದೆ ಪರಿಸರ ರಕ್ಷಣೆಯ ಕಾರ್ಯದಲ್ಲಿ
ತೊಡಗಿಕೊಂಡಿದ್ದಾರೆ. ಎಂದು ಹೇಳಿದರು. ‌


ಡಾ.ಶ್ರೀಧರ ವೈದ್ಯ ಮಾತನಾಡಿ,ಇಂದು ಪ್ರಚಾರಪ್ರಿಯ
ಪರಿಸರವಾದಿಗಳು ಹೆಚ್ಚಾಗುತ್ತಿದ್ದಾರೆ ಇವರ ನಡುವೆ
ಗಣಪತಿ ಹೆಗಡೆಯಂತಹವರು ಯಾವುದೇ
ಪ್ರಚಾರವಿಲ್ಲದೆ ಪರಿಸರ ಉಳಿಸುವ ಕೆಲಸ
ಮಾಡುತ್ತಿದ್ದಾರೆ ಸರಕಾರ ಇಂತಹವರನ್ನು
ಗುರುತಿಸಬೇಕು. ಕೇವಲ ಗಿಡವನ್ನು ನೆಟ್ಟರೆ ಸಾಲದು
ಅದನ್ನು ಬೆಳೆಸುವ ಕೆಲಸವೂ ಆಗಬೇಕು ಅದು
ನಾಶವಾಗದಂತೆ ಕಾಪಾಡಬೇಕು.
ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಭಾಗವಹಸಿದ್ದ ವಲಯ ಅರಣ್ಯ
ಅಧಿಕಾರಿ ಶಿವಾನಂದ ನಿಂಗಾಣಿ,ಪರಿಸರ ತಜ್ಞ
ಎಂ.ಬಿ.ನಾಯ್ಕ,ಕನ್ನೇಶ ಕೋಲಸಶಿರ್ಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಕೃತಿ ಸಂಪದ ವಿಜಯ ಹೆಗಡೆ
ದೊಡ್ಮನೆ,ಪಿ.ಬಿ.ಹೊಸೂರು,ಸುರೇಂದ್ರ
ಧಪೇದಾರ,ಯಕ್ಷಗಾನ ಕಲಾವಿದ ಅಶೋಕ
ಭಟ್,ಅರಣ್ಯಾಧಿಕಾರಿ ಮಂಜುನಾಥ
ಚನ್ನಣ್ಣನವರ್,ಲ.ರಾಘವೇಂದ್ರ ಭಟ್ಟ,ಕೃಷಿ ಸಹಾಯಕ
ನಿರ್ದೇಶಕ ಪ್ರಶಾಂತ ಜಿ. ಮುಂತಾದ ವರು
ಉಪಸ್ಥಿತರಿದ್ದರು.
ಪ್ರಯೋಗ ಸಂಸ್ಥೆಯ ಗಂಗಾಧರ ಕೊಳಗಿ
ಪ್ರಾಸ್ತಾವಿಕ ಮಾತನಾಡಿದರು. ಭಾರತಿ ಸಂಪದ
ಸಂಸ್ಥೆಯ ಗಣಪತಿ ಹೆಗಡೆ ವಡ್ಡಿನಗದ್ದೆ ಸ್ವಾಗತಿಸಿದರು.
ಹಿರಿಯ ಜೀವಿಗಳಾದ ಮಹಾಬಲೇಶ್ವರ
ಹೆಗಡೆ,ವೆಂಕಟರಮಣ ಹೆಗಡೆ,ಗೋಪಾಲ ಭಟ್ಟ ಬಾವಿಕೈ
ದೇವದಾರು ಮತ್ತು ದಾರುಹರಿದ್ರ ಗಿಡಗಳನ್ನು
ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ
ನೀಡಿದರು.
ಕ್ಯಾದಗಿ ನರ್ಸರಿಯ ದ್ಯಾವಾ ಕನ್ನಾ ನಾಯ್ಕರನ್ನು ಇದೇ
ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸಿದ್ದಾಪುರ :ಜೂನ 5 ರಿಂದ 12ರವರೆಗೆ ನಡೆಯುವ ಬಿಜೋತ್ಸವ ಕಾರ್ಯ ಕ್ರಮ ದ ಅಂಗವಾಗಿ ಶನಿವಾರ
ತಾಲೂಕಿನ ಮಾಧ್ಯಮ ವರದಿಗಾರ ಮಿತ್ರರಿಗೆ ಅರಣ್ಯ ಇಲಾಖೆಯ ವತಿಯಿಂದ ಅರಣ್ಯ ಇಲಾಖೆಯ ನರ್ಸರಿಗಳಲ್ಲಿ ವಿವಿಧ ಯೋಜನೆಗಳಲ್ಲಿ ಬೆಳೆಸಿದ ಸಸಿಗಳ ಕುರಿತು ಮಾಹಿತಿ ಕಾರ್ಯಾಗಾರವನ್ನು ತಾಲೂಕಿನ ಹೊಸೂರು ಮತ್ತು ಕ್ಯಾದಗಿ ನರ್ಸರಿಗಳಲ್ಲಿ ಹಮ್ಮಿಕೊಳ್ಳಲಾಗಿತ್ತು.
ಹೊಸೂರು ನರ್ಸರಿಯಲ್ಲಿ ಸಿದ್ದಾಪುರ ವಲಯಾರಣ್ಯಾಧಿಕಾರಿ ಶಿವಾನಂದ್ ಎಸ್ ನಿಂಗಾಣಿ ಮಾತನಾಡಿ ಹೊಸೂರು ನರ್ಸರಿ ನಾಲ್ಕು ಹೆಕ್ಟೇರ್ ಪ್ರದೇಶದಲ್ಲಿ ಇದ್ದು ಇಲ್ಲಿ ಪ್ರತಿವರ್ಷ ನೆಡುತೋಪುಗಳಿಗೆ ಹಾಗೂ ಸಾರ್ವಜನಿಕ ವಿತರಣೆ ಸಸಿಗಳನ್ನು ಬೆಳೆಸಲಾಗುತ್ತಿದೆ 45 ರಿಂದ 50 ಜಾತಿಯ ಸಸ್ಯಗಳನ್ನು ಬೆಳೆಸಲಾಗುತ್ತಿದೆ ಈ ವರ್ಷ 245470 ಸಸಿಗಳನ್ನು ಬೆಳೆಸಲಾಗಿದೆ. ಸಂಪಗೋಡ ನರ್ಸರಿಯಲ್ಲಿ 3 ಹೆಕ್ಟೇರ್ ಪ್ರದೇಶದಲ್ಲಿ 198450 ಸಸಿಗಳನ್ನು ಬೆಳೆಸಲಾಗಿದೆ ಹಲಗೇರಿ ನರ್ಸರಿಯಲ್ಲಿ 2 ಹೆಕ್ಟೇರ್ ಪ್ರದೇಶದಲ್ಲಿ 27460 ಸಸಿಗಳನ್ನು ಬೆಳೆಸಲಾಗಿದೆ.
ಸಾರ್ವಜನಿಕರು ರೈತ ಪ್ರೋತ್ಸಾಹ ಯೋಜನೆಯಡಿ ಗಿಡಗಳನ್ನು ಪಡೆದು ತಮ್ಮ ಖಾತೆ ಜಮೀನಿನಲ್ಲಿ ನೆಡಬಹುದು. ಇದಕ್ಕೆ ಮೂರು ವರ್ಷಗಳಲ್ಲಿ 125 ರೂ ಸಹಾಯ ಧನ ಪಡೆಯುವ ಅವಕಾಶವಿದ್ದು, ತಮ್ಮ ಅರ್.ಟಿ.ಸಿ, ಆಧಾರ ಕಾರ್ಡ, ಬ್ಯಾಂಕ್ ಪಾಸ್ ಬುಕ್ ಝೇರಾಕ್ಸ್, ಎರಡು ಪೋಟೋ, ಜಾಗದ ಸರ್ವೆ ಸ್ಕೆಚ್ ನೀಡಿ ಪ್ರಯೋಜನ ಪಡೆದುಕೊಳ್ಳಬಹುದು.

ಕಾನಗೋಡು ಕೆರೆಭೇಟೆ ಗಲಾಟೆ,‌ ಪೊಲೀಸರಿಗೆ ಗಾಯ, ಅಂಗಡಿ-ಮುಂಗಟ್ಟುಗಳಿಗೆ ಹಾನಿ ೧೨ ಜನ ಆರೆಸ್ಟ್


ಹೊಸೂರು ಪಾರ್ಕ್ನಲ್ಲಿ ಹೊಸೂರ್ ಸರ್ವೆ ನಂಬರ್ 23 ಮತ್ತು ತ್ಯಾರ್ಸಿ ಸರ್ವೆ ನಂಬರ್ 89ರಲ್ಲಿ ಟ್ರೀ ಪಾರ್ಕ್ ನಿರ್ಮಾಣ ಮಾಡಿದ್ದು,
ಹಲವಾರು ಔಷಧೀಯ ಸಸ್ಯಗಳನ್ನು ಬೆಳೆಸಲಾಗಿದೆ ಸಾರ್ವಜನಿಕರು ಹಾಗೂ ಮಕ್ಕಳಿಗೆ ಅನುಕೂಲವಾಗುವಂತೆ ಉದ್ಯಾನವನಕ್ಕೆ ಮುಕ್ತ ಪ್ರವೇಶ ನೀಡಲಾಗಿದೆ. 2020- 21 ನೇ ಸಾಲಿನಲ್ಲಿ 960 ಹಾಗೂ 2020- 22 ನೇ ಸಾಲಿನಲ್ಲಿ 450 ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಪೋಷಣೆ ಮಾಡಲಾಗುತ್ತಿದೆ. ಎಂದರು.
.ಬೀಜ ಬಿತ್ತನೆ ಅಭಿಯಾನ ಮತ್ತು ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ವರದಿಗಾರರು ಭೀಜ ಬಿತ್ತನೆ ಮಾಡಿದರು.
ಕ್ಯಾದಗಿ ವಲಯ ಅರಣ್ಯ ಅಧಿಕಾರಿ ಅಜಯ್ ಕುಮಾರ್ ಮಾತನಾಡಿ ಕ್ಯಾದಗಿ ನರ್ಸರಿಯಲ್ಲಿ 212 ಹೆಕ್ಟೇರ್ ಹಣ್ಣು-ಹಂಪಲು ಬೆತ್ತ ಹಾಗೂ ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಎರಡುವರೆ ಲಕ್ಷ ಸಸ್ಯಗಳನ್ನು ಬೆಳಸಲಾಗಿದೆ. ಇದರಲ್ಲಿ ಅಳಿವಿನಂಚಿನಲ್ಲಿರುವ 42 ವಿವಿಧ ಜಾತಿಯ ಸಸ್ಯ ಗಳನ್ನು ಬೆಳೆಸಲಾಗುತ್ತಿದೆ. ಬೀಜ ಬಿತ್ತನೆ ಅಭಿಯಾನ ಮತ್ತು ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *