

ಕಾಡು ಪ್ರಾಣಿಗಳಿಂದ ಬೆಳೆಹಾನಿ ಅನುಭವಿಸಿದ ವೃದ್ಧ ನೊಬ್ಬ ಸ್ಮಶಾನಕ್ಕೆ ತೆರಳಿ ಆತ್ಮಹತ್ಯೆ ಗೆ ಶರಣಾದ ಘಟನೆ ಸಿದ್ದಾಪುರದ ಕೋ ಲಶಿರ್ಸಿ ಯಲ್ಲಿ ನಡೆದಿದೆ. ಮೃತ ವ್ಯಕ್ತಿ 75 ವರ್ಷಗಳ ನಾರಾಯಣ ಶಿವ ನಾಯ್ಕ ಮಣೆಗಾರ.
ಶನಿವಾರ ಮನೆಯಿಂದ ನಾಪತ್ತೆಯಾ ಗಿದ್ದವರು ಮರಳಿ ಮನೆಗೆ ಬಾರದಿರುವುದರಿಂದ ಎರಡು ದಿವಸಗಳ ಹುಡುಕಾಟದ ನಂತರ ಸೋಮುವಾರ ಸಾಯಂಕಾಲ ಕೋಲಶಿರ್ಸಿ ಸ್ಮಶಾನ ದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಕಾಡು ಪ್ರಾಣಿಗಳು ಭತ್ತದ ಬೆಳೆ ನಾಶ ಮಾಡಿರುವುದನ್ನೇ ಮನಸ್ಸಿಗೆ ಹಚ್ಚಿಕೊಂಡು ನೇಣಿಗೆ ಕೊರಳೊಡ್ಡಿದ್ದಾನೆ ಎನ್ನಲಾಗಿದೆ. ನಾರಾಯಣ ಶಿವ ನಾಯ್ಕ ಇಬ್ಬರು ವಿವಾಹಿತ ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಕಾಡುಪ್ರಾಣಿಗಳ ಹಾವಳಿಗೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವುದರಿಂದ ಅವಶ್ಯ ಪೊಲೀಸ್ ಕ್ರಮದ ನಂತರ ಸೋಮುವಾರ ತಡರಾತ್ರಿಯೇ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

