

ಸಿದ್ದಾಪುರ ನಗರದ ಬದ್ರಿಯಾ ಜಮಿಯ ಮಸೀದಿಯ ಶಾದಿ ಹಾಲನಲ್ಲಿ ಮಸೀದಿ ಅಧ್ಯಕ್ಷ ಹಾಗೂ ಸದಸ್ಯರ ಆಯ್ಕೆ ಪ್ರಕ್ರಿಯೆಯ ಸಭೆಯುನಡೆದು ಎಲ್ಲರ ಒಮ್ಮತದಿಂದ ಬುಡಾಣ ಸಾಬ್ ರನ್ನು ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದು ನಂತರ ಬುಡನ್ ಸಾಬ್ ರು ಕೆಲವು ಸದಸ್ಯರನ್ನು ಆಯ್ಕೆ ಮಾಡಬೇಕೆಂದು ಹೇಳಿದಾಗ ಚೀಟಿಯಲ್ಲಿದ್ದ ಹೆಸರುಗಳನ್ನು ಮಸೀದಿಯ ಹಂಗಾಮಿ ಅಧ್ಯಕ್ಷರಾದ ಮುನಾವರ್ ಗುರುಕಾರ್ ಓದಲು ಶುರು ಮಾಡಿದಾಗ ಮಸೀದಿಯ ಎರಡು ಗುಂಪುಗಳಲ್ಲಿ ಗಲಾಟೆ ಪ್ರಾರಂಭವಾಗಿ ಹೊಡೆದಾಡಿಕೊಂಡಿದ್ದು ಎರಡು ಗುಂಪಿನವರು ಸಿದ್ದಾಪುರ ಪೊಲೀಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಿದ್ದಾರೆ.


,ಸಿದ್ದಾಪುರ: ಬೇರೆ ಭಾಷೆಗಳು ಉದರದ ಭಾಷೆಯಾದರೆ ಕನ್ನಡ ಹೃದಯದ ಭಾಷೆಯಾಗಲಿ. ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಹೆಚ್ಚಾಗಿ ಕನ್ನಡ ಭಾಷೆಯನ್ನು ಬಳಸಬೇಕೆಂದು ಯುವ ಪೀಳಿಗೆಯವರಲ್ಲಿ ಮನವಿ ಮಾಡುತ್ತೇನೆ ಎಂದು ತಾಲ್ಲೂಕಿನ ನ್ಯಾಯಾಧೀಶರಾದ ತಮ್ಮಯ್ಯ ಜಿ ಹೇಳಿದರು.
ಅವರು ತಾಲ್ಲೂಕಿನ ಭುವನಗಿರಿಯ ಭುವನೇಶ್ವರಿ ದೇವಾಲಯದಲ್ಲಿ ನಡೆದ ಮಾತೃವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಂಗಳವಾರ ಮಾತನಾಡಿದರು.
ನಾಡಿನ ಹಿರಿಮೆಯನ್ನು ಹೆಚ್ಚಿಸುವಲ್ಲಿ ಶ್ರಮಿಸಿ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದವರ ಮಧ್ಯೆ ಕುಳಿತಿರುವುದು ಹೆಮ್ಮೆಯ ವಿಷಯ. ನಾನೂ ಕೂಡ ನ್ಯಾಯಾಲಯದಲ್ಲಿ ಸಾಧ್ಯವಾದಷ್ಟು ಕನ್ನಡದಲ್ಲಿ ತೀರ್ಪನ್ನು ಕೊಡಲು ಪ್ರಯತ್ನಿಸುತ್ತಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ವೈದ್ಯರಾದ ಆರ್ ಎಸ್ ಹೆಗಡೆ ಹಾರ್ಸಿಮನೆ, ರಾಜ್ಯ ನಾಟಕ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ಶ್ರೀಧರ ಹೆಗಡೆ ಹುಲಿಮನೆ, ಸಾಹಿತಿ,ನಿವೃತ್ತ ಮುಖ್ಯೋಪಾಧ್ಯಾಯ ಪದ್ಮಾಕರ ಮಡಗಾಂಕರ ಬಿಳಗಿ, ಸಾಹಿತಿ,ನಿವೃತ್ತ ಮುಖ್ಯೋಪಾಧ್ಯಾಯ ಶ್ರೀಪಾದ ಹೆಗಡೆ ಮಗೇಗಾರ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹಸೆ ಚಿತ್ತಾರ ಕಲಾವಿದ ಈಶ್ವರ ನಾಯ್ಕ ಹಸ್ವಂತೆ, ಅಂತರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಗ್ರಾಹಕರಾದ ನಾಗೇಂದ್ರ ಮುತ್ಮುರಡು ರಿಗೆ “ಶ್ರೀಮಾತಾ ಅನುಗ್ರಹ” ಗೌರವ ಸಂಮಾನ ನೀಡಿ ಗೌರವಿಸಲಾಯಿತು.
ದೇವಾಲಯದ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಾತೃವಂದನಾ ಸಮಿತಿಯ ಕಾರ್ಯಾಧ್ಯಕ್ಷರಾದ ನಾಗರಾಜ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗವೇಣಿ ಭಟ್ ಮುತ್ತಿಗೆ ಸಂಗಡಿಗರು ಪ್ರಾರ್ಥಿಸಿದರು.
ಚಂದ್ರಕಾಂತ ಹೆಗಡೆ ಸ್ವಾಗತಿಸಿದರು.
ಪ್ರಶಾಂತ ಹೆಗಡೆ ವಂದಿಸಿದರು
ಗಣಪತಿ ಹೆಗಡೆ ಗುಂಜಗೋಡ ನಿರೂಪಿಸಿದರು.
https://www.youtube.com/watch?v=OfL6f0k1cOM

