

ಈ ಹಿಂದೆ ದೇವಸ್ಥಾನ ಪ್ರವೇಶಿಸುವ ಪುರುಷ ಭಕ್ತರಿಗೆ ಪಂಚೆ, ಶಲ್ಯ ಮಹಿಳೆಯರಿಗೆ ಸೀರೆ, ಚೂಡಿದಾರ ದಿರಿಸನ್ನು ಆಡಳಿತ ಮಂಡಳಿ ಕಡ್ಡಾಯ ಮಾಡಿತ್ತು. ಇದೀಗ ರಥ ಬೀದಿಯಿಂದ ಪಶ್ಚಿಮ ಧ್ವಾ ರದವರೆಗೆ ಅರೆಬರೆ ಉಡುಪು ಧರಿಸಿ ಸಾರ್ವಜನಿಕರು ಸಂಚರಿಸಲು ನಿಷೇಧ ಹೇರಿ ನಾಮಫಲಕ ಹಾಕಿದ್ದಾರೆ.
ಪುರಾಣದಿಂದ ಪ್ರಸಿದ್ಧವೂ ವಿವಾದದಿಂದ ಕುಪ್ರಸಿದ್ಧವೂ ಆಗಿರುವ ದಕ್ಷಿಣದ ಕಾಶಿ ಗೋಕರ್ಣದಲ್ಲಿ ವಸ್ತ್ರ ಸಂಹಿತೆ ಜಾರಿಗಾಗಿ ಮಾಡಿದ ದೇವಸ್ಥಾನ ಆಡಳಿತ ಸಮೀತಿ ತೀರ್ಮಾನ ವಿವಾದದಿಂದಾಗಿ ಜನರ ಗಮನ ಸೆಳೆದಿದೆ.
ಗೋಕರ್ಣದಲ್ಲಿ ದೇಶ-ವಿದೇ ಶಗಳ ಪ್ರವಾಸಿಗರು ಹೆಚ್ಚಿರುವುದರಿಂದ ಹಲವು ಬಾರಿ ಗೋಕರ್ಣ ಅಲ್ಲಿಯ ಅಶಿಸ್ತು,ಅಶ್ಲೀಲತೆಗಳಿಂದ ಜನರ ಗಮನ ಸೆಳೆಯುವ ವರ್ತಮಾನಗಳು ವರದಿಯಾಗಿವೆ. ದೇವಸ್ಥಾನದ ಒಳಗೆ ವಸ್ತ್ರಸಂಹಿತೆ,ಕೆಲವು ನಿಬಂಧನೆಗಳಿದ್ದ ಬಗ್ಗೆ ಸಾರ್ವಜನಿಕರ ವಿರೋಧವಿದೆ. ಆದರೆ ಈಗ ದೇವಸ್ಥಾನ ಸಮೀತಿ ಅಲ್ಲಿಯ ರಥ ಬೀದಿಯಲ್ಲಿ ಅರೆ-ಬರೆ ಬಟ್ಟೆ ತೊಟ್ಟು ಸಂಚರಿಸಲು ನಿರ್ಬಂಧ ಹೇರಿರುವ ವಿಚಾರ ಸಾರ್ವತ್ರಿಕ ವಿರೋಧಕ್ಕೆ ಕಾರಣವಾಗಿದೆ. ಜಿಲ್ಲಾಡಳಿತ ಮಧ್ಯಪ್ರವೇಶದಿಂದ ಈ ವಿವಾದ ತಾತ್ಕಾಲಿಕವಾಗಿ ಬಗೆಹರಿದಿದ್ದು ಸಾರ್ವಜನಿಕರೂ ಕೂಡಾ ನಿಟ್ಟುಸಿರು ಬಿಟ್ಟಿದ್ದಾರೆ. ದೇವಸ್ಥಾನ ಆಡಳಿತದ ಕರ್ಮಠದ ರೀತಿ-ನೀತಿಗಳು, ಸಾರ್ವಜನಿಕರ ಸ್ವೇಚ್ಛಾಚಾರ ಇವು ಗಳ ಮಧ್ಯೆ ಸಮನ್ವಯದ ಸುವರ್ಣಪಥದ ನೀತಿ- ನಿರ್ಧಾರಗಳಿಂದ ದೇವಸ್ಥಾನ ಮುಂದುವರಿಯಬೇಕಿದೆ.
