

ಸಿದ್ಧಾಪುರ ತಾಲೂಕಿನ ತ್ಯಾಗಲಿ ಗ್ರಾಮ ಪಂಚಾಯತ್ ಬಾಳೆಕೈ ಬಿಳೇಗೋಡಿನ ಅರಣ್ಯ ಅತಿಕ್ರಮಣದಾರ ಅರಣ್ಯ ಇಲಾಖೆಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಕೊಲೆಪ್ರಯತ್ನ ನಡೆಸಿರುವ ಬಗ್ಗೆ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಿಳೇಗೋಡಿನ ಮಾಬ್ಲೇಶ್ವರ ಚಂದು ಮರಾಠೆ ಉಪ ವಲಯ ಅರಣ್ಯ ಅಧಿಕಾರಿ ರಾಜೇಶ್ ಗೌಡ ರ ಮೇಲೆ ಹಲ್ಲೆ ನಡೆಸಿದ ಬಗ್ಗೆ ದೂರು ದಾಖಲಾಗಿದೆ.
ದಿ : 17/11/2022 ರಂದು 12:30 ಗಂಟೆಗೆ ಶ ರಾಜೇಶ ತಂದೆ ಮಂಜುನಾಥ ಗೌಡ , ಪ್ರಾಯ : 29 ವರ್ಷ , ಉದ್ಯೋಗ : ಅರಣ್ಯ ರಕ್ಷಕ ( ಫಾರಸ್ಥ ಗಾರ್ಡ ) , ಸಾ|| ಕಾನಗೋಡ , ಹೊನ್ನಾವರ ಹಾಲಿ ಕಾನಸೂರ , ತಾ : ಸಿದ್ದಾಪುರ , ಇವರು ಠಾಣಿಗೆ ಹಾಜರಾಗಿ , ಈ ದಿನ ಬೆಳಗ್ಗೆ ತಾನು , ಉಪ ವಲಯ ಅರಣ್ಯಾಧಿಕಾರಿಗಳಾದ ವಿಶ್ವನಾಥ ತಿಮ್ಮಪ್ಪ ನಾಯ್ಕ , ಗಾರ್ಡ ಮಣಿಕಂಠ , ಗಾರ್ಡ ರೋಹಿತ ನಾಯ್ಕ ಹಾಗೂ ವಾಚರ್ ಗೋಪಾಲ ನಾಯ್ಕ ರವರು ಸೇರಿಕೊಂಡು ಕಾನಸೂರು ಭಾಗದ ಅರಣ್ಯದಲ್ಲಿ ಗಸ್ತು ಕರ್ತವ್ಯಕ್ಕೆ ಹೋಗಿದ್ದಾಗ ಸಿದ್ದಾಪುರ ತಾಲೂಕಿನ ಬಾಳಕೈ ಗ್ರಾಮದ ಬಿಳೆಗೋಡ ಊರಿನ ಮಬ್ಲೆಶ್ವರ ಚಂದು ಮರಾಠಿ ಈತನು ಅವನ ಮಾಲ್ಕಿ ಜಾಗದ ಪಕ್ಷದಲ್ಲಿರುವ ಅರಣ್ಯ ಸರ್ವೆ ನಂ 25 ರಲ್ಲಿ ಅರಣ್ಯ ಅತಿಕ್ರಮಣ ಮಾಡಿ ಹೊಸ ಶೆಡ್ ನಿರ್ಮಿಸಿಕೊಂಡಿದ್ದನ್ನು ನೋಡಿ ಅತಿಕ್ರಮಣ ಮಾಡುವದು ತಪ್ಪು ಹೊಸ ಅತಿಕ್ರಮಣಕ್ಕೆ ಅವಕಾಶ ಇಲ್ಲ . ನೀನು ನಿನ್ನ ಮಾಲ್ಕಿ ಜಾಗದಲ್ಲಿ ಮನೆ ಕಟ್ಟಕೊ ಅಂತಾ ಹೇಳಿದಾಗ ಆತನು ಸಿಬ್ಬಂದಿಗಳ ಸಲಹೆಗೆ ಕಿಮ್ಮತ್ತು ಕೊಡದೆ ಏಕಾಏಕಿ ಸಿಟ್ಟಾದವನು ಫಾರೆಸ್ಥ ಮಕ್ಕಳಾ ನಿಮ್ಮದು ಬಹಳಾ ಆಯ್ತು , ನಿಮ್ಮಲ್ಲ ಒಬ್ಬರನ್ನು ತೆಗೆದರೆ ಇನ್ನು ಮುಂದೆ ಫಾರೆಸ್ಸಿನ ಮತ್ಯಾರೂ ನಮ್ಮ ಸುದ್ದಿಗೆ ಬರೋದಿಲ್ಲ . ನೀವು ಇಲ್ಲಂದ ಹೇಗೆ ಜೀವಂತ ವಾಪಸ್ ಹೋಗುತ್ತಿರಿ ಅಂತಾ ನೋಡುತ್ತೇನೆ . ನಿಮ್ಮನ್ನು ಕೊಂದೇ ಹಾಕುತ್ತೇನೆ ಅಂತಾ ಹೇಳದವನೇ ಉಪ ವಲಯ ಅರಣ್ಯಾಧಿಕಾರಿ ವಿಶ್ವನಾಥ ಅವರ ಮೇಲೆ ಎರಗಿ ಅವನ ಕೈಯಲ್ಲಿದ್ದ ಕತ್ತಿಯನ್ನು ವಿಶ್ವನಾಥ ರವರ ಕುತ್ತಿಗೆಯನ್ನು ಕಡಿಯಲು ಬೀಸಿದ್ದು ತಪ್ಪಿಸಿಕೊಳ್ಳಲು ಅವರು ಬಲಗೈಯನ್ನು ಅಡ್ಡತಂದಿದ್ದರಿಂದ ಹತ್ತಿಯ ಏಟು ಬಲಗೈನ ಬೆರಳಿಗೆ ಅದ್ದು ಗಂಭೀರ ಸ್ವರೂಪದ ರಕ್ತ ಗಾಯವಾಗಿರುತ್ತದೆ .
ಆನಂತರ ಅವನು ನನ್ನ ಮೇಲೆಯೂ ಎರಗಿ ಸೂಳೇ ಮಗನೇ ನಿನಗೂ ಬಿಡುವುದಿಲ್ಲ ಅಂತಾ ಹೇಳಿ ಕತ್ತಿಯಿಂದ ಕಡಿಯಲು ಬಂದಾಗ ನಾನು ಕೈಯನ್ನು ಅಡ್ಡ ಮಾಡಿದ್ದರಿಂದ ಕತ್ತಿ ನನ್ನ ಎಡಕೈಬೆರಳಿಗೆ ತಾಗಿ ರಕ್ತ ಗಾಯವಾಗಿರುತ್ತದೆ . ಅಷ್ಟರಲ್ಲ ನಮ್ಮೊಂದಿಗಿದ್ದ ಉಳಿದ ಸಿಬ್ಬಂದಿಗಳು ಮುಂದೆ ಬಂದು ಬಿಡಿಸಿಕೊಂಡಿದ್ದು , ಆಗ ಅವನು ಸೂಳೇ ಮಕ್ಕಳ ಧಮ್ ಇದ್ದರೆ ಇನ್ನೊಮ್ಮೆ ನನ್ನ ಜಾಗಕ್ಕೆ ಕಾಲಟ್ಟು ನೋಡಿ ನಿಮ್ಮನ್ನು ಜೀವಂತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಸರ್ಕಾರಿ ಕೆಲಸಕ್ಕೆ ಅಡತರ ಮಾಡಿರುತ್ತಾನೆ . ಘಟನೆ ಆದಾಗ ಬೆಳಗ್ಗೆ 09:15 ಗಂಟೆ ಆಗಿತ್ತು ಈ ಬಗ್ಗ ಮಬ್ಲೆಶ್ವರ ತಂದೆ ಚಂದು ಮರಾಠಿ ಈತನ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ.




