

ಸಿದ್ಧಾಪುರ ತಾಲೂಕಿನ ಸಮಾಜಕಲ್ಯಾಣ ಇಲಾಖೆಯಗ್ರೇಡ್ ೧ ಸಹಾಯಕ ನಿರ್ಧೇಶಕ ಎಸ್.ಪಿ. ನರೋನ್ಹಾ ರವಿವಾರ ನಿಧನರಾದರು. ೧೯೯೩ ರಿಂದಸಮಾಜಕಲ್ಯಾಣ ಇಲಾಖೆಯಲ್ಲಿ ಸೇವೆಸಲ್ಲಿಸುತಿದ್ದ ಅವರು ಇತ್ತೀಚಿನ ವರ್ಷಗಳಲ್ಲಿ ಸಿದ್ಧಾಪುರದಲ್ಲಿ ಸಹಾಯಕ ನಿರ್ಧೇಶಕರಾಗಿ ಸೇವೆಯಲ್ಲಿದ್ದರು. ಕೆಲವು ವರ್ಷಗಳಿಂದ ಅನಾರೋಗ್ಯದಿಂದಾಗಿ ಕೃಶರಾಗಿದ್ದ ನರೋನ್ಹಾ ಪತ್ನಿ,ಮಗಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಸರ್ಕಾರಿ ರಜಾ ದಿನವಾದ ರವಿವಾರ ಮನೆಯಲ್ಲಿದ್ದ ನರೊನ್ಹಾರಿಗೆ ಅನಾರೋಗ್ಯ ಬಿಗಡಾಯಿಸಿದೆ. ಶಿರಸಿಯಿಂದ ಮಣಿಪಾಲಕ್ಕೆ ಚಿಕಿತ್ಸೆಗೆ ತೆರಳುತಿದ್ದಾಗ ಸಿದ್ಧಾಪುರಕ್ಕೆ ಬರುತಿದ್ದಂತೆ ತೀವೃ ತೊಂದರೆ ಕಾಣಿಸಿಕೊಂಡು ಸಿದ್ಧಾಪುರ ಸರ್ಕಾರಿ ಆಸ್ಫತ್ರೆಗೆ ತರುತಿದ್ದಂತೆ ಅವರು ಮೃತರಾಗಿರುವುದು ದೃಢಪಟ್ಟಿದೆ. ಹೊನ್ನಾವರ ಮೂಲದ ನರೊನ್ಹಾ ಶಿರಸಿಯಲ್ಲಿ ನೆಲೆಸಿ ಸಿದ್ಧಾಪುರಕ್ಕೆ ಪ್ರತಿದಿನ ಬಂದು ಮರಳುತಿದ್ದರು. ಮೃತರ ಸಂಬಂಧಿಗಳು ದೂರದ ಊರುಗಳಲ್ಲಿರುವುದರಿಂದ ಮಂಗಳವಾರ ಪೂರ್ವಾನ್ಹ ಅವರ ಹುಟ್ಟೂರು ಹೊನ್ನಾವರದಲ್ಲಿ ನರೋನ್ಹಾ ಅಂತ್ಯಕ್ರೀಯೆ ನಡೆಯಲಿದೆ. ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು ಮೃತರ ಆತ್ಮಕ್ಕೆ ಶಾಂತಿ ಕೋರಿ ಶೃದ್ಧಾಂಜಲಿ ಅರ್ಪಿಸಿದ್ದಾರೆ.

