

ಅಡಿಕೆ ಅಂಗಡಿ ಬೀಗ ಮುರಿದು ಸಂಗ್ರಹಿಸಿಡಲಾಗಿದ್ದ 5 ಕ್ವಿಂಟಾಲ್ ಅಡಿಕೆ ಕದ್ದೊಯ್ದ ಮೂವರನ್ನು ಹೊನ್ನಾವರ ಪೊಲೀಸರು ಬಂಧಿಸಿದ್ದಾರೆ.
ಉ.ಕ. ಹೊನ್ನಾವರದ ಅಡಿಕೆ ವ್ಯಾಪಾರಿ ಅಬ್ದುಲ್ ರವೂಫ್ ಎನ್ನುವವರಿಗೆ ಸೇರಿದ ಅಡಕೆ ಅಂಗಡಿಯಲ್ಲಿ ದಾಸ್ತಾನು ಮಾಡಿದ್ದ ಅಡಿಕೆಯನ್ನು ಕದ್ದೊಯ್ದ ಆರೋಪದ ಹಿನ್ನೆಲೆಯಲ್ಲಿ ಹಳದಿಪುರದ ಮೂವರನ್ನು ಬಂಧಿಸಲಾಗಿದೆ. ಬಂಧಿತರು ಅಡಿಕೆ ಅಂಗಡಿಯ ಬೀಗ ಮುರಿದು ಅಡಿಕೆ ಕದ್ದೊಯ್ದಿದ್ದರು.

