

——————————————
ರಾಜ್ಯ ಸರ್ಕಾರ ವೆಚ್ಚ ಉಳಿತಾಯದ ನೆಪ ಹೇಳಿ ರೈತರ ಜೀವನಾಡಿಯಾದ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳನ್ನು ಕೃಷಿ ಇಲಾಖೆಯಲ್ಲಿ ವಿಲೀನ ಗೊಳಿಸುತ್ತಿರುವು ದನ್ನು ಹಾಗೂ ರೇಷ್ಮೆ ಇಲಾಖೆಯ 2346 ಹುದ್ದೆಗಳನ್ನು ರದ್ದು ಪಡಿಸುತ್ತಿರುವದನ್ನು ಕರ್ನಾಟಕ ಪ್ರಾಂತ ರೈತ ಸಂಘದ ಉತ್ತರ ಕನ್ನಡ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.
,
ಗ್ರಾಮೀಣ ಪ್ರದೇಶದಲ್ಲಿ ತೋಟಗಾರಿಕೆಯಿಂದ ರೈತರು ಸ್ವಲ್ಪ ಉಸಿರಾಡುತ್ತಿದ್ದಾರೆ, ಜಿಲ್ಲೆಯ ರೈತರು ಅಡಿಕೆ , ತೆಂಗು, ಯಾಲಕ್ಕಿ , ಕಾಳು ಮೆಣಸು, ಹಣ್ಣು ಹಂಪಲ, ಹೂವು ಮುಂತಾದ ತೋಟಗಾರಿಕಾ ಬೆಳೆ ಬೆಳೆದು ತಮ್ಮ ಕುಟುಂಬಕ್ಕೆ ಅಷ್ಟೇ ಅಲ್ಲ ದೇಶಕ್ಕೂ ಆದಾಯ ತಂದು ಕೊಡುತ್ತಿದ್ದಾರೆ. ಒಟ್ಟು ದೇಶಗಳಲ್ಲಿ ಬೆಳೆಯುವ ರೇಷ್ಮೆಯಲ್ಲಿ ಶೇ.60 ರಷ್ಟು ನಮ್ಮ ರಾಜ್ಯದಲ್ಲಿ ಬೆಳೆಯುತ್ತಾರೆ. ಇಂತಹ ಇಲಾಖೆಗಳನ್ನು ರದ್ದು ಮಾಡುವ ಮೂರ್ಖತನವನ್ನು ರಾಜ್ಯ ಸರಕಾರ ತೋರಿಸುತ್ತಿದೆ.ಇದು ಸರ್ಕಾರದ ತಪ್ಪು ತೀರ್ಮಾನ. ರೈತರನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳುವ ಈ ತೀರ್ಮಾನವನ್ನು ಕೂಡಲೇ ವಾಪಸ್ಸು ಪಡೆಯಲು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶಾಂತಾರಾಮ ನಾಯಕ ಆಗ್ರಹಿಸಿದ್ದಾರೆ.
