

ಸಿದ್ದಾಪುರ: ತಾಲೂಕಿನ ಶ್ರೀ ಸಂಸ್ಥಾನ ತರಳೀಮಠದಲ್ಲಿ ಫೆಬ್ರವರಿ 18 ರ ಮಹಾಶಿವರಾತ್ರಿಯಂದು 35ನೇ ವರ್ಷದ 1008 ಶ್ರೀ ಸತ್ಯನಾರಾಯಣ ವ್ರತ ಕಲಶ ಪೂಜೆ ನಡೆಯಲಿದೆ ಎಂದು ವ್ರತ ಕಮಿಟಿ ಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳಿಗ್ಗೆ 8 ರಿಂದ 10 ಗಂಟೆವರೆಗೆ ಕಳಸಗಳಲ್ಲಿ ಜಲ ತುಂಬುವುದು, 10 ಗಂಟೆಯಿಂದ ಪೂಜಾ ಕಾರ್ಯಕ್ರಮ ಹಾಗೂ ಶ್ರೀ ಸತ್ಯನಾರಾಯಣ ಕಥಾ ನಿರೂಪಣೆ, ಮಧ್ಯಾಹ್ನ 12=30 ಕ್ಕೆ ಧರ್ಮಸಭೆ ಮತ್ತು ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ, ಮಧ್ಯಾಹ್ನ 2=30 ಕ್ಕೆ ಅನ್ನ ಸಂತರ್ಪಣೆ, ಸಂಜೆ 6=30 ರಿಂದ ಶಿವರಾತ್ರಿ ಪ್ರಯುಕ್ತ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 9=30 ಕ್ಕೆ ಧಾರ್ಮಿಕ ಜಾಗರಣೆ ನಡೆಯಲಿದೆ . ತರಳಿ ಮಠದ ಲ್ಲಿ ನಡೆಯುತ್ತಿರುವ ನೂತನ ದೇವಸ್ಥಾನಗಳ ಕಟ್ಟಡ ಕಾಮಗಾರಿ ಗಳಿಗೆ ಭಕ್ತಾಧಿಗಳು ತನು, ಮನ, ಧನ ಸಹಕಾರ ನೀಡುವಂತೆ ವಿನಂತಿಸಿದ್ದಾರೆ.





ಸಿದ್ದಾಪುರ: ಶಾಸ್ತ್ರೀಯ ಸಂಗೀತದ ಅಧ್ಯಯನ ಮತ್ತು ಅಧ್ಯಾಪನಕ್ಕಾಗಿ ಆರಂಭಗೊಂಡ ಗುರುಕುಲದ ನೂತನ ಕಟ್ಟಡದ ಉದ್ಘಾಟನೆ ಮತ್ತು ಪರಂಪರ ಸಂಗೀತ ಕಾರ್ಯಕ್ರಮ ಫೆ. 25ರಂದು ಆಯೊಜಿಸಲಾಗಿದೆ ಎಂದು ಆಧಾರ ಷಡ್ಜದ ಮುಖ್ಯಸ್ಥ ವಿನಾಯಕ ಹೆಗಡೆ ಹಿರೇಹದ್ದ ತಿಳಿಸಿದರು.
ಪಟ್ಟಣದ ರಾಘವೇಂದ್ರ ಮಠದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇಂದು ಪಟ್ಟಣಗಳಲ್ಲಿ ಸಂಗೀತ ಎಂದರೆ ಕೇವಲ ರಿಯಾಲಿಟಿ ಶೋಗಳಿಗೆ ಸೀಮಿತವಾಗಿದೆ. ಆದರೆ ಕ್ರಮಬದ್ಧ ಶಾಸ್ತ್ರೀಯ ಸಂಗೀತವನ್ನು ಅಧ್ಯಯನ ಮಾಡಲು ಇಚ್ಚಿಸುವ ವಿದ್ಯಾರ್ಥಿಗಳ ಅನುಕೂಲತೆಯ ದೃಷ್ಟಿಯಿಂದ 14 ವರ್ಷಗಳ ಹಿಂದೆ ಆಧಾರ ಷಡ್ಜ ಸಂಸ್ಥೆಯನ್ನು ಪ್ರಾರಂಭಿಸಲಾಯಿತು. ಈವರೆಗೆ 20 ರಿಂದ 25 ವಿದ್ಯಾರ್ಥಿಗಳು ಶಾಸ್ತ್ರೀಯ ಸಂಗೀತವನ್ನು ಅಧ್ಯಯನ ನಡೆಸಿದ್ದಾರೆ. ಪ್ರಸ್ತುತ 10-15 ವಿದ್ಯಾರ್ಥಿಗಳು ಸಂಗೀತ ಅಧ್ಯಯನ ನಡೆಸುತ್ತಿದ್ದಾರೆ. ಸಂಗೀತದ ಅಧ್ಯಯನ ಮತ್ತು ಅಧ್ಯಾಪನಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಸಂಗೀತ ಗುರುಕುಲಕ್ಕೆ ನೂತನ ಕಟ್ಟಡವನ್ನು ನಿರ್ಮಿಸಲಾಗಿದೆ. ಫೆ. 25ರಂದು ಸಂಜೆ 4 ಗಂಟೆಗೆ ಖ್ಯಾತ ಗಾಯಕರಾದ ಪಂಡಿತ್ ಗಣಪತಿ ಭಟ್ ಹಾಸಣಗಿ ಗುರುಕುಲದ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಜನ ಮಾಧ್ಯಮ ಪತ್ರಿಕೆಯ ಸಂಪಾದಕ ಅಶೋಕ ಹಾಸ್ಯಗಾರ್, ಶಿರಸಿಯ ಪ್ರಗತಿ ಟ್ರೇಡರ್ಸ್ ನ ಕೆ ಬಿ ಲೋಕೇಶ ಹೆಗಡೆ, ಹೊನ್ನಾವರದ ಖ್ಯಾತ ವೈದ್ಯರಾದ ಡಾ. ಯುವರಾಜ್ ಆರ್ ಪಿ, ಹೆಗ್ಗರಣೆಯ ಶಿಕ್ಷಣ ಸೇವಾ ಸಮಿತಿಯ ಅಧ್ಯಕ್ಷ ಎನ್ ಆರ್ ಭಟ್, ಸಮಾಜದ ಹಿರಿಯರಾದ ಎಂ ಎಸ್ ಹೆಗಡೆ ಕಮಲಕೊಪ್ಪ, ವಿ ಎಸ್ ಹೆಗಡೆ ಹಿರೇಹೆದ್ದ ಭಾಗವಹಿಸಲಿದ್ದಾರೆ. ನಂತರ ನಡೆಯುವ ಪರಂಪರಾ ಸಂಗೀತ ಕಾರ್ಯಕ್ರಮದಲ್ಲಿ ಪಂಡಿತ್ ಗಣಪತಿ ಭಟ್ ಹಾಸಣಗಿ, ವಿನಾಯಕ ಹೆಗಡೆ ಹಿರೇಹದ್ದ ಗಾಯಕರಾಗಿ ಪಂಡಿತ್ ಗೋಪಾಲಕೃಷ್ಣ ಹೆಗಡೆ ಕಲ್ಭಾಗ ತಬಲವಾದಕರಾಗಿ, ಸಂವಾದಿನಿಯಲ್ಲಿ ಭರತ್ ಹೆಗಡೆ ಹೆಬ್ಬಲಸು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಸಂಗೀತ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಶಶಾಂಕ್ ಮಡಿವಾಳ, ಅನಿಲ್ ಹೆಗಡೆ ತೆಂಗಾರುಮನೆ, ಸುಧೀರ್ ಬೇಂಗ್ರೆ ಇದ್ದರು.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
