ಕೋಲಶಿರ್ಸಿ ಮಾರಿಕಾಂಬಾದೇವಿಜಾತ್ರೆ..೨೦೦ ವರ್ಷಗಳ ಚರಿತ್ರೆ!

ಕೋಲಶಿರ್ಸಿ… ಹಲವು ವೈಶಿಷ್ಟ್ಯಗಳ ಗ್ರಾಮ. ಈ ಗ್ರಾಮದಲ್ಲಿ ಹೊಟ್ಟ್‌ ಕೆರೆ,ಹೊಸಕೆರೆ, ದೇವರ ಕೆರೆಗಳೆಂಬ ಮೂರು ಕೆರೆಗಳಿವೆ. ಸರಿಸುಮಾರು ೬ ನೂರು ಮನೆಗಳಲ್ಲಿ ಬಹುಪಾಲು ಹಳೆಪೈಕ,ದೀವರ ಮನೆಗಳು. ಒಂದು ಕುಟುಂಬ ಮಾತ್ರ ಹವ್ಯಕರದ್ದು,ಕೆಲವು ಕುಟುಂಬಗಳು ಲಿಂಗಾಯತ ಗೌಡರು ಮತ್ತು ಶೆಟ್ಟರಿಗೆ ಸೇರಿವೆ. ಒಂದು ಬಡಗಿ ಕುಟುಂಬ. ಇದೇ ಬಡಗಿ ಕುಟುಂಬ ಬಹುಸಂಖ್ಯಾತ ನಾಮಧಾರಿ ದೀವರ ಕೋಲಶಿರ್ಸಿ ಗ್ರಾಮದ ಮಾರಿಕಾಂಬಾ ದೇವಿ ಪೂಜಿಸುವ ಕುಟುಂಬ. ಇವರಂತೇ ಏಕೈಕ ಕುಟುಂಬವಾಗಿರುವ ಗಣಪತಿ ಹೆಗಡೆಯವರ ಕುಟುಂಬ ಗ್ರಾಮದ ಧಾರ್ಮಿಕ ಕೆಲಸಗಳಿಗೆ ಪೌರೋಹಿತ್ಯ ವಹಿಸುವುದು.

ಆದಿ ಯೋಧರು, ಹಳೆಪೈಕ ಪರಾಕ್ರಮಿ ಸೈನಿಕರ ಊರಾ ಗಿದ್ದರಿಂದ ಕೋಲಶಿರ್ಸಿ ಎಂದರೆ ಅನ್ಯರಿಗೆ ತುಸು ಆತಂಕ, ಅನುಮಾನ ಆದರೆ ಊರೊಳಗೆ, ನೆರೆಹೊರೆಗೆ ಕೋಲಶಿರ್ಸಿಯೆಂದರೆ ನಿರುಪದ್ರವಿಗಳ ಊರು.ಸ್ನೇಹ-ಸಹಬಾಳ್ವೆ,ಸೌಹಾರ್ದತೆ ಇಲ್ಲಿಯ ಉಸಿರು.

ಇಂತಿಪ್ಪ ಕೋಲಶಿರ್ಸಿಯಲ್ಲಿ ಹೊಳೆಹಬ್ಬವಾಗಲಿ,ಮಾರಿಜಾತ್ರೆಯಾಗಲಿ, ಆರಿದ್ರಹಬ್ಬವಾಗಲಿ ಎಲ್ಲವೂ ವಿಶೇಷವೇ. ವಾರ್ಷಿಕವಾಗಿ ಆಚರಿಸುವ ಕುಮಾರರಾಮನ ಆರಾಧನೆ ಹನಿಹಬ್ಬ ಅಥವಾ ಆರಿದ್ರಮಳೆ ಹಬ್ಬ, ವಾರ್ಷಿಕ ಚೌತಿ,ಗೌರಿ-ಗಣೇಶ ಹಬ್ಬ ಐದು ವರ್ಷಕ್ಕೋ ಆರೇಳು ವರ್ಷಗಳಿಗೋ ಒಮ್ಮೆ ಬರುವ ಹೊಳೆಹಬ್ಬ, ಮಾರಿಕಾಂಬಾ ದೇವಿ ಜಾತ್ರೆ ಎಲ್ಲಾ ಸಂದರ್ಭಗಳೂ ಸಡಗರದ ಕೂಟಗಳೇ.

ಕೋಲಶಿರ್ಸಿಯಲ್ಲಿ ಮಾರಿಕಾಂಬಾ ದೇವಿ ಆಗಮನ, ಮಾರಿಕಾಂಬಾ ದೇವಿ ಜಾತ್ರೆಗಳಿಗೆಲ್ಲಾ ಸರಿಸುಮಾರು ೨೦೦ ವರ್ಷಗಳ ಭವ್ಯ ಚರಿತ್ರೆಯಿದೆ ಎಂದರೆ ಆಶ್ಚರ್ಯ ಪಡುವಂಥದ್ದೇನಿಲ್ಲ. ಎರಡು ಶತಮಾನಗಳ ಹಿಂದೆ ಅಂದರೆ ಸುಮಾರು ಎಂಟ್ಹತ್ತು ತಲೆಮಾರುಗಳ ಹಿಂದೆ ಆಗಿನ ಗಾಡಿ ಮಾರಿ ಅಥವಾ ಗಡಿಮಾರಿಯಂತೆ ಕೋಲಶಿರ್ಸಿಗೆ ಬಂದಿಳಿದ ಮಾರಿಯನ್ನು ಹೆಗ್ಗರಣೆ ಕಡೆಯಿಂದ ಸಿದ್ಧಾಪುರ ಕಡೆಗೆ ಎಳೆದು ತರುತ್ತಿರಲಾಗಿ ಕೋಲಶಿರ್ಸಿ ಬಳಿ ಬಂದಾಗ ಮುಂಜಾನೆ ಬೆಳಗಾಗಿಅಲ್ಲಿ ಬಿಟ್ಟುಹೋದ ಮಾರಿ ಮುಂದೆ ಮಾರಿಕಾಂಬೆಯಾದ ಬಗ್ಗೆ ವಿಶಿಷ್ಟ ಕತೆಯಿದೆ.

ಪರ ಊರಿನಿಂದ ಬಂದ ಮಾರಿ ಮರವೊಂದರ ಕಟ್ಟೆಯ ಮೇಲೆ ಪೂಜಿಸಲ್ಪಡುತಿದ್ದಾಗ ಗ್ರಾಮದ ಬಾಲಕಿಯ ಮೇಲೆ ಹೇಳಿಕೆಯಾಗಿ ಆಹ್ವಾಹನೆಯಾದ ಮಾರಿ ತನಗೆ ಇದೇ ಊರಲ್ಲಿ ಒಂದು ದೇವಸ್ಥಾ ನವಾಗಬೇಕು, ಇಲ್ಲಿಯೇ ಜಾತ್ರೆ ಮಾಡಬೇಕು ಎಂದು ಹೇಳಿಕೆ ಮಾಡಿಸಿತಂತೆ. ಈ ಘಟನೆ ನಂತರ ಗ್ರಾಮಸ್ಥರೆಲ್ಲಾ ಸೇರಿ ಇಲ್ಲೊಂದು ಪುಟ್ಟ ದೇ ವಾಲಯ ಮಾಡುವುದು ನಂತರ ಜಾತ್ರೆ ಮಾಡಬೇಕೆಂದು ನಿರ್ಣಯಿಸಿದರಂತೆ. ಈ ತೀರ್ಮಾನದ ನಂತರ ಜಾತ್ರೆಗೆ ರಥ ನಿರ್ಮಿಸಲು ಕುನ್ನಳ್ಳಿ ಅಥವಾ ಕುನ್ಹಳ್ಳಿ ಬಳಿ ವಾಟೆ ಮರ ಕಡಿದು ಉರುಳಿಸಿದಾಗ ಅಂದಿನ ಬ್ರಿಟಿಷ್‌ ಸರ್ಕಾರಕ್ಕೆ ಅನಾಮಧೇಯರ ದೂರು ಹೋಗಿ ಮರ ಕಡಿದ ಗ್ರಾಮದ ಕೆಲವರ ಮೇಲೆ ದೂರು ದಾಖಲಾಗಿ ಹೊನ್ನಾವರ ನ್ಯಾಯಾಲಯದ ಮೆಟ್ಟಿಲೇರಿತಂತೆ ( ಈ ಬಗ್ಗೆ ಲಿಖಿ ತ ದಾಖಲೆ ಲಭ್ಯವಿದೆ)

ಈ ಪ್ರಕರಣದ ನಂತರ ಹೊನ್ನಾವರ ನ್ಯಾಯಾಲಯದಲ್ಲಿ ವಾದಿಸಲು ಸಾಧ್ಯವಿಲ್ಲದ ಗ್ರಾಮದ ಜನಸಾಮಾನ್ಯರ ಪರವಾಗಿ ಊರಿನ ಗೌಡರು ತಿಂಗಳುಗಟ್ಟಲೆ ಹೊನ್ನಾವರದಲ್ಲಿ ಉಳಿದು ವಕೀಲರ ಮೂಲಕ ಪ್ರಕರಣ ನಡೆಸಿದರು. ನಂತರ ಗ್ರಾಮಸ್ಥರೆಲ್ಲಾ ಸಂಘಟಿತರಾಗಿ ಮಾರಿಕಾಂಬಾ ದೇವಿಗೆ ದೇವಾಲಯ ನಿರ್ಮಾಣ, ಜಾತ್ರೆ ಆಚರಣೆ ಮುಂದುವರಿಸಿದರು.

ಗ್ರಾಮದ ರೋಗ ರುಜಿನಗಳು,ಸಂಕಷ್ಟಗಳಿಂದ ಪಾರು ಮಾಡೆಂದು ಬೇಡಿಕೆ ಇಟ್ಟು ಆರಾಧಿಸುವ ಮಾರಿಕಾಂಬೆಗೆ ಈಗ ಸುಸಜ್ಜಿತ ದೇವಾಲಯ ನಿರ್ಮಾಣವಾಗುತ್ತಿದೆ. ಕಳೆದ ನೂರಾರು ವರ್ಷಗಳಿಂದಲೂ ಕೆಲವು ಬಾರಿ ಕೆಲವು ವರ್ಷಗಳ ಅಂತರದ ನಡುವೆ, ನಡುನಡುವೆ ನಿಯಮಿತವಾಗಿ ಐದು ಅಥವಾ ಏಳು ವರ್ಗಳಿಗೊಮ್ಮೆಕೋಲಶಿರ್ಸಿ ಮಾರಿಕಾಂಬಾ ದೇವಿ ಜಾತ್ರೆ ನಡೆಸಿದ ಬಗ್ಗೆ ದಾಖಲೆಗಳಿವೆ.

ಈ ವರ್ಷದ ಜಾತ್ರೆ ಈ ಹಿಂದೇ ೭ ವರ್ಷಗಳಿಗೆ ನಡೆಯಬೇಕಿದ್ದರೂ ಕೋವಿಡ್‌ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ೯ ನೇ ವರ್ಷಕ್ಕೆ ನೆರವೇರುತ್ತಿದೆ. ೯ ವರ್ಷಗಳ ನಂತರ ನಡೆಯುವ ಇಲ್ಲಿಯ ಮಾರಿಕಾಂಬಾ ದೇವಿ ಜಾತ್ರೆಗೆ ಊರಿಗೆ ಊರೇ ಸುಣ್ಣ-ಬಣ್ಣ ಬಳಿದುಕೊಂಡು. ಚಪ್ಪರ, ಚಿತ್ತಾರಗಳಿಂದ ಕಂಗೊಳಿಸುತ್ತಿದೆ.ಫೆಬ್ರವರಿ೨೧ ರಿಂದ ೨೮ ರ ವರೆಗೆ ೨೦೨೩ ರ ಮಾರಿಕಾಂಬಾ ದೇವಿ ಜಾತ್ರೆ ಒಂದು ವಾರಗಳ ಕಾಲ ನಡೆಯಲಿದೆ.

(- ಕನ್ನೇಶ್‌ ಕೋಲಶಿರ್ಸಿ , ಸಿದ್ಧಾಪುರ.)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *