ಬಹುದಿವಸಗಳಿಂದ ಸ್ಫಸ್ಟವಾಗದ ಡಾ. ಶಶಿಭೂಷಣ ಹೆಗಡೆಯವರ ಹೊಸ ನಡೆ ಇಂದು ಸಿದ್ಧಾಪುರದಲ್ಲಿ ನಡೆದ ಶತಸ್ಮೃತಿ ಕಾರ್ಯಕ್ರಮದಲ್ಲಿ ಅನಾವರಣಗೊಂಡಿತು.
ಗಣೇಶ್ ಹೆಗಡೆಯವರ ಜನ್ಮಶತಮಾನೋತ್ಸವದ ಶತಸ್ಮೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ದೊಡ್ಮನೆ ಗಣೇಶ್ ಹೆಗಡೆಯವರ ಕುಟುಂಬದೊಂದಿಗಿನ ತಮ್ಮ ನಂಟನ್ನು ಸ್ಮರಿಸಿದರು. ಶಶಿಭೂಷಣ ಹೆಗಡೆ ಮತ್ತವರ ಕುಟುಂಬದ ವಿಶೇಶಗಳನ್ನು ಶ್ಲಾಘಿಸಿದ ಬೊಮ್ಮಾಯಿ ನಾವೆಲ್ಲಾ ನಾಡು ಕಟ್ಟುವ ಕೆಸದಲ್ಲಿದ್ದೇವೆ ಶಶಿಭೂಷಣ ಕೂಡಾ ನಮ್ಮ ಜೊತೆ ಇರುತ್ತಾರೆ ಎನ್ನುವ ಮೂಲಕ ಪರೋಕ್ಷವಾಗಿ ಶಶಿಭೂಷಣರ ಬಿ.ಜೆ.ಪಿ. ಪ್ರವೇಶಕ್ಕೆ ಭೂಮಿಕೆ ಸಿದ್ಧವಾಗಿರುವುದನ್ನು ಸ್ಪಷ್ಟಪಡಿಸಿದರು.
ಇದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡಾ ದೊಡ್ಮನೆ ಕುಟುಂಬ ರಾಮಕೃಷ್ಣ ಹೆಗಡೆಯವರ ಹಿನ್ನೆಲೆಯಿಂದಾಗಿ ತಮ್ಮ ಜವಾಬ್ಧಾರಿ, ಗೌರವ ಹೆಚ್ಚಾಗಿರುವುದನ್ನು ಒಪ್ಪಿಕೊಂಡರು. ಮತ್ತೆ ನಾನೇ ಗೆಲ್ಲುತ್ತೇನಿ ಶಶಿಭೂಷಣ ಕೂಡಾ ನಮ್ಮ ಜೊತೆ ಇರುತ್ತಾರೆ. ಹಿಂದಿನಂತೆ ಜೊತೆಯಾಗೇ ತಮ್ಮ ಪಯಣ ಸಾಗಲಿದೆ ಎನ್ನುವ ಮೂಲಕ ಶಶಿಭೂಷಣ ಹೆಗಡೆ ಸಧ್ಯದಲ್ಲೇ ಬಿ.ಜೆ.ಪಿ. ಸೇರ್ಪಡೆಯಾಗುವುದನ್ನು ಪರೋಕ್ಷವಾಗಿ ತಿಳಿಸಿದರು.