ರಾಜ್ಯ ಬಿ.ಜೆ.ಪಿ.ಯಲ್ಲಿ ಹಲವು ಬದಲಾವಣೆಗಳಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಸೈಡ್ ಲೈನ್ ಮಾಡಲಾಗುತ್ತಿದೆ.
ರೈತ ಮುಖಂಡರಾಗಿ ರಾಜ್ಯದಲ್ಲಿ ಬಿ.ಜೆ.ಪಿ. ಬೆಳೆಸಿದ್ದ ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಯಿಂದ ದಿಡೀರ್ ಕೆಳಗಿಳಿದಾಗಲೇ ಯಡಿಯೂರಪ್ಪ ಭವಿಷ್ಯ ಸ್ಪಷ್ಟವಿತ್ತು. ಈಗ ಚುನಾವಣಾ ಹೊಸ್ತಿಲಲ್ಲಿ ಯಡಿಯೂರಪ್ಪ ಸೇರಿದಂತೆ ಕೆಲವು ಮಾಜಿ ಮುಖ್ಯಮಂತ್ರಿಗಳು, ಹಿರಿಯ ನಾಯಕರನ್ನು ಹಿಂದಿನ ಸಾಲಿನಲ್ಲಿ ಕೂಡ್ರಿಸಲಾಗಿದೆ. ಹೀಗೆ ದಿಢೀರನೇ ಹಿಂದಿನ ಸಾಲಿಗೆ ಸರಿದ ನಾಯಕರಲ್ಲಿ ಸದಾನಂದ ಗೌಡ,ಜಗದೀಶ್ ಶೆಟ್ಟರ್, ಸುರೇಶ್ ಕುಮಾರ್, ವಿಶ್ವೇಶ್ವರ ಹೆಗಡೆ ಕಾಗೇರಿ, ಅನಂತಕುಮಾರ ಹೆಗಡೆ ಸೇರಿದಂತೆ ಕೆಲವು ಪ್ರಮುಖರು ಎನ್ನುವುದು ಗಮನಾರ್ಹ ವಿಷಯ.
ಈ ವಿಚಾರ ಮುಖ್ಯ ಭೂಮಿಕೆಯಲ್ಲೇ ಚರ್ಚೆಯಾಗುತಿದ್ದರೆ ತೆರೆಮರೆಯಲ್ಲಿ ಅಡ್ಡದಾರಿಯ ನಾಯಕ ಸಂತೋಷ ಚಿತಾವಣೆಯಿಂದ ಬಿ.ಜೆ.ಪಿ.ಯ ಹಿರಿಯ ನಾಯಕರು ವಿಶೇಶವಾಗಿ ಬ್ರಾಹ್ಮಣ ಮುಖಂಡರು ಮತ್ತು ಲಿಂಗಾಯತ್ ಮುಖಂಡರನ್ನೇ ಗುರಿಯಾಗಿಸಿ ೨೦೨೩ ರ ವಿಧಾನಸಭೆ ಚುನಾವಣೆಗೆ ಹೊಸ ತಂಡ ಕಟ್ಟುವ ತಯಾರಿ ನಡೆದಿದೆ ಎನ್ನುವುದು ಸಧ್ಯದ ವಿಚಾರ.
ಈ ವಿಚಾರದ ಹಿನ್ನೆಲೆಯಲ್ಲಿ ಆರ್. ಎಸ್.ಎಸ್. ಮತ್ತು ಬಿಜೆ.ಪಿ.ಯ ನಿಯಂತ್ರಣ ಮಾಡುವ ಮಲೆನಾಡು, ಕರಾವಳಿಯ ಕುಟಿಲ ಮತಾಂಧರ ತಂಡವೊಂದು ನಾನಾವೇಶದಲ್ಲಿ ಕೆಸರಿನ ರಾಜಕಾರಣ ಮಾಡುತ್ತ ಈ ಬಾರಿ ನೇರ ಅಖಾಡ ಎಂದು ಸಿದ್ಧವಾಗುತ್ತಿದೆಯಂತೆ!
ಈ ಕುಟಿಲ ಶಕುನಿಗಳ ತಂಡದಲ್ಲಿ ಆರ್. ಎಸ್. ಎಸ್. ಪರಿವಾರದ ಹಿನ್ನೆಲೆಯ ಕುಂಡೆ ಬಳಗವಿದ್ದು, ಈ ಬಳಗ ಕುಮಟಾವಿಧಾನಸಭಾ ಕ್ಷೇತ್ರ, ಭಟ್ಕಳ, ಶಿರಸಿ, ಯಲ್ಲಾಪುರಗಳಲ್ಲಿ ತಮ್ಮ ಬಳಗಕ್ಕೇ ಬಿ.ಜೆ.ಪಿ. ಟಿಕೇಟ್ ಕೊಡಬೇಕೆಂದು ಪಟ್ಟು ಹಿಡಿದಿದೆಯಂತೆ. ಈ ಬಳಗದ ಪ್ರಮುಖನಾಗಿರುವ ಪತ್ರಿಕೆ ಸಂಪಾದಕನೊಬ್ಬ ಬಿ.ಜೆ.ಪಿ. ಮಾತ್ರವಲ್ಲ ಕಾಂಗ್ರೆಸ್ ಟಿಕೇಟುಗಳೂ ನನ್ನ ತೀರ್ಮಾನದಂತೇ ಹಂಚಿಕೆಯಾಗಲಿದ್ದು ಕುಮಟಾದಿಂದ ತನಗೆ ತಪ್ಪಿದರೆ ಶಶಿಭೂಷಣ ಹೆಗಡೆ, ಶಿರಸಿ ಕ್ಷೇತ್ರದ ಟಿಕೇಟ್ ತನ್ನ ಮಾವ ತಲೆಮಾಸಿದ ಮಾಜಿ ಪತ್ರಕರ್ತನಾಗಿರುವ ಮತಾಂಧ ಆಶಾಢಭೂತಿಗೆ ತಪ್ಪಿದರೆ ಶಶಿಭೂಷಣ ಹೆಗಡೆಯವರಿಗೆ ನಮ್ಮ ಬಳಗದ ಮೂರು ಜನರಿಗೆ ಟಿಕೇಟ್ ಸಂತೋಷದಿಂದಲೇ ಸಿಗಲಿದೆ. ನಮಗೆ ಬೇಕಾದವರಿಗೇ ಕಾಂಗ್ರೆಸ್ ಟಿಕೇಟೂ ಸಿಗಲಿದೆ ಎಂದು ಬೈಟಕ್ ನಲ್ಲಿ ಬಾಯಿ ಬಿಟ್ಟಿದ್ದಾನಂತೆ!
ಈ ಹೊಸ ವಿದ್ಯಮಾನಗಳ ಹಿನ್ನೆಲೆಯಲ್ಲಿ ಪಕ್ಷದ ಪ್ರಚಾರ,ಚುನಾವಣಾ ವಿದ್ಯಮಾನಗಳಲ್ಲಿ ಅನಂತಕುಮಾರ ಹೆಗಡೆ, ವಿಶ್ವೇಶ್ವರ ಹೆಗಡೆ, ಸುರೇಶ್ ಕುಮಾರ್ ಸೇರಿದಂತೆ ಕೆಲವು ಬ್ರಾಹ್ಮಣ ಮುಖಂಡರು ಮತ್ತು ಲಿಂಗಾಯತ್ ಮುಖಂಡರನ್ನು ಹೊರಗಿಡಲಾಗಿದೆಯಂತೆ!
ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ಕೆಲವು ಸಂಘಿಗಳು ಸ್ವಜನಪಕ್ಷಪಾತದ ಕುಟಿಲ ಬಳಗದ ಕುತಂತ್ರಿಗಳಿಗೆ ನೆರವಾಗಲು ಮೋದಿಯ ಹಿತ್ತಾಳೆ ಕಿವಿಗೂ ಹೂವು ಮುಡಿಸಿದ್ದಾರೆ ಎನ್ನಲಾಗಿದೆ. ಈ ವಿದ್ಯಮಾನಗಳ ಹಿನ್ನೆಲೆಯಲ್ಲಿ ಕಂಗಾಲಾಗಿರುವ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆಕಾಗೇರಿ, ಅರಗಜ್ಞಾನೇಂದ್ರ, ಸೇರಿದ ಕೆಲವು ಹಿರಿಯರ ತಂಡ ಬಿ.ಜೆ.ಪಿ.ಯ ಹೊಸ ವರಸೆ ತಮ್ಮ ಬುಡಕ್ಕೆ ಬಿಸಿ ನೀರು ಬಿಡುವ ಸಾಧ್ಯತೆ ಅರಿತು ಟಿಕೇಟ್ ಸಂಕಲ್ಪ ಯಾತ್ರೆಯ ಹಿನ್ನೆಲೆಯಲ್ಲಿ ಪ್ರಯಾಣ, ಪ್ರವಾಸ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ. ಬಿ.ಜೆ.ಪಿ.ಯ ಸಿಂಪಥೈಸರ್ ಗಳಾಗಿ ಮಾಧ್ಯಮಗಳಲ್ಲಿ ಕೋಮುವಾದದ ರೋಗ ತುಂಬಿ ಸಂಘದ ಬಕೆಟ್ ಹಿಡಿದ ಲಾಭಕೋರ ಮತಾಂಧ ಬಳಗದ ಕುಟಿಲತೆ ಈಗ ಸ್ವಜಾತಿ,ಸ್ವಪರಿವಾರದ ನಾಯಕತ್ವ, ಮುಖಂಡತ್ವಕ್ಕೆ ಎರವಾಗಿರುವುದು ಸಾರ್ವಜನಿಕರ ವಿರೋಧಕ್ಕೂ ಕಾರಣವಾಗಿದೆ ಎನ್ನಲಾಗುತ್ತಿದೆ.