

ಶತಕ ಪೂರೈಸಿದ್ದ ಸಣ್ಣಮ್ಮ ನಿಧನ
ಸಿದ್ದಾಪುರ: ಸಾರ್ಥಕ ನೂರು ವಸಂತಗಳನ್ನು ಪೂರೈಸಿದ ತಾಲೂಕಿನ ತ್ಯಾರ್ಸಿಯ ಸಣ್ಣಮ್ಮ ನಾಯ್ಕ(104) ಶನಿವಾರ ಬೆಳಗ್ಗಿನ ಜಾವ ನಿಧನರಾದರು.
ತ್ಯಾರ್ಸಿ ಪಟೇಲರಾಗಿದ್ದ ದೇವೇಂದ್ರ ನಾಯ್ಕ ಇವರ ಹಿರಿಯ ಸುಪುತ್ರಿ ಹಾಗೂ ಬೊಮ್ಮ ದೇವೇಂದ್ರ ನಾಯ್ಕ ಅವರ ಹಿರಿಯಕ್ಕನಾದ ಸಣ್ಣಮ್ಮ ನಾಯ್ಕ ನೂರು ವಸಂತಗಳನ್ನು ದಾಟಿ ಸಾರ್ಥಕವಾಗಿ ಬದುಕಿದ್ದರು. ಕಳೆದ ಕೆಲ ದಿನಗಳಿಂದ ಆರೋಗ್ಯದಲ್ಲಿ ಏರುಪೇರಾಗಿದ್ದು ಶನಿವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಮಕ್ಕಳಿಂದ ಹಿಡಿದು ವಯಸ್ಕರವರಿಗೂ ದೃಷ್ಟಿ ತೆಗೆಯುತ್ತಿದ್ದ ಸಣ್ಣಮ್ಮ ನಾಯ್ಕ ಇಡೀ ಊರಿಗೆ ಪಡವಗೋಡ ಅಜ್ಜಿ ಎಂದೇ ಚಿರಪರಿಚಿತರಾಗಿದ್ದರು. ಸಣ್ಣಮ್ಮ ನಿಧನಕ್ಕೆ ತ್ಯಾರ್ಸಿ ಊರ ಹಿರಿಯರಾದ ಮಾರುತಿ ನಾಯ್ಕ, ಯಶವಂತ ನಾಯ್ಕ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

ಸಿದ್ದಾಪುರ : ಹಸಿವು ನೋವಿಗೆ ಜಾತಿ ಧರ್ಮ ಇರುವುದಿಲ್ಲ ಎಲ್ಲರೂ ಒಟ್ಟಿಗೆ ನಮ್ಮ ಕೈಲಾದ ಸಹಾಯ ಮಾಡಿ ಈ ರೀತಿಯ ಆಶ್ರಮ ನಡೆಸುವ ವ್ಯಕ್ತಿಗೆ ಸಹಕಾರ ನೀಡಬೇಕು ಆ ಮೂಲಕ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಶ್ರಮಿಸೋಣ ಎಂದು ಉದ್ಯಮಿ ಪ್ರಥ್ವಿರಾಜ್ ಪಾಟೀಲ್ ಹೇಳಿದರು ಅವರು ಪಟ್ಟಣದಲ್ಲಿ ನಡೆದ
ತಾಲೂಕಿನ ಮುಗದುರ್ ನಲ್ಲಿರುವ ಪುನೀತ್ ರಾಜಕುಮಾರ್ ಆಶ್ರಮಧಾಮ ಅನಾಥಾಶ್ರಮದ ಕಟ್ಟಡದ ಸಹಾಯಾರ್ಥ ಆಯೋಜಿಸಿದ್ದ ಪುನೀತ್ ರಾಜಕುಮಾರ್ ಹುಟ್ಟು ಹಬ್ಬ ಆಚರಣೆ ಸನ್ಮಾನ ಸಮಾರಂಭ ಮತ್ತು ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬೇಡ್ಕಣಿ ಕೋಟೆ ಆಂಜನೇಯ ದೇವಾಲಯದ ಅಧ್ಯಕ್ಷ ವಿ ಎನ್ ನಾಯ್ಕ್ ಮಾತನಾಡಿ ಪ್ರತಿವ್ಯಕ್ತಿ ಸಾರ್ಥಕತೆ ಜೀವನ ನಡೆಸಬೇಕು, ನಮ್ಮಿಂದ ಸಮಾಜಕ್ಕೆ ಕೊಡುಗೆ ನೀಡಬೇಕು ಎನ್ನುವ ಮನೋಭಾವ ಇರುವ ವ್ಯಕ್ತಿ ಅಮರವಾಗಿ ನೆಲೆಸಿರುತ್ತಾನೆ ಅನಾಥಾಶ್ರಮ ಕಟ್ಟಡ ಕ್ಕೆ ಕೈಲಾದಷ್ಟು ಸಹಾಯ ಮಾಡಿ ನಾಗರಾಜ್ ನಾಯ್ಕ್ ರವರ ಕಾರ್ಯ ಕ್ಕೆ ಕೈ ಜೋಡಿಸೋಣ ಎಂದರು.
ರೈತ ಮುಖಂಡ ವೀರಭದ್ರ ನಾಯ್ಕ್ ಮಾತನಾಡಿ ಈ ಆಶ್ರಮದಲ್ಲಿನ ವಾಸಿಗಳ ಜೀವನ ಕ್ಕೆ ಅನುಕೂಲ ವಾಗುವಂತೆ ಮಳೆಗಾಲ ದ ಪೂರ್ವದಲ್ಲೇ ವ್ಯವಸ್ಥೆ ಕಲ್ಪಿಸಲು ದಾನಿಗಳು ಸಹಕರಿಸಿ ಎಂದರು
ಶಿಕ್ಷಣ ಪ್ರಸಾರಕ ಸಮಿತಿ ಉಪಾಧ್ಯಕ್ಷ ಶಶಿಭೂಷಣ ಹೆಗಡೆ ಅಧ್ಯಕ್ಷತೆ ವಹಿಸಿ ಆಶ್ರಮವನ್ನು ನಡೆಸುವುದು ಎಲ್ಲ ದಾನಕ್ಕಿಂತಲೂ ದೊಡ್ಡ ಕೆಲಸ ನಾಗರಾಜ್ ನಾಯ್ಕ್ ರವರ ಕಾರ್ಯ ಕ್ಕೆ ಶ್ಲಾಘನೆ ಮಾಡಲೇಬೇಕು ಸರಕಾರಗಳು ಆಶ್ರಮದ ಕಟ್ಟಡ ಹಾಗೂ ನಿರ್ವಹಣೆಗೆ ಅನುದಾನ ನೀಡಬೇಕು ಈ ಚುನಾವಣೆಯಲ್ಲಿ ಪ್ರತಿ ಅಭ್ಯರ್ಥಿ ಗಳಿಗೆ ಈ ವಿಚಾರ ಪ್ರಣಾಳಿಕೆಯಲ್ಲಿ ಸೇರಿಸಲು ಒತ್ತಾಯ ಮಾಡೋಣ ಎಂದರು
ಆಶ್ರಮದ ಕಟ್ಟಡಕ್ಕೆ ಶ್ರಮಿಸುತ್ತಿರುವ ಸಾಮಾಜಿಕ ಕಾರ್ಯಕರ್ತರನ್ನು ಸನ್ಮಾನಿಸಿ ಗೌರವಿಸಿದರು
ವಿವಿಧ ಕಲಾವಿಧರಿಂದ ಸಂಗೀತ ನೃತ್ಯ ರಸಮಂಜರಿ ಕಾರ್ಯಕ್ರಮ ಜರುಗಿತು.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
