ಸಿದ್ಧಾಪುರ ತಾಲೂಕಿನ ಕೋಲಶಿರ್ಸಿ ಗ್ರಾ.ಪಂ. ಅವರಗುಪ್ಪಾ ಆಯ್.ಟಿ.ಆಯ್. ಕಾಲೇಜಿನ ಬಸ್ ನಿಲ್ಧಾಣವನ್ನು ವರ್ಷಾಂತ್ಯದಲ್ಲಿ ಬಿಲ್ ಪಡೆಯಲು ನಿರ್ಮಿಸಿದಂತಿದೆ ಎಂದು ಆರೋಪಿಸಿರುವ ಸ್ಥಳಿಯ ಯುವಕರು ಈ ಕಳಪೆ ಕಾಮಗಾರಿ ಸರಿಪಡಿಸಿ ಕಳಪೆಯಾದದ್ದನ್ನು ಮರು ನಿರ್ಮಿಸದಿದ್ದರೆ ಉದ್ಘಾಟನೆ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಸಮಾಜಮುಖಿ ಡಾಟ್ ನೆಟ್ ಗೆ ಲಿಖಿತವಾಗಿ ದೂರಿ ನಿರ್ಮಾಣ ಹಂತದ ಛಾಯಾ ಚಿತ್ರಗಳನ್ನು ಕಳುಹಿಸಿರುವ ಸ್ಥಳಿಯರು ಈ ಬಸ್ ನಿಲ್ಧಾಣದ ಕಾಮಗಾರಿಗೆ ಕ್ಯೂರಿಂಗ್ ಮಾಡಿಲ್ಲ. ಒಂದೇ ವಾರದಲ್ಲಿ ಅಡಿಪಾಯದಿಂದ ಛಾವಣಿವರೆಗೆ ನಿರ್ಮಿಸಿರುವ ಗುತ್ತಿಗೆದಾರರು ಸ್ಥಳಿಯ ಶಾಸಕರ ಕಡೆಯವರಿಗೆ ಈ ವರ್ಷಾಂತ್ಯದ ಒಳಗೆ ಬಿಲ್ ಮಾಡಿಕೊಳ್ಳಲು ಸಹಕರಿಸಿದಂತಿದೆ.
ಈ ಕಾಮಗಾರಿ ಸಂಪೂರ್ಣವಾದ ಬಗ್ಗೆ ಪ್ರಮಾಣಪತ್ರ ನೀಡುವ ಅಧಿಕಾರಿ ಆಗಿರುವ ನ್ಯೂನ್ಯತೆ ಸರಿಪಡಿಸದೆ ಸರಿಯಾಗಿ ಪರೀಕ್ಷಿಸದೆ ಮುಂದುವರಿದರೆ ಅವರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಈ ರೀತಿಯ ಕಳಪೆ ಕಾಮಗಾರಿ ನಾಲ್ಕು ವರ್ಷವೂ ಬಾಳಿಕೆ ಬರದಿದ್ದರೆ ಅದಕ್ಕೆ ಸ್ಥಳೀಯ ಅಧಿಕಾರಿಗಳು, ಶಾಸಕರನ್ನೇ ಹೊಣೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿರುವ ಸ್ಥಳೀಯರು ಇಂಥಹ ಕೆಲಸ ಮಾಡಿ ಸಾರ್ವಜನಿಕ ಹಣ ದುರುಪಯೋಗ ಮಾಡುವ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.