
ಉತ್ತರ ಕನ್ನಡ ಜಿಲ್ಲೆಯ ಬಹುಸಂಖ್ಯಾತ ನಾಮಧಾರಿಗಳಿಗೆ ಟಿಕೇಟ್ ನೀಡದ ಪಕ್ಷಗಳಿಗೆ ತಕ್ಕ ಉತ್ತರ ನೀಡುವ ಶಕ್ತಿ ನಾಮಧಾರಿ ಸಮಾಜಕ್ಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ನಾಮಧಾರಿ ಸಮಾಜದ ಧುರೀಣರು ಬರುವ ವಿಧಾನಸಭಾ ಚುನಾವಣೆಯಲ್ಲಿ ನಾಮಧಾರಿಗಳನ್ನು ಉಪೇಕ್ಷಿಸುವ ಪಕ್ಷಗಳಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.
ಸಿದ್ಧಾಪುರದ ಎ.ಪಿ.ಎಂಸಿ. ಆವರಣದ ಹೋಟೆಲ್ ನಲ್ಲಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಈ ವಿಷಯ ಪ್ರಸ್ಥಾಪಿಸಿದ ಅನಾರ್ಯ ದೀವರು, ಈಡಿಗ,ನಾಮಧಾರಿ ಪ್ರಮುಖರು ಉತ್ತರ ಕನ್ನಡ ಜಿಲ್ಲೆಯ ಬಹುಸಂಖ್ಯಾತ ನಾಮಧಾರಿಗಳಿಗೆ ಉತ್ತರ ಕನ್ನಡ ಜಿಲ್ಲೆಯ ಒಟ್ಟೂ ಆರು ಕ್ಷೇತ್ರಗಳಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಟಿಕೇಟ್ ಕೇಳುವ ಹಕ್ಕಿದೆ. ಪ್ರಮುಖ ಪಕ್ಷಗಳು ಜಿಲ್ಲೆಯ ಎಷ್ಟು ಕ್ಷೇತ್ರಗಳಲ್ಲಿ ದೀವರಿಗೆ ಪ್ರಾಧಾನ್ಯತೆ ನೀಡಿವೆ ಎನ್ನುವುದರ ಮೇಲೆ ಆ ಪಕ್ಷಕ್ಕೆ ನಾಮದಾರಿ , ದೀವರ ಬೆಂಬಲ ವ್ಯಕ್ತವಾಗಬೇಕು ಎಂದರು.
ಪ್ರಮುಖ ಪಕ್ಷಗಳಾದ ಬಿ.ಜೆ.ಪಿ., ಕಾಂಗ್ರೆಸ್. ಜೆ.ಡಿ.ಎಸ್. ಪಕ್ಷಗಳು ಕನಿಷ್ಟ ತಲಾ ಮೂರು ಕ್ಷೇತ್ರಗಳಲ್ಲಿ ನಾಮಧಾರಿಗಳಿಗೆ ಅವಕಾಶ ನೀಡಬೇಕು ಅದಾಗದಿದ್ದರೆ ಕನಿಷ್ಟ ೨ ಕ್ಷೇತ್ರಗಳಲ್ಲೂ ದೀವರಿಗೆ ಅವಕಾಶ ನೀಡದ ಪಕ್ಷಕ್ಕೆ ನಾಮಧಾರಿಗಳು ತಕ್ಕ ಪಾಠ ಕಲಿಸುತ್ತಾರೆ ಎಂದರು.
ಈ ಮಾಧ್ಯಮಗೋಷ್ಠಿಯಲ್ಲಿ ಪಾಂಡು ಹಳದೋಟ, ಪಾಂಡು ಕೋಲಶಿರ್ಸಿ,ಅಣ್ಣಪ್ಪ ನಾಯ್ಕ ಶಿರಳಗಿ, ಜನಾರ್ಧನ ನಾಯ್ಕ ಹೊಸೂರು ಸೇರಿದಂತೆ ಹಲವರಿದ್ದರು.
ಶಿರಸಿ ಕ್ಷೇತ್ರದಲ್ಲಿ ನಾಮಧಾರಿಗಳಿಗೆ ಅವಕಾಶ ನೀಡದಿದ್ದರೆ ನಾಮಧಾರಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಹಲವು ವರ್ಷಗಳಿಂದ ಪ್ರಮುಖ ಪಕ್ಷಗಳಲ್ಲಿರುವ ನಾಮಧಾರಿಗಳು ಆಯಾ ಪಕ್ಷಗಳ ಟಿಕೇಟ್ ಕೇಳಲು ಅರ್ಹರಿದ್ದಾರೆ.- ಗಾಂಧೀಜಿ ನಾಯ್ಕ
ಕಾಂಗ್ರೆಸ್ ಪಕ್ಷದ ಪ್ರಮುಖರಾದ ಸಿದ್ಧರಾಮಯ್ಯ, ಬಿ.ಕೆ.ಹರಿಪ್ರಸಾದ್, ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನ ಪ್ರಮುಖರಿಗೆ ಜಿಲ್ಲೆಯಲ್ಲಿ ನಾಮಧಾರಿಗಳ ಶಕ್ತಿ,ಸಂಖ್ಯೆ ಗೊತ್ತಿದೆ. ಅವರು ನಮ್ಮ ದೀವರಿಗೆ ನ್ಯಾಯ ಒದಗಿಸಬಹುದು ಇತರ ಪಕ್ಷಗಳ ಪ್ರಮುಖರೂ ಈ ಬಗ್ಗೆ ಗಮನಹರಿಸದಿದ್ದರೆ ಅವರಿಗೇ ಹಾನಿ.- ಎಮ್.ಜಿ. ನಾಯ್ಕ, ಸಣ್ಣೆಕೊಪ್ಪ
ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳೂ ದೀವರ ಶಕ್ತಿ-ಸಂಖ್ಯೆ ಪರಿಗಣಿಸಿ ಅವಕಅಶ ನೀಡಬೇಕು. ದೀವರು ತಮಗೆ ಸಾಮಾಜಿಕ ನ್ಯಾಯ ನೀಡದ ಪಕ್ಷ ಬೆಂಬಲಿಸುವಷ್ಟು ದಡ್ಡರಲ್ಲ, ನಮ್ಮ ಅವಕಾಶ ನಮ್ಮ ಹಕ್ಕಾಗಿ ದಕ್ಕದಿದ್ದರೆ ಕಸಿದುಕೊಳ್ಳಬೇಕಾಗುತ್ತದೆ.- ಬಾಲಕೃಷ್ಣ ನಾಯ್ಕ ಕೋಲಶಿರ್ಸಿ
