

ನಟ ಶಿವರಾಜ್ ಕುಮಾರ್ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಕಾಂಗ್ರೆಸ್ ಪರವಾಗಿ ಪ್ರಚಾರ ನಡೆಸಿದರು.
ಶಿರಸಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಪರವಾಗಿ ರೋಡ್ ಶೋ ನಡೆಸಿದ ಶಿವರಾಜ್ ಕುಮಾರ ಉತ್ತಮ ವ್ಯಕ್ತಿಗಳು ಆಯ್ಕೆಯಾಗುವ ಮೂಲಕ ಸಮಾಜ ಬದಲಾವಣೆ ಕಾಣಬೇಕು.ಶಿರಸಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಉತ್ತಮ ಅಭ್ಯ ರ್ಥಿಯಾಗಿರುವುದರಿಂದ ಅವರನ್ನು ಆಯ್ಕೆ ಮಾಡಿ ಸಮಾಜದ ಅಭಿವೃದ್ಧಿಗೆ ಕಾರಣರಾಗಬೇಕು ಎಂದರು.
ಸಿದ್ಧಾಪುರದ ಕಾನಗೋಡಿನಿಂದ ರೋಡ್ ಶೋ ಪ್ರಾರಂಭಿಸಿದ ಶಿವರಾಜ್ ಕುಮಾರ ತಂಡವನ್ನು ಹಿಂಬಾಲಿಸಿದ ಅಭಿಮಾನಿಗಳು ಅಲ್ಲಲ್ಲಿ ಶಿವರಾಜ್ ಕುಮಾರ ಮಾತನಾಡಬೇಕೆಂದು ಬೇಡಿಕೆ ಇಟ್ಟರು. ಅಭಿಮಾನಿಗಳ ಉತ್ಸಾಹಕ್ಕೆ ಸ್ಫಂದಿಸಿದ ಶಿವರಾಜ್ ಕುಮಾರ್ ಹಾಡು ಹಾಡಿ, ಭಾಷಣ ಮಾಡಿ ರಂಜಿಸಿದರು.
ನೆಚ್ಚಿನ ನಟನನ್ನು ನೋಡಲು ಕಾತರಾಗಿದ್ದ ಅಭಿಮಾನಿಗಳು ಸಮರೋಪಾದಿಯಲ್ಲಿ ಸೇರಿ ಶಿವರಾಜ್ ಕುಮಾರ ದಂಪತಿಗಳನ್ನು ಕಣ್ತುಂಬಿಕೊಂಡರು.
ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಸಂಬಂಧಿಗಳಾಗಿರುವ ಗೀತಾ ಶಿವರಾಜ್ ಕುಮಾರ ಮತ್ತು ಶಿವರಾಜ್ ಕುಮಾರ ಜಿಲ್ಲೆಯೊಂದಿಗಿನ ತಮ್ಮ ಒಡನಾಟಗಳನ್ನು ಸ್ಮರಿಸಿದರು. ಅಬ್ಬರದ ಪ್ರಚಾರವಿಲ್ಲದ ಶಿರಸಿ ಕ್ಷೇತ್ರದಲ್ಲಿ ಶಿವರಾಜ್ ಕುಮಾರ ರೋಡ್ ಶೋ ಸಾರ್ವಜಿನಿಕರ ಗಮನ ಸೆಳೆಯಿತು. ತಮ್ಮೂರು ಮನೆಯ ಅಂಗಳದಲ್ಲಿ ನೆಚ್ಚಿ ನಟನನ್ನು ನೋಡುವ ಭಾಗ್ಯ ದೊರೆತದ್ದಕ್ಕೆ ಸ್ಥಳೀಯರು ಸಂಬ್ರಮಪಟ್ಟರು.ಶಿವರಾಜ್ ಕುಮಾರ್ ಹಾಡು, ಡೈಲಾಗ್ ಗಳಿಗೆ ಸಿಳ್ಳೆ ಹಾಕಿದ ಅಭಿಮಾನಿಗಳು ರೋಡ್ ಶೋ ದುದ್ದಕ್ಕೂ ಶಿವರಾಜ್ ಕುಮಾರರನ್ನು ಹಿಂಬಾಲಿಸಿದರು.

