

ಪಕ್ಷದೊಳಗಿದ್ದು ಪಕ್ಷದ್ರೋಹ ಮಾಡಿದ ಸ್ವಪಕ್ಷೀಯರು ಮತ್ತು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪಕ್ಷದ್ರೋಹಿಗಳಿಗೆ ತಕ್ಕ ಪಾಠ ಕಲಿಸುವುದಾಗಿ ಗುಡುಗಿದ್ದಾರೆ.
ಈ ಚುನಾವಣೆ ಶಾಂತಿಯುತವಾಗಿ,ಕ್ರೀಡಾಮನೋಭಾವದಿಂದ ನಡೆದ ಬಗ್ಗೆ ಸಮಾಧಾನ ವ್ಯಕ್ತ ಪಡಿಸಿದ ಅವರು ಕಾಂಗ್ರೆಸ್ ನವರು ಹಣ-ಹೆಂಡ ಹಂಚುವ ಮೂಲಕ ಅವರ ಸಂಸ್ಖೃತಿ ತೋರಿಸಿದ್ದಾರೆ ಎಂದು ಜರಿದರು.
ಮತದಾನದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಬಿ.ಜೆ.ಪಿ. ಮತ್ತೆ ಅಧಿಕಾರ ಹಿಡಿಯುವುದು ಪಕ್ಕಾ ನಮ್ಮ ಕ್ಷೇತ್ರದಲ್ಲಿ ಕೂಡಾ ನಾವು ಬಹುಮತದಿಂದಲೇ ಆಯ್ಕೆಯಾಗುವುದು ನಿಶ್ಚಿತ ಎಂದರು. ಎಲ್ಲಾ ಪಕ್ಷದ ಮುಖಂಡರು, ಕಾರ್ಯಕರ್ತರು ಶಾಂತಿಯುತವಾಗಿ ಚುನಾವಣೆ ನಡೆಸಿದ್ದಾರೆ. ಜನತೆ ಕೂಡಾ ಉತ್ಸಾಹದಿಂದ ಮತದಾನ ಮಾಡಿದ ಬಗ್ಗೆ ನಾವೆಲ್ಲರೂ ಕೃತಜ್ಞರಾಗಿರಬೇಕು ಎಂದರು.
