

ಯಲ್ಲಾಪುರ ಮತ್ತು ಹಳಿಯಾಳ ಹೊರತು ಪಡಿಸಿ ಉತ್ತರ ಕನ್ನಡ ಜಿಲ್ಲೆಯ ಕನಿಷ್ಟ ೩ ಕ್ಷೇತ್ರಗಳು ಕಾಂಗ್ರೆಸ್,ಕುಮಟಾದಲ್ಲಿ ಜಾ ತ್ಯಾತೀತ ಜನತಾದಳ, ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಮೇ ೧೦ ರ ಮತದಾನದ ನಂತರ ಸಮಾಜಮುಖಿ ಸಮೂಹ ನಡೆಸಿದ ಸಮೀಕ್ಷೆಯಲ್ಲಿ ಹಳಿಯಾಳದ ಆರ್.ವಿ.ದೇಶಪಾಂಡೆ ಶಿರಸಿಯ ಭೀಮಣ್ಣ ನಾಯ್ಕ, ಭಟ್ಕಳದಲ್ಲಿ ಮಂಕಾಳು ವೈದ್ಯ, ಕಾರವಾರದಲ್ಲಿ ಸತೀಶ್ ಶೈಲ್ ಗೆಲ್ಲುವ ಸಾಧ್ಯತೆ ಕಂಡಿದೆ.
ಯಲ್ಲಾಪುರ, ಹಳಿಯಾಳಗಳಲ್ಲಿ ಕೂದಲೆಳೆಯ ಅಂತರದಿಂದ ಬಿ.ಜೆ.ಪಿ. ಅಭ್ಯರ್ಥಿಗಳು ಗೆದ್ದರೂ ಆಶ್ಚ ರ್ಯವಿಲ್ಲ ಎನ್ನುವ ವಾತಾವರಣವಿದ್ದು ಕುಮಟಾದಲ್ಲಿ ಜಾತ್ಯಾತೀತ ಜನತಾದಳದ ಸೂರಜ್ ಗೆಲ್ಲುವುದು ನಿಚ್ಛಳ ಎನ್ನುವಂತಿದೆ.
ಹಳಿಯಾಳದಲ್ಲಿ ಮಾಜಿ ಸಚಿವ ಆರ್. ವಿ. ದೇಶಪಾಂಡೆ ಗೆಲ್ಲುವ ಸಾಧ್ಯತೆ ಹೆಚ್ಚಿದ್ದರೂ ಅಲ್ಲಿ ಬಿ.ಜೆ.ಪಿ. ಸುನಿಲ್ ಹೆಗಡೆ ಗೆದ್ದು ದೇಶಪಾಂಡೆಯವರಿಗೆ ಎರಡನೇ ಬಾರಿ ಸೋಲಿನ ರುಚಿ ಉಣಿಸಿದರೂ ಆಶ್ಚರ್ಯವಿಲ್ಲ ಎನ್ನುವ ವಾಸ್ತವವಿದೆ.
ಶಿರಸಿ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರ ವಿಶ್ವೇಶ್ವರ ಹೆಗಡೆಯವರನ್ನು ಬೆನ್ನಟ್ಟಿರುವ ಕಾಂಗ್ರೆಸ್ ನ ಭೀಮಣ್ಣ ಕನಿಷ್ಟ ೫ ಸಾವಿರಗಳಿಂದ ೨೦ ಸಾವಿರಗಳ ಅಂತರದಿಂದ ಜಯಗಳಿಸುವ ಸಂಭವ ಹೆಚ್ಚಿದೆ.
ಕುಮಟಾದಲ್ಲಿ ಜೆ.ಡಿ.ಎಸ್. ಗೆಲ್ಲುವ ಮೂಲಕ ಜಾತ್ಯಾತೀತ ಜನತಾದಳ ಉತ್ತರ ಕನ್ನಡ ಜಿಲ್ಲೆಯಲ್ಲಿ ಖಾತೆ ತೆರೆಯುವ ಸಾಧ್ಯತೆ ಹೆಚ್ಚಿದೆ. ಭಟ್ಕಳ ಮತ್ತು ಕಾರವಾರಗಳಲ್ಲಿ ಆಡಳಿತವಿರೋಧಿ ಅಲೆ. ಮೋದಿ ಬಗ್ಗೆ ಜನರಿಗೆ ಹುಟ್ಟಿರುವ ವಾಕರಿಕೆ ಧ್ಯೋತಕವಾಗಿ ಬಿ.ಜೆ.ಪಿ. ಅಭ್ಯರ್ಥಿಗಳು ಸೋತು ಕಾಂಗ್ರೆಸ್ ನ ಮಂಕಾಳು ವೈದ್ಯ ಮತ್ತು ಸತೀಶ್ ಶೈಲ್ ಗೆಲ್ಲುವ ಸಾಧ್ಯತೆ ಹೆಚ್ಚಿದೆ.
