
ಸಿದ್ಧಾಪುರ ತಾಲೂಕಿನ ೨೩ ಗ್ರಾಮ ಪಂಚಾಯತ್ ಗಳ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಇಂದು ಪ್ರಕಟವಾಗಿದೆ. ಸಿದ್ಧಾಪುರ ಶಂಕರ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್ಲಾ ಗ್ರಾ.ಪಂ. ಸದಸ್ಯರ ಸಮ್ಮುಖದಲ್ಲಿ ಅಧಿಕಾರಿಗಳು ಮೀಸಲಾತಿ ಪ್ರಕಟಿಸಿದರು. ಅಸಮರ್ಪಕ ಮೀಸಲಾತಿ ಎಂದು ತಕರಾರು ಎತ್ತಿದ ಕೆಲವು ಸದಸ್ಯರಿಗೆ ಎಲ್ಲವನ್ನೂ ನಿಯಮಾನುಸಾರ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ವಿವರಣೆ ನೀಡಿದರು.
ಗ್ರಾ.ಪಂ. ಮೀಸಲಾತಿ ನಿಗದಿ ವಿವರ ಹೀಗಿದೆ. ನಿಲ್ಕುಂದ- ಸಾಮಾನ್ಯ (ಅ) ಸಾಮಾನ್ಯ (ಉ) ಹೆಗ್ಗರಣಿ- ಸಾಮಾನ್ಯ ಮಹಿಳೆ (ಅ) ಅ ವರ್ಗ ಮಹಿಳೆ (ಉ)
ಅಣಲೇಬೈಲ್- ಅವರ್ಗ (ಅ) ಬವರ್ಗ ಮಹಿಳೆ (ಉ)
ಹಸರಗೋಡು- ಸಾಮಾನ್ಯ (ಅ) ಸಾಮಾನ್ಯ ಮಹಿಳೆ (ಉ)
ಕಾನಸೂರು- ಸಾಮಾನ್ಯ ಮಹಿಳೆ (ಅಉ)
ತ್ಯಾಗಲಿ- ಅವರ್ಗ ಮಹಿಳೆ (ಅ) ಸಾಮಾನ್ಯ (ಉ) ಹಾರ್ಸಿಕಟ್ಟಾ- ಪ ಮಹಿಳೆ (ಅ) ಸಾಮಾನ್ಯ-(ಉ) ಬಿದ್ರಕಾನ- ಸಾಮಾನ್ಯ ಮಹಿಳೆ (ಅ) ಅವರ್ಗ (ಉ)
ಕೋಲಶಿರ್ಸಿ- ಸಾಮಾನ್ಯ ಮಹಿಳೆ (ಅ) ಅ ವರ್ಗ ಮಹಿಳೆ (ಉ)
ಕಾನಗೋಡು- ಸಾಮಾನ್ಯ (ಅ) ಸಾಮಾನ್ಯ ಮಹಿಳೆ (ಉ)
