


ಸಿದ್ಧಾಪುರದ ಹಿರಿಯ ಸಾಮಾಜಿಕ ಕಾರ್ಯಕರ್ತ,ಉದ್ಯಮಿ ವೆಂಕಟದಾಸ ಬಾಳಿಗಾ ತಮ್ಮ ೮೭ ನೇ ವಯಸ್ಸಿನಲ್ಲಿ ಮುಂಬೈನ ತಮ್ಮ ಮಗನ ಮನೆಯಲ್ಲಿ ಶುಕ್ರವಾರ ನಿಧನರಾಗಿದ್ದಾರೆ. ಅವರ ಅಂತ್ಯಕ್ರೀಯೆ ಇಂದು ಸಿದ್ಧಾಪುರದಲ್ಲಿ ನಡೆಯಿತು.
ಕ್ರೀಡಾಪಟು, ಕ್ರೀಡಾಪ್ರೇಮಿ,ಸಂಘದ ಪ್ರಮುಖರಾಗಿದ್ದ ವೆಂಕಟದಾಸ ಬಾಳಿಗಾ ಟಿಂಬರ್ ಗುತ್ತಿಗೆದಾರರಾಗಿ,ದಿ. ಗೋವಿಂದ ಶಾನಭಾಗರ ನಿಕಟವರ್ತಿಯಾಗಿ,ಕರ್ನಾಟಕ ಸಂಘದ ಪ್ರಮುಖರಾಗಿ ಗುರುತಿಸಿಕೊಂಡಿದ್ದರು.
ಮೃತರು ಮೂವರು ಪುತ್ರರೊಂದಿಗೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಕೋರಿ ಸದ್ಘತಿಗೆ ಪ್ರಾರ್ಥಿಸಿರುವ ಕೆ.ಜಿ.ನಾಯ್ಕ ಹಣಜಿಬೈಲ್, ಮಹಾಬಲೇಶ್ವರ ನಾಯ್ಕ ಕರಮನೆ,ಗೋಪಾಲ ಶಾನಭಾಗ,ಆರ್.ಕೆ.ಹೊನ್ನೆಗುಂಡಿ,ಕೆ.ಜಿ.ನಾಗರಾಜ್, ಆನಂದ ನಾಯ್ಕ ಸೇರಿದ ಅನೇಕರು ಅವರ ಸೇವೆಯನ್ನು ಸ್ಮರಿಸಿದ್ದಾರೆ.
