

ಹಿಂದಿನ ಅವಧಿಯ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶಿರಸಿ ಕ್ಷೇತ್ರದಲ್ಲಿ ಪರಾಭವಗೊಂಡು ಒಂದು ತಿಂಗಳು ಕಳೆದಿದೆ. ಕಾಗೇರಿ ಸೋಲಿನ ನಂತರ ಮಳೆಗಾಲ ನಿಂತು ಬರಗಾಲಪ್ರಾರಂಭವಾಗಿರುವುದಕ್ಕೂ ಅವರೇ ಹೇಳುವ ಹಿಂದುತ್ವದ ಮುಖವಾಡದ ಸನಾತನ ಮೌಲ್ಯಗಳಿಗೂ ಏನು ಸಂಬಂಧವಿದೆಯೋ ತಿಳಿದಿಲ್ಲ. ಆದರೆ ವೈದಿಕ ಜ್ಯೋತಿಷ್ಯ, ಧಾರ್ಮಿಕತೆ, ಹಿಂದುತ್ವ, ಬಿ.ಜೆ.ಪಿ. ರಾಷ್ಟ್ರೀಯತೆಗಳ ಸಕಲೆಂಟು ನಾಟಕಗಳ ನಿರಂತರ ಪ್ರಯೋಗದ ನಡುವೆ ಕೂಡಾ ಸೋಲಿಲ್ಲದ ಸರದಾರ ಕಾಗೇರಿ ವಿಶ್ವೇಶ್ವರ ಹೆಗಡೆಯವರನ್ನು ಸೋಲಿಸಿ ಮನೆಗೆ ಕಳುಹಿಸಿದ್ದು ಭೀಮಣ್ಣ ನಾಯ್ಕರ ಸಾಧನೆ!
ಭೀಮಣ್ಣ ನಾಯ್ಕ ಸತತ ಆರು ಚುನಾವಣೆಗಳನ್ನು ಸೋತು ದಾಖಲೆ ಬರೆದಿದ್ದರೆ ಬಿ.ಜೆ.ಪಿ.ಯ ವಿಶ್ವೇಶ್ವರ ಹೆಗಡೆ ನಿರಂತರ ಆರು ಚುನಾವಣೆಗಳನ್ನು ಜಾತಿ-ಧರ್ಮದ ಕುತಂತ್ರ ರಾಜಕೀಯದಿಂದಲೇ ಅನಾಯಾಸವಾಗಿ ಗೆದ್ದಿದ್ದರು.
ಕ್ಷೇತ್ರ ಪುನರ್ವಿಂಗಡನೆ, ಬಿ.ಜೆ.ಪಿ. ಆರೆಸ್ಸೆಸ್ ಗಳ ಬ್ರಾಹ್ಮಣ ಪ್ರೀತಿ, ಮುಗ್ಧ ಹಿಂದುಳಿದವರ ಮೂರ್ಖ ಹಿಂದುತ್ವ! ಈ ಎಲ್ಲಾ ಅಂಶಗಳ ಫಲಾನುಭವಿ ಆಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಬಿ.ಜೆ.ಪಿ. ಸೋಲಲಿ, ಗೆಲ್ಲಲಿ ತಾವು ಮಾತ್ರ ಗೆದ್ದು ಶಿರಸಿಯ ರಾಘವೇಂದ್ರ ಮಠದ ಎದುರು ವಿಭಜಕ ರಾಜಕೀಯದಲ್ಲಿ ತೊಡಗಿಬಿಡುತಿದ್ದರು. ರಾಷ್ಟ್ರೀಯವಾದ,ಭಾರತೀಯತೆ ಎನ್ನುವ ಸಂಘಿ ಸುಳ್ಳನ್ನೇ ಸತ್ಯದ ತಲೆ ಮೇಲೆ ಹೊಡೆದಂತೆ ಹೇಳಿ ಬ್ರಾಹ್ಮಣ ಗುಲಾಮಭಕ್ತರಿಂದ ಬಹುಪರಾಕ್ ಹೇಳಿಸಿಕೊಳ್ಳುತಿದ್ದ ಕಾಗೇರಿ ತಾನು ಶಾಶ್ವತ ಎಂಎಲ್ ಎ. ಎನ್ನುವ ಗರ್ವಾಲಂಕೃತರಾಗಿದ್ದರು.
ತಾನು ಮಾಡಿದ್ದೇಪುಣ್ಯ ಕೆಲಸ ಎಂದು ಶಿರಸಿ ಮಾರಿಕಾಂಬಾ ದೇವಸ್ಥಾನದಲ್ಲಿ ಕೈ ಹಾಕಿದರು. ಶಿರಸಿ ನಗರಸಭೆ, ಸಿದ್ಧಾಪುರ ಪ.ಪಂ. ದಲಿತರು ಹಿಂದುಳಿದವರ ಕಲ್ಯಾಣ ಕಾರ್ಯಕ್ರಮಗಳು,ಸರ್ಕಾರದ ನಾಮನಿರ್ಧೇಶನ ಎಲ್ಲೆಂದರಲ್ಲಿ ತಮ್ಮ ಮೂಗಿನ ನೇರಕ್ಕೇ ವರ್ತಿಸಿದರು. ಕೆಲವು ವಂಧಿ ಮಾಗಧರು ಕಾಗೇರಿ ಭಜನಾ ಮಂಡಳಿ ಸೇರಿಕೊಂಡರು, ಅವರು ಹೇಳಿದ್ದೇ ಸಿದ್ಧಾಂತ,ಕೂಗಿದ್ದೇ ಜೈಕಾರ!
ಕಾಗೇರಿ ಸಂಘದ ಶೂದ್ರವಿರೋಧಿ ಆರೆಸ್ಸೆಸ್ ಕಾರ್ಯಾಚರಣೆಗೆ ಸರ್ಕಾರ, ಸರ್ಕಾರೇತರ ಸಂಸ್ಥೆಗಳನ್ನು ಬಳಸಿಕೊಂಡರು ಇಂಥ ಅಪಸವ್ಯಗಳಿಂದಲೇ ಮೋದಿಯಂತೆ ಮೆರೆಯುತ್ತೇನೆ ಎಂದುಕೊಂಡಿದ್ದ ಕಾಗೇರಿಯವರಿಗೆ ಚಳ್ಳೆ ಹಣ್ಣ ತಿನ್ನಿಸಲು ಶೂದ್ರಶಕ್ತಿ ತಯಾರಾಗುತಿದ್ದಾಗ ನಿಧಾನವಾಗಿ ತಮ್ಮ ಮತಬ್ಯಾಂಕ್ ಬ್ರಾಹ್ಮಣರಲ್ಲೂ ಭೇದವೆಣಿಸಲು ಪ್ರಾರಂಭಿಸಿದರು. ಜಯ,ಹುದ್ದೆ, ಅಧಿಕಾರ ಕಾಗೇರಿಯಂಥ ಸಜ್ಜನ-ಸಭ್ಯ ರನ್ನು ದುರ್ಜನರನ್ನಾಗಿಸುವಂತೆ ಸ್ವಯಂ ತಾವೇ ಕೋಟೆ ಕಟ್ಟಿಕೊಂಡರು!
ವಿರೋಧಿಗಳನ್ನು, ಆಪ್ತೇಷ್ಟರನ್ನೂ ಸೌಮ್ಯವಾಗೇ ಮುಗಿಸುವ ಹಿಂದೂ, ಹಿಂದುತ್ವದ ರಹಸ್ಯವನ್ನು ತಮ್ಮ ಬದುಕಿನುದ್ದಕ್ಕೂ ಅನುಸರಿಸಿದ ಕಾಗೇರಿ ಅಂತಿಮವಾಗಿಭೀಮಣ್ಣ ನಾಯ್ಕರೆದುರು ಪರಾಭವಗೊಂಡರು.
ಕಾಗೇರಿಯವರ ಸೋಲು, ಭೀಮಣ್ಣ ನಾಯ್ಕರ ಕಾಂಗ್ರೆಸ್ ಗೆಲುವಿನ ಹಿಂದೆ ಅನೇಕ ನೇರ-ಪರೋಕ್ಷ ಕಾರ್ಯಾಚರಣೆಗಳಿವೆ. ಆದರೆ ಸಿದ್ಧಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತನಾಯ್ಕರ ಅವಿರತ ಹೋರಾಟ, ಕೇ.ಜಿ. ನಾಯ್ಕ ಹಣಜಿಬೈಲ್ ರ ಸ್ವಾಭಿಮಾನದ ರಣೋತ್ಸಾಹ,ಜೊತೆಗೆ ಮೋದಿ, ಬಿ.ಜೆ.ಪಿ.ಗಳ ಸುಳ್ಳು ಸಂಘದ ಕಪಟ ನಾಟಕ ಅರಿತ ಮತದಾರರ ವಿವೇಕ ಇವುಗಳೊಂದಿಗೆ ಹತ್ತಾರು ಅಂಶಗಳು ಭೀಮಣ್ಣ ನಾಯ್ಕರ ಕೈ ಹಿಡಿದಿವೆ, ನಿರಂತರ ಅನಾಯಾಸ ಗೆಲುವು ಕಾಣುತಿದ್ದ ಕಾಗೇರಿಯವರ ಹೀನ ಜಾತೀಯತೆ, ಧರ್ಮಾಂಧತೆಯ ಕುಟಿಲ ಸಂಘಿಷಡ್ಯಂತ್ರಗಳಿಗೆ ಶಿರಸಿ-ಸಿದ್ಧಾಪುರದ ಮತದಾರ ಸೋಲಲಿಲ್ಲ. ಇವುಗಳ ಜೊತೆಗೆ ಕರ್ನಾಟಕದಲ್ಲಿ ಬಿ.ಜೆ.ಪಿ. ಸೋಲನ್ನು ಯಡಿಯೂರಪ್ಪನವರ ರಾಜೀನಾಮೆ ಪ್ರಹಸನ ನಿರ್ಧರಿಸಿದ್ದಂತೆ ಶಿರಸಿ ಕ್ಷೇತ್ರದಲ್ಲಿ ಕಾಗೇರಿಯವರ ಸೋಲನ್ನು ಕೆ.ಜಿ. ನಾಯ್ಕರ ವೈರತ್ವವೇ ನಿರ್ಧರಿಸಿತ್ತು! ಇದಕ್ಕೆ ಪುರಾವೆಗಳಾಗಿ ಸಮಾಜಮುಖಿ, ಸಮಾಜಮುಖಿನ್ಯೂಸ್ ಯೂಟ್ಯೂಬ್ ಚಾನೆಲ್ ಗಳಲ್ಲಿ ಕೆಲವು ವಿಡಿಯೋ ತುಣುಕುಗಳು ಲಭ್ಯವಿವೆ.
