

ರಾಜಕೀಯ ಸಮಯಸಾಧಕರಾದ ಗೋಪ್ರೇಮಿಗಳ ಹಫ್ತಾ ವಸೂಲಿಗೆ ಲಾಭ ತರುವ ಏಕೈಕ ಉದ್ದೇಶದಿಂದ ಹಿಂದಿನ ಸರ್ಕಾರ ಜಾರಿ ಮಾಡಿದ್ದ ಗೋಹತ್ಯೆ ನಿಷೇಧ ಮತ್ತು ಮತಾಂತರ ನಿಷೇಧ ಕಾಯಿದೆಗಳನ್ನು ಕಸದ ಬುಟ್ಟಿಗೆ ಎಸೆಯಲು ಹೊಸ ಸರ್ಕಾರ ತೀರ್ಮಾನ ಕೈಗೊಂಡಿದೆ.
ಈ ತೀರ್ಮಾನದ ನಂತರ ಸರ್ಕಾರದ ವಿರುದ್ಧ ಸಾರ್ವಜನಿಕರನ್ನು ಉತ್ತೇಜಿಸುವ ಸಂಘಿ ನಾಟಕ ತೆರೆಮರೆಯಲ್ಲಿ ನಡೆಯುತ್ತಿದೆ. ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಹಫ್ತಾ ವಸೂಲಿಯ ರುಚಿ ಕಂಡಿರುವ ಸಂಘಿದಳವೊಂದು ಹಿಂದಿನ ಸರ್ಕಾರದ ಅವಧಿಯಲ್ಲಿ ಜಾನುವಾರು ಸಾಗಾಟಕ್ಕೆ ಬೆಲೆ ನಿಗದಿಪಡಿಸಿಕೊಂಡಿತ್ತಂತೆ! ಹೀಗೆ ಹಫ್ತಾ ನೀಡದ ರೈತರು, ಜಾನುವಾರು ವ್ಯಾಪಾರಿಗಳಿಗೆ ತೊಂದರೆ ಮಾಡುವ ಲಾಭದ ವ್ಯವಹಾರ ನಡೆಸುವ ಮತಾಂಧ ಸಂಘಿಗಳು ಈಗ ಕೆಲಸವಿಲ್ಲದ ಮಂಗಗಳಾದಂತಾಗಿದ್ದಾರೆ. ಇದೇ ಹಿನ್ನೆಲೆಯಲ್ಲಿ ಶಿರಸಿಯಲ್ಲಿ ಭಜರಂಗಿ ಪ್ರಹಸನ ಶುರುವಾಗಿದೆ.
ಇಂಥ ಸಂಘಿ ಕುತಂತ್ರಗಳ ಫಲವಾಗಿ ಕಳೆದ ವಾರ ಸಿದ್ಧಾಪುರ ಪೊಲೀಸರು ಮೂರು ಜನರನ್ನು ಜಾನುವಾರು ಸಾಗಾಟದ ಹಿನ್ನೆಲೆಯಲ್ಲಿ ಬಂಧಿಸಿದ್ದರು. ಈ ಬಂಧಿತ ಆರೋಪಿಗಳಲ್ಲಿ ಒಬ್ಬ ಬಕ್ರೀದ್ ಮತ್ತು ಹೆಂಡತಿ ತುಂಬು ಗರ್ಭಿಣಿ ಎನ್ನುವ ಕಾರಣಕ್ಕೆ ಪರಾರಿಯಾಗಿದ್ದ. ಈ ಪರಾರಿ ನಂತರ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಅದೇ ದಿನ ಬಂಧಿಸಿದ್ದಾರೆ. ಈ ಪ್ರಕರಣ ಇಷ್ಟಕ್ಕೇ ಮುಗಿದು ಹೋಗಿದ್ದರೆ ಯಾವ ಸುದ್ದಿ-ವಿಶ್ಲೇಷಣೆಗಳಾಗುತ್ತಿರಲಿಲ್ಲ.
ದುರಂತವೆಂದರೆ… ಈ ಪ್ರಕರಣದ ನಂತರ ಪರಾರಿ ವೇಳೆ ಕರ್ತವ್ಯದಲ್ಲಿದ್ದ ಮೂರು ಜನ ಪೊಲೀಸರನ್ನು ಅಮಾನತ್ತು ಮಾಡಲಾಯಿತು. ಮೂರು ಜನ ಪೊಲೀಸರ ಅಮಾನತ್ತಿಗೆ ಕಾರಣ ಕರ್ತವ್ಯನಿರ್ಲಕ್ಷ!
ವಿರೇಶ್ ಚಲವಾದಿ,ಉದಯ ಮೇಸ್ತ,ಪ್ರಸನ್ನಕುಮಾರ್ ಎಂಬ ಮೂರು ಜನ ಪೊಲೀಸರನ್ನು ಅಮಾನತ್ತು ಮಾಡುತ್ತಲೇ ಪ್ರಕರಣದ ವಿಚಾರ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರ ಬಳಿ ಹೋಗಿದೆ. ನಿರೀಕ್ಷೆಯಂತೆ ಈ ಪ್ರಕರಣ ಹಿರಿಯ ಪೊಲೀಸ್ ಅಧಿಕಾರಿಗಳ ತಲೆಬಿಸಿಗೆ ಕಾರಣವಾಗಿದೆ. ಈ ಪ್ರಕರಣದ ದುಷ್ಪರಿಣಾಮ ಎನ್ನುವಂತೆ ಹಿರಿಯ ಅಧಿಕಾರಿಗಳು ಆದ ಲೋಪಕ್ಕೆ ಸಾಮಾನ್ಯ ಪೇದೆಗಳ ಮೇಲೇಕೆ ಬ್ರಹ್ಮಾಸ್ತ್ರ ಎಂದು ಪ್ರಶ್ನಿಸಿ ಪಿ.ಎಸ್.ಐ. ತಲೆ ದಂಡ ಕೇಳಿದ್ದಾರೆ. ಹೀಗೆ ಸಂಘಿ ಕಳ್ಳ ದಳದವರಿಂದ ಪ್ರಾರಂಭವಾದ ಬೆಂಕಿಯ ಜ್ವಾಲೆ ಅಮಾಯಕ ಪೊಲೀಸರನ್ನು ಬಲಿ ಪಡೆದಿದೆ.
ಈ ಪ್ರಕರಣದಲ್ಲಿ ಬಾಧಿತರಾದವರೆಲ್ಲ ಬಹುತೇಕ ದಲಿತರು ಎನ್ನುವುದು ವಾಸ್ತವ. ಧರ್ಮ, ದೇವರು,ಗೋಪ್ರೇಮದ ಹೆಸರಿನ ಸಮಯಸಾಧಕ ಸಂಘಿಗಳ ಉದ್ದೇಶ ಅಂತಿಮವಾಗಿ ದಲಿತರು, ಹಿಂದುಳಿದವರು. ಈ ಸಂಘಿ ಕಾರ್ಯಾಚರಣೆಯ ಬಲಿಪಶುಗಳು ಅಮಾಯಕರು. ಸಂಘಿಗಳ ರಾಜಕೀಯ ಕಪಟನಾಟಕದ ಬಲಿಪಶುಗಳು ಎಂದಿನಂತೆ ಈಗ ಕೂಡಾ ಅಮಾಯಕರೆ.
ಸಿದ್ಧಾಪುರ ಪೊಲೀಸರ ಮೇಲಿನ ಈ ಕ್ರಮ ಅರ್ಥವಾದರೆ ಶಿರಸಿ ಸಂಘಿ ನಾಟಕದ ಸೂತ್ರ ಅರ್ಥವಾಗುತ್ತದೆ. ಕವಿ ಬ್ರೆಕ್ಟ್ ಹೇಳಿದಂತೆ ಪಟ್ಟಬದ್ರರ ಹುಡುಗಾಟಕ್ಕೆ ಸಿಗುವವರು ಅಮಾಯಕರಾದರೆ ನ್ಯಾಯ ಸಿಗಲು ಸಾಧ್ಯವೆ?
ಸರಳ,ಸಂಭಾವಿತ ಮಾನತಪ್ಪ ಕುಂಬಾರ ಮತ್ತು ಅಮಾಯಕ ಪೊಲೀಸರಿಗೆ ನ್ಯಾಯ ಸಿಗುವಂತಾಗಲಿ.
