ಮಾವಿನಗುಂಡಿ ಪ್ರಕರಣ- ಅಮಾಯಕರ ತಲೆದಂಡ!

ರಾಜಕೀಯ ಸಮಯಸಾಧಕರಾದ ಗೋಪ್ರೇಮಿಗಳ ಹಫ್ತಾ ವಸೂಲಿಗೆ ಲಾಭ ತರುವ ಏಕೈಕ ಉದ್ದೇಶದಿಂದ ಹಿಂದಿನ ಸರ್ಕಾರ ಜಾರಿ ಮಾಡಿದ್ದ ಗೋಹತ್ಯೆ ನಿಷೇಧ ಮತ್ತು ಮತಾಂತರ ನಿಷೇಧ ಕಾಯಿದೆಗಳನ್ನು ಕಸದ ಬುಟ್ಟಿಗೆ ಎಸೆಯಲು ಹೊಸ ಸರ್ಕಾರ ತೀರ್ಮಾನ ಕೈಗೊಂಡಿದೆ.

ಈ ತೀರ್ಮಾನದ ನಂತರ ಸರ್ಕಾರದ ವಿರುದ್ಧ ಸಾರ್ವಜನಿಕರನ್ನು ಉತ್ತೇಜಿಸುವ ಸಂಘಿ ನಾಟಕ ತೆರೆಮರೆಯಲ್ಲಿ ನಡೆಯುತ್ತಿದೆ. ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಹಫ್ತಾ ವಸೂಲಿಯ ರುಚಿ ಕಂಡಿರುವ ಸಂಘಿದಳವೊಂದು ಹಿಂದಿನ ಸರ್ಕಾರದ ಅವಧಿಯಲ್ಲಿ ಜಾನುವಾರು ಸಾಗಾಟಕ್ಕೆ ಬೆಲೆ ನಿಗದಿಪಡಿಸಿಕೊಂಡಿತ್ತಂತೆ! ಹೀಗೆ ಹಫ್ತಾ ನೀಡದ ರೈತರು, ಜಾನುವಾರು ವ್ಯಾಪಾರಿಗಳಿಗೆ ತೊಂದರೆ ಮಾಡುವ ಲಾಭದ ವ್ಯವಹಾರ ನಡೆಸುವ ಮತಾಂಧ ಸಂಘಿಗಳು ಈಗ ಕೆಲಸವಿಲ್ಲದ ಮಂಗಗಳಾದಂತಾಗಿದ್ದಾರೆ. ಇದೇ ಹಿನ್ನೆಲೆಯಲ್ಲಿ ಶಿರಸಿಯಲ್ಲಿ ಭಜರಂಗಿ ಪ್ರಹಸನ ಶುರುವಾಗಿದೆ.

ಇಂಥ ಸಂಘಿ ಕುತಂತ್ರಗಳ ಫಲವಾಗಿ ಕಳೆದ ವಾರ ಸಿದ್ಧಾಪುರ ಪೊಲೀಸರು ಮೂರು ಜನರನ್ನು ಜಾನುವಾರು ಸಾಗಾಟದ ಹಿನ್ನೆಲೆಯಲ್ಲಿ ಬಂಧಿಸಿದ್ದರು. ಈ ಬಂಧಿತ ಆರೋಪಿಗಳಲ್ಲಿ ಒಬ್ಬ ಬಕ್ರೀದ್‌ ಮತ್ತು ಹೆಂಡತಿ ತುಂಬು ಗರ್ಭಿಣಿ ಎನ್ನುವ ಕಾರಣಕ್ಕೆ ಪರಾರಿಯಾಗಿದ್ದ. ಈ ಪರಾರಿ ನಂತರ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಅದೇ ದಿನ ಬಂಧಿಸಿದ್ದಾರೆ. ಈ ಪ್ರಕರಣ ಇಷ್ಟಕ್ಕೇ ಮುಗಿದು ಹೋಗಿದ್ದರೆ ಯಾವ ಸುದ್ದಿ-ವಿಶ್ಲೇಷಣೆಗಳಾಗುತ್ತಿರಲಿಲ್ಲ.

ದುರಂತವೆಂದರೆ… ಈ ಪ್ರಕರಣದ ನಂತರ ಪರಾರಿ ವೇಳೆ ಕರ್ತವ್ಯದಲ್ಲಿದ್ದ ಮೂರು ಜನ ಪೊಲೀಸರನ್ನು ಅಮಾನತ್ತು ಮಾಡಲಾಯಿತು. ಮೂರು ಜನ ಪೊಲೀಸರ ಅಮಾನತ್ತಿಗೆ ಕಾರಣ ಕರ್ತವ್ಯನಿರ್ಲಕ್ಷ!

ವಿರೇಶ್‌ ಚಲವಾದಿ,ಉದಯ ಮೇಸ್ತ,ಪ್ರಸನ್ನಕುಮಾರ್‌ ಎಂಬ ಮೂರು ಜನ ಪೊಲೀಸರನ್ನು ಅಮಾನತ್ತು ಮಾಡುತ್ತಲೇ ಪ್ರಕರಣದ ವಿಚಾರ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರ ಬಳಿ ಹೋಗಿದೆ. ನಿರೀಕ್ಷೆಯಂತೆ ಈ ಪ್ರಕರಣ ಹಿರಿಯ ಪೊಲೀಸ್‌ ಅಧಿಕಾರಿಗಳ ತಲೆಬಿಸಿಗೆ ಕಾರಣವಾಗಿದೆ. ಈ ಪ್ರಕರಣದ ದುಷ್ಪರಿಣಾಮ ಎನ್ನುವಂತೆ ಹಿರಿಯ ಅಧಿಕಾರಿಗಳು ಆದ ಲೋಪಕ್ಕೆ ಸಾಮಾನ್ಯ ಪೇದೆಗಳ ಮೇಲೇಕೆ ಬ್ರಹ್ಮಾಸ್ತ್ರ ಎಂದು ಪ್ರಶ್ನಿಸಿ ಪಿ.ಎಸ್.ಐ. ತಲೆ ದಂಡ ಕೇಳಿದ್ದಾರೆ. ಹೀಗೆ ಸಂಘಿ ಕಳ್ಳ ದಳದವರಿಂದ ಪ್ರಾರಂಭವಾದ ಬೆಂಕಿಯ ಜ್ವಾಲೆ ಅಮಾಯಕ ಪೊಲೀಸರನ್ನು ಬಲಿ ಪಡೆದಿದೆ.

ಈ ಪ್ರಕರಣದಲ್ಲಿ ಬಾಧಿತರಾದವರೆಲ್ಲ ಬಹುತೇಕ ದಲಿತರು ಎನ್ನುವುದು ವಾಸ್ತವ. ಧರ್ಮ, ದೇವರು,ಗೋಪ್ರೇಮದ ಹೆಸರಿನ ಸಮಯಸಾಧಕ ಸಂಘಿಗಳ ಉದ್ದೇಶ ಅಂತಿಮವಾಗಿ ದಲಿತರು, ಹಿಂದುಳಿದವರು. ಈ ಸಂಘಿ ಕಾರ್ಯಾಚರಣೆಯ ಬಲಿಪಶುಗಳು ಅಮಾಯಕರು. ಸಂಘಿಗಳ ರಾಜಕೀಯ ಕಪಟನಾಟಕದ ಬಲಿಪಶುಗಳು ಎಂದಿನಂತೆ ಈಗ ಕೂಡಾ ಅಮಾಯಕರೆ.

ಸಿದ್ಧಾಪುರ ಪೊಲೀಸರ ಮೇಲಿನ ಈ ಕ್ರಮ ಅರ್ಥವಾದರೆ ಶಿರಸಿ ಸಂಘಿ ನಾಟಕದ ಸೂತ್ರ ಅರ್ಥವಾಗುತ್ತದೆ. ಕವಿ ಬ್ರೆಕ್ಟ್‌ ಹೇಳಿದಂತೆ ಪಟ್ಟಬದ್ರರ ಹುಡುಗಾಟಕ್ಕೆ ಸಿಗುವವರು ಅಮಾಯಕರಾದರೆ ನ್ಯಾಯ ಸಿಗಲು ಸಾಧ್ಯವೆ?

ಸರಳ,ಸಂಭಾವಿತ ಮಾನತಪ್ಪ ಕುಂಬಾರ ಮತ್ತು ಅಮಾಯಕ ಪೊಲೀಸರಿಗೆ ನ್ಯಾಯ ಸಿಗುವಂತಾಗಲಿ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *