ಶಿರಸಿಯ ಜಿಲ್ಲಾ ಅರಣ್ಯ ಹಕ್ಕು ಸಮೀತಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಒಂದು ಲಕ್ಷ ಸಸಿಗಳನ್ನು ನೆಡುವ ಕಾರ್ಯಕ್ರಮ ಆಯೋಜಿಸಿದೆ. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಲಾಂಚನ (೩೨ ವರ್ಷ ಹೋರಾಟ,ಒಂದು ಲಕ್ಷ ಗಿಡ ) ಇಂದು ಬಿಡುಗಡೆಯಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ಎ. ರವೀಂದ್ರ ಅರಣ್ಯ ಭೂಮಿ ಹಕ್ಕು ಹೋರಾಟಕ್ಕೆ ಈಗ ೩೨ ವರ್ಷಗಳ ಕಾಲ. ಇದರ ನೆನಪು ಅರಣ್ಯ ರಕ್ಷಣೆ ಬದ್ಧತೆ ಹಿನ್ನೆಲೆಯಲ್ಲಿ ಈ ವರ್ಷ ಜಿಲ್ಲೆಯಾದ್ಯಂತ ಒಂದು ಲಕ್ಷ ಗಿಡಗಳನ್ನು ನೆಡುವ ಯೋಜನೆ ರೂಪಿಸಿದ್ದೇವೆ ಎಂದರು.