ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ.

ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು!

ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ ಯುವಕರು ಡೊಳ್ಳು ಹೊಡೆಯುತ್ತಾ ನಮ್ಮೂರಿನ ಪತಾಕೆಯನ್ನು ರಾಷ್ಟ್ರಮಟ್ಟದ ವರೆಗೆ ಹಾರಿಸಿದರು.

ಇವು ಬುದ್ಧಿವಂತಿಕೆಯಲ್ಲವೆ?

ಹಳ್ಳಿಗಾಡಿನ ಜನ ತಮ್ಮ ಹೊಟ್ಟೆಪಾಡು ನೋಡುತ್ತಲೇ ಜಾನಪದ ಹಾಡುತ್ತಾರೆ. ಸಮೃದ್ಧ ಪರಂಪರೆಯೊಂದನ್ನು ಉಳಿಸಲು ಬೆವರು ಸುರಿಸುತ್ತಾರೆ.

ಇವೆಲ್ಲಾ ಕಾರುಣ್ಯ ಉಳ್ಳವರಿಗೆ ಬೆರಗು ಹುಟ್ಟಿಸಬೇಕು. ಮಾನವೀಯತೆ ಕೃತಿ, ಬದುಕಿನಲ್ಲಿ ಮೇಳೈಸದೆ ಶಾಸ್ತ್ರ,ವೇದಾಂತಗಳಾದರೆ ಲೋಕಾಂತವಾಗುವುದಿಲ್ಲ.

ಕನ್ನಡ ತಿಂಗಳು ನವೆಂಬರ್‌ ಮುಗಿಯಿತು ಕನ್ನಡ ಬಾವುಟ ಏರದ ಎತ್ತರವಿಲ್ಲ. ಕನ್ನಡಕ್ಕಾಗಿ ದುಡಿಯುತ್ತಿರುವವರು ಹೊಸ ಹುಡುಗರು ಎನ್ನುವುದು ವಿಶೇಶ

ಕೇಡಿಗಳು ಎಲ್ಲಡೆಯೂ ಇರುತ್ತಾರೆ. ರಾಜಕೀಯದಲ್ಲಿ ಅಧಿಕವಾಗಿರುವುದರಿಂದ ಕೇಡಿಗೆ ರಾಜಕೀಯ ಅನ್ವರ್ಥಕವಾಗುತ್ತಿದೆ.

ಬ್ರಟೀಷರು ಇಲ್ಲಿಗೆ ವ್ಯಾಪಾರಕ್ಕೆ ಬರುವ ಮೊದಲು, ನೆಲೆ ಹುಡುಕಿ ಬಂದವರು ತಮ್ಮ ಅಸ್ಥಿತ್ವ ಸ್ಥಾಪನೆಗಾಗಿ ಬ್ರಿಟೀಷರ ವಿರುದ್ಧ ಸಮರ ಸಾರಿದರು!. ಆಗಲೂ ಕೇಡಿಗಳು ಬ್ರಟೀಷರ ಪರವಾಗಿದ್ದರು. ಈ ಹೋರಾಟ ಚಳುವಳಿಯಾಗಿ ವ್ಯಾಪಿಸುತಿದ್ದಾಗಲೂ ಕೆಲವು ಮೂಲನಿವಾಸಿಗಳು ಭವ್ಯ ಶೋಧನೆಯಾದ ಬೆಂಕಿಯ ಬೆರಗಿಗೆ ಮೈಒಡ್ಡಿ ಚಳಿ ಕಾಯಿಸಿಕೊಳ್ಳುತಿದ್ದರು.

ಯಾರ್ಯಾರೆಲ್ಲಾ ಬಂದು ಹೋದರು. ಕೆಲವರು ಗಾಡಾಂಧಕಾರದಲ್ಲಿದ್ದರು!. ಅವರಿಗೆ ಸ್ವಾತಂತ್ರ್ಯದ ಸವಿ ತಿಳಿದಿರಲಿಲ್ಲ. ಈಗಿನ ಮತಾಂಧರಂತೆ ಗುಲಾಮರಾಗಿರುವವರಿಗೆ ಸ್ವಾತಂತ್ರ್ಯದ ಸವಿ ಸ್ಫರ್ಶಿಸುವುದಿಲ್ಲ! ಕೆಲವರು ಆಶಾಡಭೂತಿಗಳು ಸಂಘ ಕಟ್ಟಿಕೊಂಡಿದ್ದರು. ಅವರು ಸ್ವಾರ್ಥಕ್ಕೆ ಹೋರಾಡಿದರು!

ಇವರ ಎದುರು ನಿಂತವರು ತಾವು ಸವೆದು ಕಾಗೋಡು ಹೋರಾಟದಂಥ ಚಳವಳಿ ಕಟ್ಟಿ ಲಕ್ಷಾಂತರ ಜನರಿಗೆ ನೆಲ, ನೆಲೆ ಕೊಡಿಸಿದರು. ಅವರು ಕೂಗಿದ್ದು ಇನ್ಕ್ವಿಲಾಬ್ ಜಿಂದಾಬಾದ್…‌ ಹೋರಾಟ ಚಿರಾಯುವಾಗಲಿ.

ಸದಾ ಲಾಭದ ಪರವಾಗಿದ್ದವರು ಮೊಗಲರ ಜೊತೆಗೂ ಇದ್ದರು, ಬ್ರಟೀಷರೊಂದಿಗೂ ಕೈ ಜೋಡಿಸಿದ್ದರು. ಈಗಲೂ ಕೇಡಿಗಳಿದ್ದಾರೆ ದುಡಿಮೆಗಾಗಿ ದೇಶಭಕ್ತರಾಗುತ್ತಾರೆ ಕೀರ್ತಿ, ದುಡಿಮೆಗೆ ರಾಷ್ಟ್ರೀಯತೆಯ ಸೋಗು ತೊಡುತ್ತಾರೆ. ಇವರ ಬಣ್ಣ ರಾತ್ರಿಯೂ ಖಾತ್ರಿಯಾಗುತ್ತದೆ ಆದರೆ ಹಗಲೂ ಕೂಡಾ ಇವರು ನಿರಾಳ!.

ಮತ್ತೆ ಸಾಹಿತ್ಯ ಸಮ್ಮೇಳನ, ಚುನಾವಣೆ, ಶಿಶಿರ, ಬೇಸಿಗೆ ಬಿಸಿಲು,ಸನ್ಮಾನ, ಅವಕಾಶ, ಕೀರ್ತಿ, ಬಿರುದು ಎಲ್ಲವೂ ಬರುತ್ತಿವೆ. ಅಲ್ಲಿ ಅರ್ಹರು, ಯೋಗ್ಯರು ಕಾಣುವುದು ಕಡಿಮೆ. ಶ್ರೇಷ್ಠ ಸಂಸ್ಕೃತಿಯೇ ಅಸಮಾನತೆ, ಅವಕಾಶವಾದ, ಅಸ್ಫಶ್ಯತೆ, ಭಟ್ಟಂಗಿತನ ಪೋಶಿಸುತ್ತಿದೆಯಲ್ಲವೆ?

ಕಾಲ ಬದಲಾಗುತ್ತಿದೆ, ಜನ ಬದಲಾಗುತಿದ್ದಾರೆ ಆದರೆ ಸಿ.ಸಿ. ಕ್ಯಾಮರಾ ಇದ್ದರೂ ಕಳ್ಳತನ, ಕೇಡಿತನ, ವ್ಯಭಿಚಾರ, ದುರಾಚಾರ ಕಡಿಮೆಯಾಗುತ್ತಿಲ್ಲ ಕಡಮೆ ಕೇಡಿ ಜೈಲು ಸೇರುತ್ತಾನೆ ದೊಡ್ಡ ಕಳ್ಳ ಸನ್ಮಾನಕ್ಕೆ ಪಾತ್ರನಾಗುತ್ತಾನೆ. ನವೆಂಬರ್‌ ಕನ್ನಡದ ಕಂಪು, ಡಿಸೆಂಬರ್ ನ ಚಳಿಯಸೌಹಾರ್ದತೆ ಎಲ್ಲರನ್ನೂ ಪೊರೆಯಲ್ಲಿ. ಇದು ೨೦೨೪ ಕ್ಕೆ ವಿದಾಯದ ನುಡಿನಮನ, ೨೦೨೫ ಕ್ಕೆ ಸ್ವಾಗತ ತೋರಣ.

ಜನ ಬೆಳೆಸಿದರೆ ಬೆಳವಣಿಗೆ, ಮೆರೆಸಿದರೆ ಮೆರವಣಿಗೆ ಸಿದ್ದಾಪುರದ ಮಾಧ್ಯಮ ಪ್ರತಿನಿಧಿಗಳ ಸಂಘಕ್ಕೆ ಅಧ್ಯಕ್ಷನಾಗಿದ್ದೇನಿ, ನಮ್ಮ ಐದು ಅಂತರ್ಜಾಲ ವೇದಿಕೆಗಳ ಮೂಲಕ ದಿನ ಒಂದಕ್ಕೆ ಒಂದು ಲಕ್ಷ ಜನರನ್ನು ತಲುಪುವ ಸೀಮೋಲ್ಲಂಘನ ತಲುಪಿದ್ದೇವೆ.

ಉಳಿಸಿದವರೂ ನೀವೇ, ಬೆಳೆಸುವವರೂ ನೀವೇ. ನಿಮ್ಮ ಕೃಪೆ ನಿರಂತರವಾಗಿರಲಿ ಫಾಲೋ, ಸಬ್‌ ಸ್ಕ್ರೈಬ್‌ ಆಗದವರು ಇಂದೇ ಜೊತೆಯಾಗಿ.. (. samajamukhi.net news portal, samaajamukhi.net fb page, samajamukhinews & samaajamukhi youtube channels etc.

ಧನ್ಯವಾದಗಳು. ನಿಮ್ಮ ಕನ್ನೇಶ್.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *