ಭಟ್ಟರ ಮಂತ್ರಕ್ಕೆ ಸಿದ್ಧರಾಮಯ್ಯನವರೂ ಉದುರಿ ಬಿದ್ದರೆ….!?

ವಿಶ್ವೇಶ್ವರ ಭಟ್ಟರ ವಿಶ್ವಾಸಕ್ಕೆ ಪಾತ್ರರಾಗಿ ವಿಲನ್‌ ಗಳಾದ ಕನ್ನಡದ ಅನೇಕ ಪ್ರಮುಖರ ಪಟ್ಟಿಯೇ ಇದೆ. ಇತ್ತೀಚೆಗೆ ಭಟ್ಟರ ಕಾರ್ಯಕ್ರಮಕ್ಕೆ ಸಿದ್ಧರಾಮಯ್ಯ ಹೋಗಲಿದ್ದಾರೆ ಎನ್ನುವ ವಿಚಾರ ಬಹುಚರ್ಚೆಯ ವಿಷಯವಾಗಿದೆ.

ವಿಶ್ವೇ ಶ್ವರ ಭಟ್ಟರು ಮನುವಾದಿಗಳು ಎನ್ನುವ ವಿಚಾರದಲ್ಲಿ ಎರಡು ಮಾತುಗಳಿಲ್ಲ. ಅವರ ಹಿನ್ನೆಲೆ, ಅವರು ಬೆಳೆದು ಬಂದ ಪರಿಸರ, ಅವರ ಒಡನಾಟ ಇವೆಲ್ಲವುಗಳಿಗಿಂತ ಹೆಚ್ಚಾಗಿ ಭಟ್ಟರು ಬಿ.ಜೆ.ಪಿ. ಭಟರಾಗಿ ಬಹುಸಂಖ್ಯಾತರ ಭಾವನೆ,ಧೋರಣೆಗಳಿಗೆ ವಿರುದ್ಧವಾಗಿದ್ದರು ಎನ್ನುವುದು ಇಶ್ಯು.

ನಮ್ಮ ಪ್ರಗತಿ ಪರ ಸ್ನೇಹಿತರೆಲ್ಲಾ ಭಟ್ಟರ ಸ್ನೇಹಿತರನ್ನು ಸೈದ್ಧಾಂತಿಕ ಹಿನ್ನೆಲೆಯಿಂದ ಮಾತ್ರ ವಿಮರ್ಶಿಸಿದರೆ, ವಿರೋಧಿಸಿದರೆ ಅದನ್ನು ತಪ್ಪು ಎಂದು ಹೇಳಲಾದೀತೆ? ಅದೇನೇ ಇರಲಿ, ಮೊನ್ನೆ ಕೃಷ್ಣಪ್ರಸಾದ ಬರೆದ ಪ್ರಜಾವಾಣಿಯ ಅಂಕಣ ಈ ಭಟ್ಟರ ಪರಿವಾರ ಕನ್ನಡಿಗರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು ಎನ್ನುವುದನ್ನು ಒಪ್ಪುವ,ಬೆಂಬಲಿಸುವ ಕೆಲವೇ ಬರಹಗಾರರಲ್ಲಿ ನಾನೂ ಒಬ್ಬ.

ವಿಚಾರ ಏನಪ್ಪಾ ಅಂದ್ರೆ ನಮ್ಮ ಭಾಗದ ಹೋರಿ ಸ್ವಾಮಿ ತನ್ನ ಘನ ಕಾರ್ಯಕ್ಕೆ ಬಂಧನಕ್ಕೊಳಗಾಗಬೇಕಿದ್ದ ಸಮಯದಲ್ಲಿ ಈ ಭಾರತೀಯ ಬಹುಜನವಿರೋಧಿ ಪರಿವಾರದ ಮನುವಾದಿಗಳು ಸಿದ್ಧರಾಮಯ್ಯನವರೊಂದಿಗೆ ಸಲುಗೆ ಬಳಸಿ ಹೋರಿ ಸ್ವಾಮಿಯನ್ನು ಬಚಾವು ಮಾಡಿಸಿದರು! ಎನ್ನುವುದು.

ಹೋರಿ ಸ್ವಾಮಿಯಿರಲಿ, ತಿರುಪತಿ, ಕಾಂಚಿ, ಕಾಮಕೋಟಿ,ಪೇಜಾವರ ಯಾರೂ ಈ ನೆಲದ ಕಾನೂನಿಗೆ ಅತೀತರಲ್ಲ. ಇವರನ್ನು ಸಿದ್ಧರಾಮಯ್ಯನವರಂಥ ಸಮಾಜವಾದಿ ರಕ್ಷಿಸಿದರು ಎನ್ನುವುದು ನಂಬಲರ್ಹ ಸುದ್ದಿಯೂ ಅಲ್ಲ. ಆದರೆ ಅದಕ್ಕೆ ದಾಖಲೆಗಳಿವೆ. ಸಿದ್ಧರಾಮಯ್ಯ ಯಾವ ಜಾತಿ, ಧರ್ಮ,ಮತಗಳ ಸಂಕುಚಿತತೆಗೆ ಸಿಲುಕದ ಸಿಡುಕಿನ ಸಮಾಜವಾದಿ. ಅಂಥವರನ್ನು ಮನುವಾದಿಗಳು ಬಳಸಿಕೊಳ್ಳುತ್ತಾರೆ ಎನ್ನುವುದರಲ್ಲಿ ಮನುವಾದಿಗಳ ಸಮಯಸಾಧಕತನ,ಹಿಪೊಕ್ರಶಿ ಕಾಣಬಹುದು. ಕೆಲವು ಸಂದರ್ಭಗಳಲ್ಲಿ ಇದು ಸಿದ್ಧರಾಮಯ್ಯನವರ ಹೃದಯವೈಶಾಲ್ಯ,ಉದಾರತೆ ಕೂಡಾ ಎನ್ನಬಹುದು! ಆದರೆ ಈಗ ರಾಜ್ಯದ ರಾಜಕೀಯ ವಿದ್ಯಮಾನ, ಅವಕಾಶ, ಅಧಿಕಾರಗಳ ಹಿನ್ನೆಲೆಯೊಂದಿಗೆ ಚರ್ಚಿಸುವುದಾದರೆ ಈ ನೆಲಮೂಲದ ಭಾರತೀಯ ಬಹುಸಂಖ್ಯಾತರ ಶೋಷಕರು, ವಿರೋಧಿಗಳಾದ ಮನುವಾದಿಗಳು ರಾಜ್ಯಮಟ್ಟದಲ್ಲಿ ಈಡಿಗರು ಸೇರಿದಂತೆ ಎಲ್ಲಾ ಅಹಿಂದ್ ಗಳನ್ನು ಹುಡುಹುಡುಕಿ ವಿರೋಧ, ವಿಮರ್ಶೆ, ಟೀಕೆ ಮಾಡುವ ಸಂದರ್ಭದಲ್ಲಿ ಮತಾಂಧ ಮೋದಿ ಪರಿವಾರದ ಆಪ್ತರಾದ ಈ ಗುಂಪನ್ನು ಸಿದ್ಧರಾಮಯ್ಯ ಬೆಂಬಲಿಸುವ ಮೂಲಕ ಯಾವ ಸಂದೇಶ ಕೊಡಲು ಹೊರಟಿದ್ದಾರೆ ಎನ್ನುವ ಪ್ರಶ್ನೆ ಎದ್ದಿದೆ.

ಮನುವಾದಿಗಳು ಅಹಿಂದ್‌ ವಿರೋಧಿಗಳು ಅವರು ಹರಿಪ್ರಸಾದ್‌ ರಂಥ ಸೈದ್ದಾಂತಿಕ ಬದ್ದತೆಯ ಕಟ್ಟರ್‌ ಕಾಂಗ್ರೆಸ್ಸಿಗರನ್ನು ವಿರೋಧಿಸುವ ಸಂದರ್ಭದಲ್ಲಿ ಅವರ ವಿರೋಧ ಕಾಂಗ್ರೆಸ್‌ ಮತ್ತು ಸೋನಿಯಾ, ರಾಹುಲ್‌ ರತ್ತ ಎನ್ನುವುದು ಸ್ಪಸ್ಟ. ಸಿದ್ಧರಾಮಯ್ಯ ಮನುವಾದಿಗಳನ್ನು ಓಲೈಸುತ್ತಾ, ಹೋರಿಸ್ವಾಮಿಯಂಥವರನ್ನು ರಕ್ಷಿಸುತ್ತಾ ಯಾವ ಕಾಂಗ್ರೆಸ್‌, ಜಾತ್ಯಾತೀತತೆ ಕಟ್ಟಬಲ್ಲರು ಎನ್ನುವುದು ಪ್ರಶ್ನೆ?

ಭಾರತದ ಬಹುಸಂಖ್ಯಾತರ ಬೆವರನ್ನು ನಿಂದಿಸುವ ಮತೀಯವಾದಿ ಮನುವಾದಿ ಸಮಯಸಾಧಕರು ಸಿದ್ಧರಾಮಯ್ಯನಂಥವರನ್ನೂ ಬಳಸಿಕೊಂಡು ತಮ್ಮ ದುಷ್ಟಪರಿವಾರವನ್ನು ರಕ್ಷಿಸತೊಡಗಿದರೆ ಬೇಲಿಯೇ ಎದ್ದು ಹೊಲ ಮೇದಂತಾಗುವುದಿಲ್ಲವೆ? ನಮ್ಮ ನೆಚ್ಚಿನ ಸಿದ್ಧರಾಮಣ್ಣ , ಕಾಂಗ್ರೆಸ್‌, ಭಾರತೀಯ ಬಹುಸಂಖ್ಯಾತ ಮೂಲನಿವಾಸಿ ಅಹಿಂದ್‌ ವಿರೋಧಿಗಳೂ, ಸನಾತನ ವೈದಿಕ ವಂಚಕರೂ ಆದ ಮನುವಾದಿ ಪರಿವಾರ ನಿಮಗೂ ಎರಡು ಬಗೆಯುವ ಅವಕಾಶವಾದಿ ದೇಶದ್ರೋಹಿಗಳ ಗುಂಪು ಎನ್ನುವುದನ್ನು ನಿಮಗೆ ಮತ್ತೊಮ್ಮೆ ನೆನಪಿಸುವ ಕೆಲಸವನ್ನು ಈಗ ನಿಮಗೆ ಟೀಕಾಕಾರರಾದವರು ಮಾಡುತಿದ್ದಾರೆ ಎನ್ನಬಹುದಷ್ಟೇ….

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *