


ಇಲಾಖೆ, ಹುದ್ದೆಗಳ ವ್ಯತ್ಯಾಸ ಮಾಡದೆ ಎಲ್ಲಾ ಸರ್ಕಾರಿ ನೌಕರರು ಪ್ರವಾಹ ನಿರ್ವಹಣೆಯಲ್ಲಿ ಕೈಜೋಡಿಸಲು ಶಾಸಕ ಭೀಮಣ್ಣ ನಾಯ್ಕ ಆದೇಶಿಸಿದರು. ಸಿದ್ಧಾಪುರ ತಹಸಿಲ್ಧಾರ ಕಛೇರಿಯಲ್ಲಿ ಪ್ರವಾಹ ನಿರ್ವಹಣೆ ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು ಎಲ್ಲಾ ಅಧಿಕಾರಿಗಳು,ನೌಕರರು ತಮ್ಮ ಸೇವೆಯ ಸ್ಥಳದಲ್ಲೇ ಇರಬೇಕು. ಆಯಾ ಇಲಾಖೆಗಳು ತಮಗೆ ಸಂಬಂಧಿಸಿದ ಪ್ರವಾದ ನಿರ್ವಹಣೆ, ವರದಿ ಒಪ್ಪಿಸುವ ಕೆಲಸ ಮಾಡಬೇಕು ರೈತರು, ಜನಸಾಮಾನ್ಯರು ಯಾರಿಗೂ ಪ್ರವಾಹದಿಂದ ತೊಂದರೆಯಾಗದಂತೆ ಸ್ಪಂದಿಸಬೇಕು ಎಂದರು.
ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಯಾವುದೇ ಸರ್ಕಾರಿ ಯೋಜನೆಯ ಫಲಾನುಭವಿಗಳನ್ನು ಹುಡುಕಿ ಅವರಿಗೆ ನೆರವಾಗುವುದು ತಾಲೂಕಾ ಆಡಳಿತದ ಜವಾಬ್ಧಾರಿ ಶಿರಸಿ-ಸಿದ್ಧಾಪುರ ಕ್ಷೇತ್ರದಲ್ಲಿ ಹೆಚ್ಚಿನ ಜನರಿಗೆ ಈ ಯೋಜನೆಯ ಲಾಭ ದೊರೆಯುವಂತೆ ನೌಕರವರ್ಗ ಸಹಕರಿಸಬೇಕು ಎಂದು ಮನವಿ ಮಾಡಿದರು.
ಮಳೆ,ಅನಾಹುತ,ಪ್ರವಾಹಗಳಿಂದ ಹಾನಿಗೊಳಗಾಗುವ ಮನೆ, ಬೆಳೆ ಗಳಿಗೆ ನೀಡುವ ಪರಿಹಾರ ಅತ್ಯಲ್ಪವಾಗಿದ್ದು ಬಾಧಿತರಿಗೆ ಹೆಚ್ಚಿನ ಪರಿಹಾರ ದೊರಕಿಸುವ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು.-ಭೀಮಣ್ಣ ನಾಯ್ಕ
