

ಸುಮಾರು ಎರಡು ತಿಂಗಳ ಕೆಳಗೆ ಮಣಿಪುರದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತೆ. ಮಹಿಳೆಯೊಬ್ಬಳ ಮೃತ ದೇಹವನ್ನು ಪ್ಲಾಸ್ಟಿಕ್ ಶೀಟ್ ಒಂದರಲ್ಲಿ ಸುತ್ತಿ ಬೀದಿಗೆಸೆದಿರುವುದು ಆ ವಿಡಿಯೋದಲ್ಲಿ ಕಾಣಸಿಗುತ್ತದೆ. ಚೂರಚಂದ್ ಪುರದ ಮೇತಿ ಜನಾಂಗಕ್ಕೆ ಸೇರಿದ, ನರ್ಸಿಂಗ್ ಓದುತ್ತಿದ್ದ ಹೆಣ್ಣು ಮಗಳ ಮೃತದೇಹವದು ಎಂಬ ಸುಳ್ಳು ಸುದ್ದಿ ಎಲ್ಲೆಡೆ ಹರಿದಾಡುತ್ತದೆ. ಕುಕಿ ಜನಾಂಗದ ಹೆಯ ಕೃತ್ಯವಿದು ಎಂದು ಮೇತಿ ಜನ ರೊಚ್ಚಿಗೇಳುತ್ತಾರೆ.


ಎಂಟು ನೂರು ಮೇತಿಗಳು ಕುಕಿ ಹಳ್ಳಿಗೆ ಲಗ್ಗೆಯಿಡುತ್ತಾರೆ. ಹಳ್ಳಿಯ ಒಂದು ಮನೆಯನ್ನ ಸುತ್ತುವರೆದು ಮನೆಗೆ ನುಗ್ಗುತ್ತಾರೆ. ಅಂದು ಮನೆಯಲ್ಲಿದ್ದವರು ಇಬ್ಬರು ಐವತ್ತರ ಆಸುಪಾಸಿನ ಮಹಿಳೆಯರು, 56 ವರ್ಷದ ತಂದೆ,18ವರ್ಷದ ಮಗ, ಮತ್ತು 21 ವಯಸ್ಸಿನ ಮಗಳು. ವರದಿಗಳ ಪ್ರಕಾರ ಪೊಲೀಸರು ಆ ಐವರನ್ನ ರಕ್ಷಿಸಿ ತನ್ನ ಕಸ್ಟಡಿಗೆ ತೆಗೆದುಕೊಂಡರೂ ರೊಚ್ಚಿಗೆದ್ದ ಜನ ಐವರನ್ನ ಮತ್ತೆ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ!
ನಂತರ ಹೆಣ್ಣು ಮಕ್ಕಳಿಗೆ ಬೆತ್ತಲಾಗಲು ಆದೇಶ ನೀಡಲಾಗಿದೆ. ಬೆತ್ತಲಾಗದಿದ್ದರೆ ಅಲ್ಲೇ ಕೊಚ್ಚಿ ಕೊಲ್ಲಲಾಗುವುದು ಎಂದು ಧಮಕಿ ಹಾಕಲಾಗಿದೆ. ಇದನ್ನ ವಿರೋಧಿಸಿದ ತಂದೆ ಮತ್ತು ಮಗನನ್ನ ಅಲ್ಲೇ ಇರಿದು ಕೊಲ್ಲಲಾಗಿದೆ. ಬೀದಿಗಳಲ್ಲಿ ಮೂವರನ್ನು ನಗ್ನವಾಗಿ ನಡೆಸಿಕೊಂಡು ಹೋಗುವಾಗ ಅವರೊಡನೆ ಅಸಭ್ಯವಾಗಿ ನಡೆದುಕೊಳ್ಳಲಾಗಿದೆ. ಕೊನೆಗೆ 21ವರ್ಷದ ಹುಡುಗಿಯ ಮೇಲೆ ನಿರಂತರ ಅತ್ಯಾಚಾರವೆಸಗಲಾಗಿದೆ. ಇದಾದ ನಂತರ ಈ ಸುದ್ದಿ ಮಣಿಪುರದಲ್ಲೇ ಮಣ್ಣಾಗಿ ಹೋಗಿದೆ. ಯಾರನ್ನೂ ಅಪರಾಧಿ ಎಂದು ಹೆಸರಿಸದೆ Zero FIR ಫೈಲ್ ಮಾಡಲಾಗಿದೆ.
ಬಹುಶಃ “ದ ಪ್ರಿಂಟ್” ದಿಟ್ಟ ವರದಿಗಾರ್ತಿ ಸೋನಾಲ್ ಮಥಾರು ಇಂಫಾಲ್ ನಿರಾಶ್ರಿತ ಶಿಬಿರಗಳಿಗೆ ಹೋಗಿ ತನಿಖೆ ಮಾಡದಿದ್ದರೆ ಈ ಧಾರುಣ ಕತೆ ಸಮಾಧಿಯಾಗಿರುತಿತ್ತು. ಮಣಿಪುರದಲ್ಲಿ ಏನು ನಡೆದಿಲ್ಲವಂಬಂತೆ ಇಡೀ ಭಾರತ ಮುಂದೆ ಸಾಗಿರುತ್ತಿತ್ತು. ಮಣಿಪುರಕ್ಕೆ ಹೋದ ಸೋನಾಲ್ ಮಥಾರು ಮಾಡಿದ ಮೊದಲ ಕೆಲಸ ಪ್ಲಾಸ್ಟಿಕ್ ಶೀಟ್ ನಲ್ಲಿದ್ದ ಮೃತದೇಹದ ಗುರುತು ಪತ್ತೆ ಹಚ್ಚಿದ್ದು. ವಾಸ್ತವದಲ್ಲಿ 2022ರ ನವೆಂಬರ್ 22ರಂದು ದೆಹಲಿಯಲ್ಲಿ ಪೋಷಕರಿಂದಲೆ ಬರ್ಬರವಾಗಿ “ಮರ್ಯಾದಾ” ಹತ್ಯೆಗೆ ಬಲಿಯಾದ ಆಯುಷಿ ಚೌಧರಿಯ ಮೃತ ದೇಹ ಅದಾಗಿತ್ತು.
ತುಂಬಾ ವ್ಯವಸ್ಥಿತವಾಗಿ ಈ fake ಚಿತ್ರ/ವಿಡಿಯೋವನ್ನ ಹರಿಯಬಿಡಲಾಗಿತ್ತು. ಹೆಣ್ಣು ಮಕ್ಕಳ ವಿಷಯವನ್ನ ಕಾರಣವಾಗಿಟ್ಟುಕೊಂಡು ಇಡೀ ಸಮುದಾಯವನ್ನ ಉದ್ವೇಗಗೊಳಿಸಬಹುದು ಎಂಬ ಯೋಜನೆ ಅಲ್ಲಿ ಸಫಲವಾಗಿತ್ತು. ಸೋನಾಲ್ ಮಥಾರು ಸುಳ್ಳು ಸುದ್ದಿಯನ್ನ ಬಯಲಿಗೆಳೆದಳು, ಮಣ್ಣಾಗುತ್ತಿದ್ದ ಹೇಯ ಕೃತ್ಯವನ್ನ ಜನರ ಮುಂದಿಟ್ಟಳು…
ಕಣ್ಣ ಮುಂದೆಯೇ ತಂದೆ ತಮ್ಮನನ್ನ ಕಳೆದುಕೊಂಡ, ವಿವರಿಸಲಾಗದ ಯಾತನೆಗೆ ಒಳಗಾದ ಇಪ್ಪತ್ತೊಂದು ವರ್ಷದ ಹುಡುಗಿಗೆ ಮರುಗುವ ಹೃದಯವಿದ್ದದ್ದು ಬಹುಶಃ ಸೋನಲ್ ಮಥಾರುಗೆ ಮಾತ್ರ ಅನ್ನಿಸುತ್ತೆ.
ಇನ್ನೊಂದೆಡೆ ತಮ್ಮ ಹವಾನಿಯಂತ್ರಿತ ಕೋಣೆಗಳಲ್ಲಿ ಕೂತು ಪತ್ರಿಕಾ “ಉದ್ಯಮ” ನಡೆಸುವ ಸೂಟುಧಾರಿಗಳ ಸುದ್ದಿವಾಹಿನಿಗಳಲ್ಲಿ ಈ ದುಷಕೃತ್ಯದ ಸುಳಿವು ಕೂಡ ಇರಲಿಲ್ಲ. ಅವರೆಲ್ಲ ಕೋಮು ದ್ವೇಷದ ಹೊಸ ಕತೆಯನ್ನ ಹುಟ್ಟಿಹಾಕುವುದರಲ್ಲಿ ಎಂದಿನಂತೆ ತಲ್ಲೀನರಾಗಿದ್ದರು. ಭಾರತ ಎಂದಿನಂತೆ ಬೆಳಗುತ್ತಿದೆ…
– Harish Gangadhar
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
