

ಅಣಬೆ ಎಂದರೆ ಯಾರಿಗಿಷ್ಟ ಇಲ್ಲ ಹೇಳಿ, ಈಗ ಕಾಡು ಅಣಬೆ ಸಿಗುವ ಸಮಯ ಅಣಬೆ ಪಲ್ಯ, ಮುಂಡಿ, ಅಣಬೆ ಮಂಚೂರಿ ಮಾಡಿ ಸವಿಯುವವರು ಅಣಬೆ ಕಬಾಬ್ ಮಾಡಲು ಹಿಂದೇಟುಹಾಕುತ್ತಾರೆಯೆ?

ಮಶ್ರೂಮ್ ಕಬಾಬ್
ರುಚಿಕರವಾದ ಮಶ್ರೂಮ್ ಕಬಾಬ್ ಮಾಡುವ ವಿಧಾನ…

ಬೇಕಾಗುವ ಪದಾರ್ಥಗಳು…
- ಮಶ್ರೂಮ್ – 200 ಗ್ರಾಂ
- ಕಬಾಬ್ ಪೌಡರ್ –ಒಂದು ಪ್ಯಾಕೆಟ್
- ಶುಂಠಿ– ಬೆಳ್ಳುಳ್ಳಿ ಪೇಸ್ಟ್- 1 ಚಮಚ
- ಖಾರದಪುಡಿ –ಅರ್ಧ ಚಮಚ
- ಚಿಕನ್ ಮಸಾಲ– ಅರ್ಧ ಚಮಚ
- ಮೊಟ್ಟೆ –ಒಂದು
- ಉಪ್ಪು- ರುಚಿಗೆ ತಕ್ಕಷ್ಟು
- ಎಣ್ಣೆ – ಸ್ವಲ್ಪ
ಮಾಡುವ ವಿಧಾನ…
- ಮಶ್ರೂಮ್ ಗಳನ್ನು ಚೆನ್ನಾಗಿ ತೊಳೆದುಕೊಳ್ಳಿ. ನಂತರ ಇದಕ್ಕೆ ಕಬಾಬ್ ಪೌಡರ್, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಖಾರದಪುಡಿ, ಚಿಕನ್ ಮಸಾಲೆ ಪುಡಿ, ಮೊಟ್ಟೆ, ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
- ಮಸಾಲೆ ಹಿಡಿಯುವವರೆಗೆ ಕೈಯಾಡಿಸಿ. 10ರಿಂದ 15 ನಿಮಿಷಗಳ ಕಾಲ ನೆನೆಯಲು ಬಿಡಿ.
- ನಂತರ ಪಾತ್ರೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ.
- ಅದಕ್ಕೆ ನೆನೆಸಿಟ್ಟಿದ್ದ ಮಶ್ರೂಮ್ ಹಾಕಿ. ಅದು ಕೆಂಪು ಬಣ್ಣಕ್ಕೆ ತಿರುಗುವವರೆಗೂ ಬೇಯಿಸಿ. ಇದೀಗ ಬಿಸಿ ಬಿಸಿಯಾದ ಮಶ್ರೂಮ್ ಕಬಾಬ್ ಸವಿಯಲು ಸಿದ್ಧ. (kpc)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
