ಪತ್ರಿಕೋದ್ಯಮದ ಅವನತಿ & ಸಾಮಾಜಿಕ ಮಾಧ್ಯಮದ ನಾಗಾಲೋಟ!

ಕತೆಗಾರ್ತಿ ಭಾನು ಮುಸ್ತಾಕ್‌ ರಿಗೆ ಬೂಕರ್‌ ಒಲಿಯುವ ಮೊದಲು ಅವರನ್ನು ಕನ್ನಡ ಸಾಹಿತ್ಯ ಲೋಕ ಸರಿಯಾಗಿ ಗುರುತಿಸಿರಲಿಲ್ಲ.

ಲಂಕೇಶ್‌ ತಮ್ಮ ಅಗಾಧ ಪ್ರತಿಭೆಯ ನಡುವೆ ಪತ್ರಿಕಾಲೋಕ, ಸಾಹಿತ್ಯ ಕ್ಷೇತ್ರದ ಪ್ರಶಸ್ತಿ, ಮನ್ನಣೆಗಳಿಂದ ದೂರ ಉಳಿದಿದ್ದರು. ಇವರ ನಡುವೆ ನೂರಾರು ಜನರ ಸಹಜವಾಗಿ, ಉದ್ದೇಶಪೂರ್ವಕವಾಗಿ ಈ ಪಟ್ಟಭದ್ರರ ಉಪೇಕ್ಷೆಗೆ ಒಳಗಾಗಿದ್ದಿದೆ.

ವಿಶ್ವ ಪತ್ರಿಕಾ ಕ್ಷೇತ್ರ ಪ್ರಾರಂಭವಾದದ್ದು ಯಾವಾಗ ? ಎಂದರೆ ಅದು ಇತಿಹಾಸದ ಸಂಶೋಧಕರ ಮೂಗಿನ ನೇರದಸತ್ಯವಾಗುವ ಅಪಾಯದಿಂದ ಪಾರಾಗಲು ಸಾಧ್ಯವೇ ಇಲ್ಲ.

ಪುರಾತನ ಜನರು ಕಾಡಿನಲ್ಲಿ ಕೊಂದು ತಿನ್ನಬಹುದಾದ ಪ್ರಾಣಿಗಳು ಯಾವವು? ಎಂದು ಕಲ್ಲಿನ ಮೇಲೆ ಬಿಡಿಸಿದ ಚಿತ್ರಗಳಿಂದ ಮಾಹಿತಿಯುಗ, ಮಾಧ್ಯಮ ಅಥವಾ ಪತ್ರಿಕೋದ್ಯಮ! ಪ್ರಾರಂಭವಾಯಿತು ಎನ್ನಲಾಗುತ್ತದೆ.

ಮನುಷ್ಯರ ನಡುವೆ ಆಹಾರ, ವಿಹಾರ, ವಿಚಾರ,ಯಾವುದೂ ಭಿನ್ನವಾಗಿಲ್ಲದ ಸಮಯದಲ್ಲಿ ಮನುಷ್ಯ ಮಾಹಿತಿಗಾಗಿ ಚಿತ್ರ ಅವಲಂಬಿಸಿದ್ದ ನಂತರ ಮೌಕಿಕ ಸಂವಹನ ಪ್ರಾರಂಭವಾಯ್ತು, ನಂತರ ದೇವತೆಗಳಿಗೆ ನಾರದ ಪತ್ರಕರ್ತನಾಗಿದ್ದ! ಸಂಜಯ ದೃತರಾಷ್ಟ್ರನಿಗೆ ವರದಿಗಾರನಾಗಿದ್ದ ಹೀಗೆ ಮಾಧ್ಯಮ ಚರಿತ್ರೆ ಪ್ರಾರಂಭವಾಗಿ ಈಗ ಸಾಮಾಜಿಕ ಮಾಧ್ಯಮದವರೆಗೆ ಬಂದು ಬೆಳೆದು ನಿಂತಿದೆ.

ಪಾಶ್ಚಿಮಾತ್ಯ ರಾಷ್ಟ್ರಗಳಂತೆ ಭಾರತದಲ್ಲೂ ಪತ್ರಿಕೋದ್ಯಮ ಅವನತಿಯ ಅಂಚಿನಲ್ಲಿದೆ. ಈ ಕಾಲದಲ್ಲಿ ಮಾಹಿತಿಗಾಗಿ ನಿಯತಕಾಲಿಕೆ ಓದುವವರ ಸಂಖ್ಯೆ ಶೇ. ೫ ಪ್ರತಿಶತವನ್ನೂ ದಾಟುತ್ತಿಲ್ಲ. ಈ ಕಾಲದಲ್ಲೂ ಪತ್ರಿಕೆ, ಪತ್ರಿಕೋದ್ಯಮ ಅವಶ್ಯ, ಅನಿವಾರ್ಯ ಎನ್ನುವವರು. ಬೇರೆ ಭಾಷೆ ಬಾರದೆ ಕನ್ನಡಾಭಿಮಾನಿಗಳಂತಾಗುವುದರಲ್ಲಿ ಆಶ್ಚರ್ಯವಿಲ್ಲ.

ಒಂದು ಸಂಸ್ಥೆಯ ವ್ಯಕ್ತಿಯೊಬ್ಬರು ಮಾಧ್ಯಮಗಳ ಬಗ್ಗೆ ಮಾತನಾಡುತ್ತಾ ಸಾಮಾಜಿಕ ಮಾಧ್ಯಮಗಳು ʼನೋ ಯೂಜ್ʼ ಎಂದರು. ಈ ಕಾಲದಲ್ಲಿ ಸಾಮಾಜಿಕ ಮಾಧ್ಯಮಗಳು ನೋ ಯೂಜ್‌ ಎನ್ನುವವರು ಯಾವ ಕಾಲದ ಮನಸ್ಥಿತಿಯವರು, ಎಷ್ಟು ಹಿಂದುಳಿದವರು ಎನ್ನುವುದಕ್ಕೆ ಅವರ ಮಾತೇ ಸಾಕ್ಷಿ. ಅವರಿಗೆ ನಮ್ಮೂರಿನ ಉದಾಹರಣೆಯನ್ನೇ ನೀಡಿದೆ. ಅವಕ್ಕಾದ ಅವರು ಹೌದಾ ಹಾಗಾದ್ರೆ ನಾವು ಈ ಕಾಲಕ್ಕೆ ಲಾಯಕ್ಕಿಲ್ಲದವರು ! ಎಂದು ಒಪ್ಪಿಕೊಂಡರು..

ಪತ್ರಕರ್ತರ ಧೂರ್ತ ರಾಜಕಾರಣ, ಪಕ್ಷಪಾತ, ವೈದಿಕ ಕುಟಿಲತೆಗಳ ನಡುವೆ ಈಗಿನ ವಿಚಾರ ನಿಮಗೂ ತಲುಪಲಿ ಎಂದು ಈ ವಾಸ್ತವ ಬರೆಯುತಿದ್ದೇನೆ. ನಾವಿರುವ ಒಂದು ಲಕ್ಷ ಜನಸಂಖ್ಯೆ ದಾಟದ ಸಿದ್ಧಾಪುರ ಎನ್ನುವ ತಾಲೂಕು ಕೇಂದ್ರದಿಂದ ಇಡೀ ತಾಲೂಕಿಗೆ ಐದು ಸಾವಿರಗಳಷ್ಟು ಪತ್ರಿಕೆಗಳು ತಲುಪುತಿದ್ದವು. ಈಗ ಈ ಸಂಖ್ಯೆ ೮೫೦ ಪ್ರತಿಗಳಿಗೆ ಇಳಿದಿದೆ. ಯಾವ ಪತ್ರಿಕೆಯೂ ನೂರು ಸಂಖ್ಯೆಯಲ್ಲಿ ಮಾರಾಟವಾಗದ ನಮ್ಮ ಊರಲ್ಲಿ ಒಂದು ಡಜನ್‌ ಗೂ ಮಿಕ್ಕಿ ಪತ್ರಿಕೆಗಳಿಗೆ ವರದಿಮಾಡುವ ಅರೆಕಾಲಿಕ, ವೇತನರಹಿತ ಪತ್ರಕರ್ತರಿದ್ದಾರೆ. ಈ ಪತ್ರಕರ್ತರ ಸಂಘ ಸಂಘ-ಸಂಸ್ಥೆಗಳ ಮುಖ್ಯಸ್ಥರಿಗೆ ಸಾಮಾಜಿಕ ಜಾಲತಾಣ ನೋ ಯೂಜ್‌ ಎಂದು ಕಿವಿಊದುವ ಹಿಂದೆ ಅವರ ಅಜ್ಞಾನ, ಅವಿವೇಕಗಳಿರುತ್ತವೆ. ಇದಕ್ಕೆ ಎದುರಾಗಿ ಒಂದು ಸಾಮಾನ್ಯ ಮಾಧ್ಯಮ ಘಟಕದ ಸಾಮಾಜಿಕ ಜಾಲತಾಣ ದಿನ ಒಂದಕ್ಕೆ ಲಕ್ಷಾಂತರ ಓದುಗರು, ನೋಡುಗರನ್ನು ತಲುಪುತ್ತದೆಂದರೆ…… ಬರೀ ಒಂದು ದಶಕದಲ್ಲಿ ಸಾಂಪ್ರದಾಯಿಕ ಪತ್ರಿಕೋದ್ಯಮದ ಎದುರು ಸಾಮಾಜಿಕ ಮಾಧ್ಯಮ ನೂರಾರು ಪಟ್ಟು ವಿಸ್ತಾರ, ಪರಿಣಾಮಕಾರಿ ಆಗಿದೆಎಂದರ್ಥವಲ್ಲವೆ?

ಹೀಗೆ ಮಾಧ್ಯಮ ಕ್ಷೇತ್ರ ಬೆಳೆಯುತ್ತಿರುವ ಪರಿ ವಯಸ್ಸು ದಾಟಿದ, ಮೂವತ್ತು ನಾಲ್ವತ್ತರ ಹರೆಯಕ್ಕೆ ೯೦ ರಂತಾಡುವ ತಲೆಮಾಸಿದ ಹಳೆ ತಲೆಗಳಿಗೆ, ಅನ್ಯ ಆಯ್ಕೆಗಳೇ ಇಲ್ಲದ ಅಸಮರ್ಥ ಹೊಸ ತಲೆಗಳಿಗೆ ಅರ್ಥವಾಗದಿದ್ದರೂ ಈ ಕಾಲಕ್ಕೆ ಸಲ್ಲದ ಇಂಥ ಜನರನ್ನು ಹಿಂದೆ ಬಿಟ್ಟು ನಾಗಾಲೋಟದಲ್ಲಿ ಸಾಗಿರುತ್ತದೆ. ಎಲ್ಲರಿಗೂ ಮಾಧ್ಯಮ ದಿನದ ಶುಭ ಆಶಯಗಳು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *