ಇಂದು ಬೆಳಿಗ್ಗಿನ ವೇಳೆ ಸಿದ್ಧಾಪುರ ತ್ಯಾಗಲಿ ನಾಣಿಕಟ್ಟಾ ಶಾಲೆಯ ಬಳಿ ನಡೆದ ಅಪಘಾತದಲ್ಲಿ ತೀವೃವಾಗಿ ಗಾಯಗೊಂಡ ಮೂವರನ್ನು ಆಸ್ಫತ್ರೆಗೆ ರವಾನಿಸಲಾಗಿದೆ.
ಸಿದ್ಧಾಪುರದಿಂದ ಶಿರಸಿ ಮಾರ್ಗವಾಗಿ ಬೈಕ್ ನಲ್ಲಿ ತೆರಳುತಿದ್ದ ಮೂವರು ನಾಣಿಕಟ್ಟಾ ತ್ಯಾಗಲಿ ಬಳಿಯ ಶಾಲೆಯ ಎದುರಿನಲ್ಲಿ ತಮಗೆ ಎದುರಾಗಿ ಬರುತಿದ್ದ ಗೂಡ್ಸ್ ಗಾಡಿಗೆ ಡಿಕ್ಕಿ ಮಾಡಿದ್ದಾರೆ. ತೀವೃವಾಗಿ ಗಾಯಗೊಂಡಿದ್ದ ಇಬ್ಬರನ್ನು ಶಿರಸಿಸರ್ಕಾರಿ ಆಸ್ಫತ್ರೆಗೆ ರವಾನಿಸಲಾಗಿದೆ. ಇವರೊಂದಿಗಿದ್ದ ಇನ್ನೊಬ್ಬನನ್ನು ಸಿದ್ಧಾಪುರದ ಸರ್ಕಾರಿ ಆಸ್ಫತ್ರೆಯಲ್ಲಿ ಚಿಕಿತ್ಸೆ ನೀಡಿ ಶಿವಮೊಗ್ಗಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಶಿರಸಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರನ್ನು ಹಾವೇರಿ ಜಿಲ್ಲೆಯ ಬಂಕಾಪುರದ ಉಮೇಶ್ ಬಂಡಿ ಮಾದರ್ ಮತ್ತು ನಾಗರಾಜ್ ಮಾದರ್ ಎಂದು ಗುರುತಿಸಲಾಗಿದೆ. ಸಿದ್ದಾಪುರದಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ರವಾನಿಸಲಾದ ವ್ಯಕ್ತಿಯನ್ನು ಶಿರಸಿಯ ಸಲ್ಮಾನ್ ಎನ್ನಲಾಗಿದೆ. ಸಿದ್ಧಾಪುರದಲ್ಲಿ ಪ್ರಕರಣ ದಾಖಲಾಗಿದೆ.