


ಕಾಂಗ್ರೆಸ್ ಮಹಿಳಾ ಮುಖಂಡರು ಮತ್ತು ಸ್ತ್ರೀಯರ ಬಗ್ಗೆ ಅವಹೇಳನಾ ಕಾರಿ ಪೋಸ್ಟ್ ಪ್ರಕಟಿಸಿರುವ ಬಗ್ಗೆ ವಿಶ್ವವಾಣಿ ದಿನಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ವಿರುದ್ಧ ಶಿರಸಿ ನಗರ ಠಾಣೆಯಲ್ಲಿ ಪೊಲೀಸ್ ದೂರು ದಾಖಲಾಗಿದೆ.
ಶಿರಸಿಯ ನ್ಯಾಯವಾದಿ ಎಂ.ಎನ್. ನಾಯ್ಕ ಅಬ್ರಿಮನೆ ದೂರು ನೀಡಿದ್ದು ವಿಶ್ವೇಶ್ವರ ಭಟ್ ಕಾಂಗ್ರೆಸ್ ಮಹಿಳಾ ಮುಖಂಡರು ಮತ್ತು ಸ್ತ್ರೀಯರ ಬಗ್ಗೆ ಅಪಮಾನಕಾರಿ,ಮಾನಹಾನಿಕಾರಿ ಪೊಸ್ಟ್ ಒಂದನ್ನು ಪ್ರಕಟಿಸಿದ್ದು ಅದರಿಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ ಕರ್ ಜೊತೆಗೆ ಕಾಂಗ್ರೆಸ್ ನ ಕೆಲವು ಮುಖಂಡೆಯರಿಗೆ ಅವಮಾನವಾಗಿದೆ. ಸ್ತ್ರೀಯರ ಮಾನ,ಗೌರವಕ್ಕೆ ಧಕ್ಕೆ ತರುವ ಈ ಕೃತ್ಯದ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ದೂರಿನಲ್ಲಿ ಕೋರಿದ್ದಾರೆ.



